ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗಿಯುವಾಗ ಹೀಗೆ ಮಾಡಿ ಸಾಕು ಬಟ್ಟೆ ಹೊಸದರಂತೆ ಆಗುತ್ತದೆ..ಬಟ್ಟೆಯ ಬಣ್ಣ ಮಾಸೋದಿಲ್ಲ - Karnataka's Best News Portal

ವಾಷಿಂಗ್ ಮಿಷನ್ ನಲ್ಲಿ ಹೀಗೆ ಬಟ್ಟೆ ಒಗೆಯಿರಿ ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ..!!ಮನೆಯಲ್ಲಿ ಯಾವ ಕೆಲಸವನ್ನಾದರೂ ಮಾಡಬಹುದು ಆದರೆ ಬಟ್ಟೆ ಒಗೆಯುವುದನ್ನು ಮಾತ್ರ ಮಾಡಲು ಸಾಧ್ಯವಿಲ್ಲ ಎಂದು ಮನೆಯಲ್ಲಿ ಎಷ್ಟೋ ಮಹಿಳೆಯರು ಹೇಳುತ್ತಾರೆ. ಅದರಲ್ಲೂ ಕೆಲವೊಬ್ಬರು ತಮ್ಮ ಕೈಗಳ ಮುಖಾಂತರ ಬಟ್ಟೆ ಒಗೆಯುವುದಕ್ಕೆ ಕಷ್ಟಪಡುತ್ತಿದ್ದರೆ. ಇನ್ನೂ ಕೆಲವರು ವಾಷಿಂಗ್ ಮಿಷನ್ ಇದ್ದರೂ ಕೂಡ ಬಟ್ಟೆಯಲ್ಲಿರುವಂತಹ ಕೊಳೆ ಸರಿಯಾಗಿ ಹೋಗುವುದಿಲ್ಲ ಎಂಬ ಕಾರಣವನ್ನು ಹೇಳುತ್ತಾರೆ.

ಆದರೆ ವಾಷಿಂಗ್ ಮಿಷನ್ ನಲ್ಲಿ ಬಟ್ಟೆಯನ್ನು ಒಗೆಯುವಂತಹ ಸಮಯದಲ್ಲಿ ಈ ದಿನ ನಾವು ಹೇಳುವಂತಹ ವಿಧಾನವನ್ನು ಅನುಸರಿಸಿ ದರೆ ಬಟ್ಟೆಯಲ್ಲಿರುವಂತಹ ಎಲ್ಲಾ ಕೊಳೆ ಸಂಪೂರ್ಣವಾಗಿ ಹೋಗುತ್ತದೆ ಹಾಗೂ ಬಟ್ಟೆ ಹಾಳಾಗುವುದಿಲ್ಲ ಹೊಸದರಂತೆ ಕಾಣಿಸುತ್ತಿರುತ್ತದೆ. ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸುವುದು ಪ್ರತಿಯೊಬ್ಬ ರಿಗೂ ಕೂಡ ಉಪಯುಕ್ತವಾಗಿರುತ್ತದೆ.


ಹಾಗಾದರೆ ಈ ಒಂದು ವಿಧಾನವನ್ನು ಹೇಗೆ ಮಾಡುವುದು ಎಂದು ನೋಡುವುದಾದರೆ.ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ವಾಷಿಂಗ್ ಮಿಷನ್ ಗೆ ಬಟ್ಟೆ ಹಾಕುವಂತಹ ಸಮಯದಲ್ಲಿ ಕೆಲವೊಂದು ತಪ್ಪು ಗಳನ್ನು ಮಾಡುತ್ತಾರೆ ಈ ರೀತಿ ಮಾಡುವುದರಿಂದ ಬಟ್ಟೆ ಸರಿಯಾಗಿ ಕೊಳೆ ಹೋಗುವುದಿಲ್ಲ ಹಾಗೂ ಬಟ್ಟೆಯಲ್ಲಿರುವಂತಹ ಬಣ್ಣವೂ ಕೂಡ ಹೋಗುತ್ತಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೊದಲನೆಯ ದಾಗಿ ಈ ವಿಷಯದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ, ಹಾಗೂ ಅವಶ್ಯಕತೆಯೂ ಕೂಡ ಆಗಿರುತ್ತದೆ.

ಹಾಗಾದರೆ ನಾವು ಮಾಡುವಂತಹ ತಪ್ಪುಗಳು ಯಾವುದು ಎಂದು ಮೊದಲು ತಿಳಿದುಕೊಳ್ಳೋಣ ಮೊದಲನೆಯ ತಪ್ಪು ವಾಷಿಂಗ್ ಮಷೀನ್ ಗೆ ಬಟ್ಟೆ ಹಾಕುವಂತಹ ಸಮಯದಲ್ಲಿ ಬಟ್ಟೆಯನ್ನು ಉಲ್ಟಾ ಮಾಡಿ ಹಾಕಬೇಕು.ಈ ರೀತಿ ಮಾಡುವುದರಿಂದ ಬಟ್ಟೆಯಲ್ಲಿರುವಂತಹ ಶೇಡ್ ಹೋಗುವುದಿಲ್ಲ ಹಾಗೂ ಹೆಚ್ಚು ದಿನಗಳ ತನಕ ಬಟ್ಟೆ ಬಾಳಿಕೆಗೆ ಬರುತ್ತದೆ.

ಇನ್ನು ಎರಡನೆಯದಾಗಿ ಹೊಸದಾಗಿ ಹಾಕಿಕೊಂಡಂತಹ ಬಟ್ಟೆಯನ್ನು ಮೊದಲನೆಯದಾಗಿ ಯಾವುದೇ ಕಾರಣಕ್ಕೂ ವಾಷಿಂಗ್ ಮಷೀನ್ ಗೆ ಹಾಕಬಾರದು ಬದಲಿಗೆ ಅದರಲ್ಲಿ ಏನಾದರೂ ಬಣ್ಣ ಹೋಗುವ ಗುಣಗಳು ಇದ್ದರೆ ಅದರಿಂದ ಬೇರೆ ಬಟ್ಟೆಗಳಿಗೂ ಕೂಡ ಬಣ್ಣ ಆಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಕೈಯಲ್ಲಿ ಎರಡರಿಂದ ಮೂರು ಬಾರಿ ಹಾಕಿಕೊಂಡು ಒಗೆದ ನಂತರ ವಾಷಿಂಗ್ ಮಷೀನ್ ಗೆ ಹಾಕುವುದು ಉತ್ತಮ.

ಜೊತೆಗೆ ಎಲ್ಲಾ ಬಟ್ಟೆಗಳನ್ನು ಕೂಡ ಒಂದೇ ಬಾರಿ ಹಾಕುವುದು ತಪ್ಪು. ಬಿಳಿ ಬಟ್ಟೆಗಳನ್ನು ಒಂದು ಬಾರಿ,ಹಾಗೂ ಬೇರೆ ಬಟ್ಟೆಗಳನ್ನು ಒಂದು ಬಾರಿ ಹಾಕಿ ಒಗೆಯುವುದರಿಂದ ಬಿಳಿ ಬಟ್ಟೆಗಳು ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ,ಜೊತೆಗೆ ಬಿಳಿ ಬಟ್ಟೆಯನ್ನು ಒಗೆಯುವ ಸಮಯದಲ್ಲಿ ಸ್ವಲ್ಪ ಅಡಿಗೆ ಸೋಡವನ್ನು ಹಾಕಿ ಒಗೆಯುವುದರಿಂದ ಬಿಳಿ ಬಟ್ಟೆ ಸ್ವಚ್ಛವಾಗಿ ಕಾಣುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *