ಕಾಟನ್ ಬಟ್ಟೆ ಒಗೆಯುವಾಗ ಬರಿ ಇಷ್ಟು ಮಾಡಿ ಸಾಕು ಕಾಟನ್ ಬಟ್ಟೆ ಯಾವತ್ತೂ ಹೊಸದರಂತೆ ಇರುತ್ತೆ..ಸೂಪರ್ ಟಿಪ್ಸ್ - Karnataka's Best News Portal

ಕಾಟನ್ ಬಟ್ಟೆ ಒಗೆಯುವಾಗ ಬರಿ ಇಷ್ಟು ಮಾಡಿ ಸಾಕು||ಕಾಟನ್ ಬಟ್ಟೆ ಯಾವತ್ತೂ ಹೊಸದರಂತೆ ಇರುತ್ತದೆ||
ನಾವೆಲ್ಲರೂ ಕೂಡ ಮನೆಗಳಲ್ಲಿ ಕಾಟನ್ ಬಟ್ಟೆಗಳನ್ನು ಉಪಯೋಗಿಸು ತ್ತೇವೆ ಅದರಲ್ಲಂತೂ ಬೇಸಿಗೆ ಸಮಯದಲ್ಲಿ ಕಾಟನ್ ಬಟ್ಟೆ ಇಲ್ಲದೆ ಇರಲು ಸಾಧ್ಯವಿಲ್ಲ ಏಕೆಂದರೆ ಅದನ್ನು ಹಾಕಿಕೊಂಡರೆ ಹೆಚ್ಚಾಗಿ ಶಕೆಯಾಗುವುದಿಲ್ಲ ಹಾಗೂ ಬಿಸಿಲಿಗೆ ಹೋದರೂ ಕೂಡ ಯಾವುದೇ ರೀತಿಯಾದಂತಹ ತೊಂದರೆ ಉಂಟಾಗುವುದಿಲ್ಲ ಎನ್ನುವ ಕಾರಣದಿಂದ ಹೆಚ್ಚಾಗಿ ಎಲ್ಲರೂ ಕೂಡ ಕಾಟನ್ ಬಟ್ಟೆ ಧರಿಸುತ್ತೇವೆ.

ಆದರೆ ಹೆಚ್ಚಾಗಿ ಎಲ್ಲರಿಗೂ ಕಾಟನ್ ಬಟ್ಟೆಯ ಮೇಲೆ ಇರುವಂತಹ ಒಂದು ಸಮಸ್ಯೆ ಏನು ಎಂದರೆ ಕಾಟನ್ ಬಟ್ಟೆಯನ್ನು ಹೆಚ್ಚಾಗಿ ಒಗೆದರೆ ಅದರಲ್ಲಿ ಬಣ್ಣ ಬೇಗ ಹೋಗುತ್ತದೆ,ಬೇಗ ಹಳೆಯದಾಗುತ್ತದೆ ಇದಕ್ಕೆ ಯಾವುದಾದರೂ ಒಂದು ಪರಿಹಾರ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಆದರೆ ಇಲ್ಲಿಯ ತನಕ ಹೆಚ್ಚಾಗಿ ಯಾರೂ ಕೂಡ ಈ ಒಂದಷ್ಟು ವಿಷಯದ ಬಗ್ಗೆ ಯಾರು ಕೂಡ ಹೇಳಿರುವುದಿಲ್ಲ.


ಆದರೆ ಈ ದಿನ ನಾವು ಹೇಳುವಂತಹ ಈ ಕೆಲವೊಂದು ಟಿಪ್ಸ್ ಗಳನ್ನು ನೀವು ಬಳಸುವುದರಿಂದ ಹಾಗೂ ಕಾಟನ್ ಬಟ್ಟೆಯನ್ನು ಒಗೆಯುವ ಸಮಯದಲ್ಲಿ ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮಲ್ಲಿರುವ ಕಾಟನ್ ಬಟ್ಟೆ ಎಷ್ಟು ಸಲ ಹೊಗೆದರೂ ಕೂಡ ಅದು ಹಳೆಯದಾಗುವು ದಿಲ್ಲ ಜೊತೆಗೆ ಬಣ್ಣ ಹೋಗುವುದಿಲ್ಲ ಹಾಗೂ ಹೊಸ ಬಟ್ಟೆಯಂತೆ ಕೂಡ ಇರುತ್ತದೆ.

ಹಾಗಾದರೆ ಈ ಒಂದು ವಿಧಾನವನ್ನು ಅನುಸರಿಸುವುದು ಹೇಗೆ ಕಾಟನ್ ಬಟ್ಟೆ ಒಗೆಯುವುದಕ್ಕೂ ಮುನ್ನ ಯಾವುದೆಲ್ಲ ರೀತಿಯ ವಿಧಾನಗಳನ್ನು ನಾವು ಅನುಸರಿಸಬೇಕು ಎಂಬ ಮಾಹಿತಿಯ ಬಗ್ಗೆ ನೋಡುವುದಾದರೆ. ಮೊದಲು ಒಂದು ಲೀಟರ್ ನಷ್ಟು ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಕಾನ್ಫ್ಲೋರ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ,ಆ ನೀರನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ ನಂತರ ಒಂದು ಬಕೆಟ್ ನಲ್ಲಿ ಸ್ವಲ್ಪ ತಣ್ಣೀರನ್ನು ಹಾಕಿ ಅದಕ್ಕೆ ಈ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ನಂತರ ಈ ನೀರಿನಲ್ಲಿ ನಿಮ್ಮ ಕಾಟನ್ ಬಟ್ಟೆಯನ್ನು ಹದ್ದಿ ಹಾಗೆಯೇ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಬೇಕು ಈ ರೀತಿಯಾದಂತಹ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಕಾಟನ್ ಬಟ್ಟೆ ಹಳೆಯದಾಗುವುದಿಲ್ಲ ಹಾಗೂ ಯಾವುದೇ ಬಣ್ಣವು ಕೂಡ ಹೋಗುವುದಿಲ್ಲ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಕಾಟನ್ ಬಟ್ಟೆ ಒಗೆಯುವಂತಹ ಸಂದರ್ಭದಲ್ಲಿ ಈ ವಿಧಾನವನ್ನು ಅನುಸರಿಸುವುದರಿಂದ ಆದಷ್ಟು ಉತ್ತಮವಾದಂತಹ ಫಲಿತಾಂಶವನ್ನು ನೀವು ಪಡೆಯಬಹುದು!ಜೊತೆಗೆ ಬಟ್ಟೆ ಹಾಳಾಗದಂತೆ ಹೆಚ್ಚು ದಿನದವರೆಗೆ ಹಾಕಿಕೊಳ್ಳಬಹುದಾಗಿರುತ್ತದೆ. ಜೊತೆಗೆ ಕಾಟನ್ ಬಟ್ಟೆ ಒಗೆದ ನಂತರ ಪ್ರತಿಯೊಬ್ಬರೂ ಕೂಡ ಚೆನ್ನಾಗಿ ನೀರನ್ನು ಹಿಂಡುತ್ತಾರೆ ಈ ರೀತಿ ಮಾಡುವುದರಿಂದ ಬಟ್ಟೆ ಹಾಳಾಗುತ್ತದೆ. ಬದಲಿಗೆ ಬಟ್ಟೆ ಯಾವ ರೀತಿ ಇರುತ್ತದೆಯೋ ಅದೇ ರೀತಿ ನೀರನ್ನು ಮೆತ್ತಗೆ ತೆಗೆಯುವುದರಿಂದ ಬಟ್ಟೆ ಹಾಳಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *