ವಾಟರ್ ಬಾಟಲ್ ನ ಮುಚ್ಚುಳದಿಂದ ಇಷ್ಟೆಲ್ಲಾ ಲಾಭವಿದ್ಯಾ ? ಈ ವಿಡಿಯೋ ನೋಡಿದ ಮೇಲೆ ಹೀಗೆ ಬಳಸಿ ನೋಡಿ - Karnataka's Best News Portal

ಇಷ್ಟು ದಿನ ಇದು ವೇಸ್ಟ್ ಅಂದುಕೊಂಡಿದ್ವಿ ಆದರೆ ಇದನ್ನು ಎಷ್ಟು ವಿಧದಲ್ಲಿ ಉಪಯೋಗಿಸಬಹುದು!!
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ಲಾಸ್ಟಿಕ್ ವಾಟರ್ ಬಾಟಲ್ ಉಪಯೋಗಿಸುತ್ತಿರುತ್ತೇವೆ ಆದರೆ ಕೆಲವೊಮ್ಮೆ ಅದನ್ನು ಮತ್ತೆ ಉಪಯೋಗಿಸಬಹುದು ಎನ್ನುವಂತಹ ಮಾಹಿತಿ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿರುವುದಿಲ್ಲ ಆದರೆ ಈ ದಿನ ಪ್ಲಾಸ್ಟಿಕ್ ಬಾಟಲ್ ನಲ್ಲಿರುವಂತಹ ಕ್ಯಾಪ್ ಹೇಗೆ ಮತ್ತೆ ಬೇರೆ ಕೆಲಸಗಳಿಗೆ ಉಪಯೋಗಿಸಿ ಕೊಳ್ಳಬಹುದು.

ಹಾಗೂ ಅದರಿಂದ ಎಷ್ಟೆಲ್ಲಾ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಮಿಕ್ಸಿ ಇರುತ್ತದೆ ಅದನ್ನು ಇಟ್ಟರೆ ಒಂದು ಕಡೆಯಿಂದ ಮತ್ತೊಂದು ಕಡೆ ಎಳೆಯುವುದಕ್ಕೆ ಸಾಧ್ಯವಾಗುವುದಿಲ್ಲ ಬದಲಿಗೆ ಮೇಲಕ್ಕೆ ಎತ್ತಿ ನಂತರ ನಿಮಗೆ ಬೇಕಾದ ಸ್ಥಳಗಳಿಗೆ ಇಟ್ಟುಕೊಳ್ಳಬೇಕು ಆದರೆ ಅಂತಹ ಸಮಯದಲ್ಲಿ ಮಿಕ್ಸಿ ಕೆಳಗಡೆ ಇರುವಂತಹ ಸ್ಟ್ಯಾಂಡ್ ಗೆ ಅದಕ್ಕೆ ಸರಿಹೊಂದುವ.


ಅದರ ಅಳತೆಗೆ ಸರಿ ಹೋಗುವ ಕ್ಯಾಪ್ ಅನ್ನು ಅದರ ಕೆಳಗಿನ ಭಾಗಕ್ಕೆ ಇಟ್ಟು ನೀವು ಮಿಕ್ಸಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಎಳೆಯಬಹುದು ಇದರಿಂದ ಮಿಕ್ಸಿ ಹಾಳಾಗುವುದಿಲ್ಲ. ಹಾಗೂ ಮಿಕ್ಸಿ ಕೆಳಭಾಗದಲ್ಲಿರುವ ಸ್ಟ್ಯಾಂಡ್ ಕೂಡ ಹಾಳಾಗುವುದಿಲ್ಲ. ಜೊತೆಗೆ ಇದೇ ರೀತಿ ನಿಮ್ಮ ಸ್ಟವ್ ಕೆಳಗಿನ ಭಾಗಕ್ಕೂ ಕೂಡ ಇದನ್ನು ಹಾಕುವುದರಿಂದ ಸ್ಟವ್ ಅನ್ನು ಕೂಡ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ.

ಶುಚಿ ಮಾಡುವಂತಹ ಸಮಯದಲ್ಲಿ ಈ ರೀತಿಯಾಗಿಯೂ ಕೂಡ ಉಪಯೋಗಿಸಿಕೊಳ್ಳಬಹುದು. ಅದೇ ರೀತಿಯಾಗಿ ಕೆಲವೊಮ್ಮೆ ಪ್ಲಗ್ ಗಳನ್ನು ತೆಗೆದು ಇಡುತ್ತೇವೆ ಆದರೆ ಕೆಲವೊಮ್ಮೆ ಅದು ನೆಲಕ್ಕೆ ಬೀಳುವುದರಿಂದ ಕೆಳಗಡೆ ಇದ್ದರೆ ಆತೆ ಹುಳಗಳು ಅದನ್ನು ಹಾಳು ಮಾಡುತ್ತಿರುತ್ತದೆ ಅಂತಹ ಸಮಯದಲ್ಲಿ ಈ ರೀತಿಯ ವಾಟರ್ ಬಾಟಲ್ ಕ್ಯಾಪ್ ತೆಗೆದುಕೊಂಡು ಅದನ್ನು ಎರಡು ಕಡೆ ಸಮಭಾಗದಲ್ಲಿ ಕತ್ತರಿಸಿ ಗೋಡೆಗೆ ಅಂಟು ಹಾಕುವುದರಿಂದ ಅದನ್ನು ಪ್ಲಗ್ ಹೋಲ್ಡರ್ ಆಗಿಯೂ ಕೂಡ ಉಪಯೋಗಿಸಬಹುದು.

ಜೊತೆಗೆ ಬಾತ್ರೂಮ್ ನಲ್ಲಿಯೂ ಕೂಡ ಇದನ್ನು ಹಾಕುವುದರಿಂದ ಬ್ರಷ್ ಗಳನ್ನು ಇರಬಹುದು ಅದೇ ರೀತಿಯಾಗಿ ಅಡುಗೆ ಮನೆಯಲ್ಲಿ ಇಡುವುದರಿoದ ಲೈಟರ್ ಅನ್ನು ಹಾಕಬಹುದು, ಕೆಳಗೆ ಇಟ್ಟರೆ ಲೈಟರ್ ನೀರು ತಾಗಿ ಹಾಳಾಗುತ್ತಿರುತ್ತದೆ ಅಂತಹ ಸಮಯದಲ್ಲಿ ಈ ವಿಧಾನ ಉಪಯೋಗಿಸುವುದು ಬಹಳ ಉತ್ತಮ!

ಜೊತೆಗೆ ಯಾವುದಾದರೂ ಒಂದು ದೊಡ್ಡ ಪ್ಲಾಸ್ಟಿಕ್ ಬಾಕ್ಸ್ ತೆಗೆದು ಕೊಂಡು ಸ್ವಲ್ಪ ಜಾಗ ಬಿಟ್ಟು ಕ್ಯಾಪ್ ಗಳನ್ನು ಅದರೊಳಗೆ ಅಂಟಿಸುವುದ ರಿಂದ ಅದು ಆರಿದ ನಂತರ ಅದರ ಒಳಗೆ ನೀವು ಮೊಟ್ಟೆಯನ್ನು ಇಡುವುದರ ಮುಖಾಂತರ ಮೊಟ್ಟೆಯನ್ನು ಈ ರೀತಿಯಾಗಿ ಯಾವುದೇ ಅಪಾಯವಾಗದಂತೆ ಜೋಪಾನವಾಗಿ ಮೊಟ್ಟೆಯನ್ನು ಇಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *