ನೆಂಟರು ಬಂದಾಗ ಈ ತರ ಜ್ಯೂಸ್ ಮಾಡಿ ಕೊಡಿ ಖಂಡಿತ ನಿಮ್ಮಲ್ಲಿ ಮತ್ತೆ ಕೇಳ್ತಾರೆ...ಸೂಪರ್ ಜ್ಯೂಸ್ - Karnataka's Best News Portal

ನೆಂಟರು ಬಂದಾಗ ಈ ತರ ಜ್ಯೂಸ್ ಮಾಡಿ ಕೊಡಿ ಖಂಡಿತ ನಿಮ್ಮಲ್ಲಿ ಕೇಳ್ತಾರೆ ಹೇಗೆ ಮಾಡಿದ್ರಿ ಎಂದು.ನೆಂಟರು ಮನೆಗೆ ಬಂದಾಗ ಬೇಗ ಯಾವುದಾದರು ಒಂದು ಜ್ಯೂಸ್ ಅಥವಾ ಪಾನೀಯವನ್ನು ಅವರಿಗೆ ಮಾಡಿಕೊಡಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ನಾವಿಲ್ಲಿ ತಿಳಿಸುವಂತಹ ಒಂದು ಜ್ಯೂಸನ್ನು ತುಂಬಾ ಈಸಿಯಾಗಿ ಬೇಗ ಮಾಡಿಕೊಳ್ಳಬಹುದು ಇದಕ್ಕೆ ಬೇಕಾಗಿರುವಂತಹ ಸಾಮಗ್ರಿಗಳು ಎರಡು ನಿಂಬೆಹಣ್ಣು ಸಿಹಿಗೆ ಬೇಕಾದಷ್ಟು ಸಕ್ಕರೆ 10 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿದಂತಹ ಗೋಡಂಬಿ ಹಾಗೂ ಏಲಕ್ಕಿ.

ಈ ಒಂದು ಜ್ಯೂಸ್ ಅನ್ನು ಮಾಡುವಂತಹ ವಿಧಾನ ಮೊದಲಿಗೆ ಎರಡು ನಿಂಬೆ ಹಣ್ಣನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಅದರ ರಸವನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಬೀಜ ತೆಗೆದು ಮಿಕ್ಸಿ ಜಾರಿನಲ್ಲಿ ಹಾಕಿ ನಿಮಗೆ ಎಷ್ಟು ಜ್ಯೂಸ್ ಬೇಕು ಅದಕ್ಕೆ ತಕ್ಕ ಹಾಗೆ ನೀವು ಸಿಹಿಯನ್ನು ಅಂದರೆ ಸಕ್ಕರೆಯನ್ನು ಸೇರಿಸಿಕೊಳ್ಳಿ ನಂತರ ಅದಕ್ಕೆ ಮೂರು ಏಲಕ್ಕಿ ಹಾಗೆಯೇ ನೀರಿನಲ್ಲಿ ನೆನೆಸಿದಂತಹ ಏಳರಿಂದ ಎಂಟು ಗೋಡಂಬಿಯನ್ನು ಹಾಕಿ ಚೆನ್ನಾಗಿ ನೈಸ್ ಪೇಸ್ಟ್ ಮಾಡಿಕೊಳ್ಳಿ.


ಆನಂತರ ಇದಕ್ಕೆ ಮೂರು ಲೋಟದಷ್ಟು ನೀರನ್ನು ಸೇರಿಸಿ ನೀವು ಈ ಒಂದು ಜ್ಯೂಸ್ ಅನ್ನು ರೆಡಿ ಮಾಡಿಕೊಳ್ಳಬಹುದು ಈ ಒಂದು ಜ್ಯೂಸ್ ಮನೆಗೆ ಯಾರಾದರೂ ನೆಂಟರು ಬಂದಂತಹ ಸಂದರ್ಭದಲ್ಲಿ ಮಾಡಿಕೊಡಬಹುದು ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಇಲ್ಲಿ ಬಳಸಿರುವಂತಹ ಸಾಮಗ್ರಿಗಳು ನಮ್ಮ ದೇಹಕ್ಕೆ ಅತ್ಯದ್ಭುತವಾದಂತಹ ಶಕ್ತಿಯನ್ನು ಕೊಡುತ್ತದೆ ಎಂದು ಹೇಳಬಹುದು.

ಏಲಕ್ಕಿ ಗೋಡಂಬಿ ಹಾಗೂ ಇದರಲ್ಲಿ ಸೇರಿಸಿರುವಂತಹ ನಿಂಬೆಹಣ್ಣಿನ ರಸ ನಮ್ಮ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ ಯಾರಿಗೆ ನಿಶಕ್ತಿ ಆಗಿರುತ್ತದೋ ಅವರು ಈ ಒಂದು ಜ್ಯೂಸ್ ಅನ್ನು ತೆಗೆದುಕೊಳ್ಳಬಹುದು ಹಾಗೆಯೇ ಯಾರಿಗೆಲ್ಲ ಉಷ್ಣಾಂಶದ ದೇಹವನ್ನು ಹೊಂದಿರುತ್ತಾರೆ ಅಂತಹವರು ಸಹ ಈ ಒಂದು ಜ್ಯೂಸ್ ಅನ್ನು ಸೇವನೆ ಮಾಡುವುದರಿಂದ ಅವರ ದೇಹದ ಉಷ್ಣ ಪ್ರಮಾಣ ಕಡಿಮೆಯಾಗುತ್ತದೆ

ಈ ಒಂದು ಜ್ಯೂಸ್ ಅನ್ನು ನಾವು ಬೇಸಿಗೆ ಸಮಯದಲ್ಲಿ ಕುಡಿಯುವುದರಿಂದ ತುಂಬಾ ನಮ್ಮ ದೇಹ ತಂಪಾಗುತ್ತದೆ. ಈ ಜ್ಯೂಸ್ ದು ಕೇವಲ ದೊಡ್ಡವರಿಗೆ ಮಾತ್ರವಲ್ಲದೇ ಮಕ್ಕಳು ಸಹ ಕುಡಿಯಬಹುದು ಮಕ್ಕಳು ಎಲ್ಲರೂ ಸಹ ತುಂಬಾ ಇಷ್ಟಪಟ್ಟು ಕುಡಿಯುತ್ತಾರೆ

ಹಾಗೆಯೇ ಈ ಒಂದು ಜ್ಯೂಸನ್ನು ಮಾಡಲು ಜಾಸ್ತಿ ಸಮಯ ಬೇಡದೆ ಇರುವುದರಿಂದ ನಾವು ಕಡಿಮೆ ಸಮಯದಲ್ಲಿ ಜ್ಯೂಸ್ ಅನ್ನು ತಯಾರು ಮಾಡಿಕೊಳ್ಳಬಹುದು. ನಮ್ಮ ಬಿಡುವಿಲ್ಲದ ಸಮಯದಲ್ಲಿ ಆರೋಗ್ಯಕ್ಕೆ ಇಷ್ಟೊಂದು ಪ್ರಯೋಜನಗಳನ್ನು ನೀಡುವಂತಹ ಕಡಿಮೆ ಸಮಯದಲ್ಲಿ ಮಾಡುವಂತಹ ಈ ಜ್ಯೂಸನ್ನು ಎಲ್ಲರೂ ಸಹ ಮನೆಯಲ್ಲಿ ಮಾಡಿ ಕುಡಿಯಲೇ ಬೇಕು.

Leave a Reply

Your email address will not be published. Required fields are marked *