ಈ ನರಸಿಂಹ ಸ್ವಾಮಿಗೆ ಕೂದಲಿಗೆ ಚರ್ಮವಿದೆ ಮನುಷ್ಯರಂತೆ ಇರುವ ಈ ದೇವರ ವಿಗ್ರಹದ ಚಮತ್ಕಾರ ನೋಡಿ - Karnataka's Best News Portal

ಈ ನರಸಿಂಹ ಸ್ವಾಮಿಗೆ ಕೂದಲಿಗೆ ಚರ್ಮವಿದೆ ಮನುಷ್ಯರಂತೆ ಇರುವ ಈ ದೇವರ ವಿಗ್ರಹದ ಚಮತ್ಕಾರ ನೋಡಿ

ನರಸಿಂಹ ಸ್ವಾಮಿಗೆ ಮನುಷ್ಯರಂತೆ ಚರ್ಮ ಕೂದಲಿದೆ ನಿಮ್ಮ ಕಣ್ಣಾರೆ ನೋಡಬಹುದು ಮುಟ್ಟಬಹುದು..!!
ಸಾಮಾನ್ಯವಾಗಿ ದೇವಾಲಯದಲ್ಲಿರುವ ವಿಗ್ರಹಗಳು ಹಾಗೂ ಶಿಲೆಗಳುಪಂಚಲೋಹದಿಂದಲೋ,ಕಲ್ಲಿನಿಂದಲೋ,ಸಾಲಿಗ್ರಾಮಶಿಲೆಯಿಂಲೋ ಇರುವುದನ್ನು ನೀವೆಲ್ಲರೂ ನೋಡಿರುತ್ತೀರಾ.ಆದರೆ ಈ ದೇವಸ್ಥಾನದಲ್ಲಿ ರುವ ಶಿಲೆಯು ಮನುಷ್ಯನ ಚರ್ಮದ ರೀತಿ ಮೆತ್ತನೆ ಇದೆ.ಅಷ್ಟೇ ಅಲ್ಲದೆ ಮನುಷ್ಯರ ಚರ್ಮದ ಮೇಲೆ ಇರುವ ಕೂದಲಿನ ರೀತಿಯು ಕೂಡ ಇದೆ!

ಹಾಗಾದರೆ ಈ ದೇವಸ್ಥಾನ ಯಾವುದು? ಈ ದೇವಸ್ಥಾನ ಇರುವುದಾದರೂ ಎಲ್ಲಿ?ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.ತೆಲಂಗಾಣ ರಾಜ್ಯದ ತರಂಗಲ್ ಊರಿಂದ ಸುಮಾರು 130 ಕಿಲೋಮೀಟರ್ ಪ್ರಯಾಣ ಮಾಡಿದರೆ ಮಲ್ಲೂರು ಗ್ರಾಮ ಸಿಗುತ್ತದೆ.ಮಲ್ಲೂರು ಗ್ರಾಮದಿಂದ ಸುಮಾರು 4 ಕಿಲೋ ಮೀಟರ್ ದೂರ ಸಣ್ಣ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಹೇಮಾಚಲ ಲಕ್ಷ್ಮೀ ನರಸಿಂಹ ದೇವಾಲಯ.


ಈ ದೇವಾಲಯ ಅದ್ಭುತ ಹಾಗೂ ಅಚ್ಚರಿಯ ಸಂಗತಿಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ ನೆಲೆಸಿರುವ ನರಸಿಂಹಸ್ವಾಮಿ ವಿಗ್ರಹವು ಅಂದಾಜು 9 ಅಡಿಗೂ ಹೆಚ್ಚು ಎತ್ತರವಿದೆ. ಈ ದೇವಸ್ಥಾನದಲ್ಲಿರುವ ನರಸಿಂಹಸ್ವಾಮಿ ವಿಗ್ರಹವು ಯಾರಿಂದಲೂ ಕೆತ್ತಲ್ಪಟ್ಟಿಲ್ಲ ಬದಲಿಗೆ ನರಸಿಂಹ ಸ್ವಾಮಿಗಳು ಸ್ವತಹ ಕಲ್ಲಾಗಿದ್ದಾರೆ ಎನ್ನುವಂತಹ ಪುರಾವೆಗಳು ಇದೆ. ಈ ವಿಗ್ರಹದ ಚರ್ಮವು ಮನುಷ್ಯನಿಗಿಂತ ಅತ್ಯಂತ ಮೆತ್ತಗಿದ್ದು.

ಮುಟ್ಟಿದರೆ ಮನುಷ್ಯನ ಚರ್ಮವನ್ನು ಮುಟ್ಟಿದ ಹಾಗೆ ಅನುಭವ ಉಂಟಾಗುತ್ತದೆ! ಹಾಗೆ ಈ ವಿಗ್ರಹದಲ್ಲಿ ಕೂದಲು ಸಹ ಕಂಡುಬರುತ್ತದೆ! ವಿಶ್ವದ ಮೊದಲ ಮಾನವ ದೇಹ ಹೊಂದಿರುವ ವಿಗ್ರಹವೆಂದೇ ಪರಿಗಣಿಸಲಾಗಿದೆ. ದೇವಸ್ಥಾನಕ್ಕೆ ಪುಟ್ಟ ಪುಟ್ಟ ಮಕ್ಕಳು ಬಂದರೆ ನರಸಿಂಹ ವಿಗ್ರಹಗಳನ್ನು ಅವರ ಕೈಯಲ್ಲಿ ಮುಟ್ಟಿಸಲಾಗುತ್ತದೆ. ಮಕ್ಕಳು ನರಸಿಂಹಸ್ವಾಮಿಯ ವಿಗ್ರಹವನ್ನು ಮುಟ್ಟಿದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎನ್ನುವ ನಂಬಿಕೆ ಸಹ ಇದೆ.

See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ

ಹಿರಣ್ಯ ಕಷ್ಯಪು ಸಂಹಾರದ ನಂತರ ಲಕ್ಷ್ಮಿ ದೇವಿಯನ್ನು ನರಸಿಂಹ ಸ್ವಾಮಿಯವರು ಈ ಸ್ಥಳದಲ್ಲಿ ವಿವಾಹವಾದರು ಎಂದು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ. ಕಾಲ ನಂತರದಲ್ಲಿ ಭಾರದ್ವಜ ಮತ್ತು ಅಂಗೀರ ಋಷಿಮುನಿಗಳು ಈ ಸ್ಥಳಕ್ಕೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಋಷಿಮುನಿಗಳ ಮೇಲೆ ರಾಕ್ಷಸರು ದಾಳಿ ಮಾಡುತ್ತಾರಂತೆ ಈ ಋಷಿ ಮುನಿಗಳ ಮೊದಲಿನಿಂದಲೂ ಕೂಡ ನರಸಿಂಹ ಸ್ವಾಮಿಯ ಆರಾಧಕರಾಗಿರುತ್ತಾರೆ.

ಋಷಿ ಮುನಿಗಳನ್ನು ಕಾಪಾಡಲು ನರಸಿಂಹಸ್ವಾಮಿ ಪ್ರತ್ಯಕ್ಷರಾಗಿ, ರಾಕ್ಷಸನನ್ನು ಸಂಹಾರ ಮಾಡುತ್ತಾರಂತೆ ನರಸಿಂಹ ಸ್ವಾಮಿಗೆ ಇಬ್ಬರು ಋಷಿಮುನಿಗಳು ನಮ್ಮನ್ನು ನಿಮ್ಮ ಜೊತೆ ಕರೆದುಕೊಂಡು ಹೋಗಿ ಪರಮಾತ್ಮ ಎಂದು ಬೇಡಿಕೊಳ್ಳುತ್ತಾರಂತೆ, ಇವರ ಇಚ್ಛೆಯಂತೆ ಇಬ್ಬರು ಋಷಿಮುನಿಗಳು ನರಸಿಂಹ ಸ್ವಾಮಿಯ ದೇಹವನ್ನು ಸೇರಿಕೊಳ್ಳುತ್ತಾ ರಂತೆ ನಂತರ ನಿಂತಲ್ಲಿಯೇ ಶಿಲೆಯಾಗಿ ಬದಲಾಗಿದ್ದಾರೆ ಎಂದು ನರಸಿಂಹ ರಾಚಸ್ ಭಾಗ ಎರಡು ಪುರಾವೆಯಲ್ಲಿ ಉಲ್ಲೇಖಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">