ಮಂಗಳವಾರ ಇದನ್ನು ಮನೆಬಾಗಿಲಿಗೆ ಕಟ್ಟಿ ಹಣ ತಾನಾಗೇ ಬರುತ್ತೆ...ಹಣ ಹೇಗೆ ಬರುತ್ತೆ ನೋಡಿ - Karnataka's Best News Portal

ಮಂಗಳವಾರ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಿ ಹಣ ಹುಡುಕಿ ಬರುತ್ತೆ.!ವಾಸ್ತು ಶಾಸ್ತ್ರದ ಪ್ರಕಾರ ನಾಲ್ಕು ದಿಕ್ಕುಗಳನ್ನು ಶುಭ ಎಂದು ಭಾವಿಸಲಾಗಿದೆ ಹೀಗಾಗಿ ವಾಸ್ತು ಶಾಸ್ತ್ರಜ್ಞರ ಉಪಸ್ಥಿತಿಯಲ್ಲಿ ಮನೆಯ ಮುಖ್ಯದ್ವಾರವನ್ನು ನಿರ್ಮಿಸಬೇಕು. ಮನೆಯ ಆಗ್ನೇಯ, ಹಾಗೂ ನೈರುತ್ಯ ದಿಕ್ಕಿನಲ್ಲಿ ಮನೆಯ ಪ್ರವೇಶ ದ್ವಾರ ಎಂದಿಗೂ ಇರಬಾರದು ಅನ್ನುವುದನ್ನು ಎಂದಿಗೂ ಮರೆಯಬೇಡಿ, ಹೀಗೆ ಮಾಡಿದರೆ ಮನೆಯಲ್ಲಿ ಕಳ್ಳತನವಾಗುವ ಸಾಧ್ಯತೆ ಇದೆ.

ಆಗ್ನೇಯ ದಿಕ್ಕಿನ ಪ್ರವೇಶ ದ್ವಾರ ಇರುವುದರಿಂದ ಕುಟುಂಬದಲ್ಲಿ ಜಗಳ ಉಂಟಾಗುತ್ತದೆ, ಹಾಗೆ ಕುಟುಂಬದ ಸದಸ್ಯರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ಇದೇ ವೇಳೆ ನೈರುತ್ಯ ದಿಕ್ಕಿನಲ್ಲಿರುವ ಮುಖ್ಯ ಬಾಗಿಲಿನಿಂದಾಗಿ ಮನೆಯ ಮುಖ್ಯಸ್ಥರು ದುಃಖಗಳನ್ನು ಎದುರಿಸಬೇಕಾಗುತ್ತದೆ. ಮನೆಯ ಮುಖ್ಯ ದ್ವಾರದ ಎದುರು ಭಾಗಕ್ಕೆ ತಗ್ಗು ಅಥವಾ ನೇರ ರಸ್ತೆ ಇರಬಾರದು, ಹಾಗೂ ಮನೆಯ ಎದುರು ಭಾಗಕ್ಕೆ


ಕಸದ ತೊಟ್ಟಿ ಅಥವಾ ಮುರುಕಲು ಕಟ್ಟಡ ಇರಬಾರದು. ಮನೆಯ ಮುಖ್ಯ ದ್ವಾರ ಸ್ವಚ್ಛ ಹಾಗೂ ಆಕರ್ಷಕವಾಗಿ ಇರಬೇಕು! ಹಾಗೂ ಮನೆಯ ಮುಖ್ಯದ್ವಾರದಲ್ಲಿ ಕತ್ತಲೆ ಇರಬಾರದು. ಮನೆಯ ಮುಖ್ಯ ಬಾಗಿಲಿನ ಎರಡು ಬದಿಗಳಲ್ಲಿ ಕೆಂಪು ಸ್ವಸ್ತಿಕ್ ಹಾಗೂ ಮಧ್ಯಭಾಗದಲ್ಲಿ ನೀಲಿ ಸ್ವಸ್ತಿಕ್ ಇದ್ದರೆ ಅದು ಶುಭ ಎಂದು ಪರಿಗಣಿಸಲಾಗುತ್ತದೆ. ಅಶೋಕ ಮಾವು ಅಥವಾ

ಬೇವಿನ ಎಲೆಗಳ ಹಾರವನ್ನು ಮನೆಯ ಮುಖ್ಯ ಬಾಗಿಲಿನಲ್ಲಿ ಹಾಕುವುದು ತುಂಬಾ ಶುಭ ಎಂದು ಪರಿಗಣಿಸಲಾಗಿದೆ. ಹಾಗೂ ಮಾವಿನ ಎಲೆಗಳನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಕುದುರೆಯ ಲಾಳವನ್ನು ಮುಖ್ಯದ್ವಾರದಲ್ಲಿ ಹೂಳಿ, ಇದರಿಂದ ನಕಾರಾತ್ಮಕ ಶಕ್ತಿ ತಟಸ್ಥವಾಗುತ್ತದೆ. ಮತ್ತು ಸಂತೋಷ ಹಾಗೂ ಶಾಂತಿ ಮನೆಯಲ್ಲಿ ನೆಲೆಸುತ್ತದೆ. ಇದಕ್ಕಾಗಿ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.

ತುಳಸಿ ಸಸ್ಯವನ್ನು ಮನೆಯ ಮುಖ್ಯ ದ್ವಾರದ ಮುಂದೆ ಅಥವಾ ಮನೆಯ ಅಂಗಳದಲ್ಲಿ ನೆಡಲಾಗುತ್ತದೆ ಮತ್ತು ತುಳಸಿ ಬಳಿ ದೀಪಾ ಪ್ರಜ್ವಲಿಸುವ ಮೂಲಕ ಮನೆಯಲ್ಲಿ ವಾಸ್ತುದೋಷವನ್ನು ನಿವಾರಿಸಬಹುದು. ಮನೆಯ ಮುಂಭಾಗಿಲಿನಲ್ಲಿ ದೇವತೆಗಳು ನೆಲೆಸಿರುತ್ತಾರೆ ಅನ್ನುವ ನಂಬಿಕೆ ಎಲ್ಲರಲ್ಲೂ ಇದೆ. ಆದ್ದರಿಂದ ಪ್ರತಿನಿತ್ಯ ಬಾಗಿಲಿನ ಹೊಸ್ತಿಲನ್ನು ಸ್ವಚ್ಛ ಮಾಡಿ ರಂಗೋಲಿ ಹಾಕಿ ಅರಿಶಿಣ ಕುಂಕುಮ ಇಟ್ಟು ನಿತ್ಯ ಪೂಜೆಯನ್ನು ಮಾಡುತ್ತಾರೆ.

ಇಂತಹ ಮನೆಯ ಮುಖ್ಯ ಬಾಗಿಲಿಗೆ ಲೋಳೆ ರಸ ಸಸ್ಯವನ್ನು ಕಟ್ಟಿದರೆ ಅದೃಷ್ಟ ನಿಮ್ಮದಾಗುತ್ತದೆ. ಈ ಲೋಳೆ ರಸ ಸಸ್ಯದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ನೆಲೆಸಿದ್ದಾಳೆ ಎನ್ನುವ ನಂಬಿಕೆ ಇದೆ. ಲೋಳೆ ರಸದ ಒಂದು ಚಿಕ್ಕ ಗಿಡವನ್ನು ತೆಗೆದುಕೊಂಡು ಅದನ್ನು ಉಲ್ಟಾ ಮಾಡಿ ಅಂದರೆ ಬೇರು ಮೇಲೆ ಕಾಣುವಂತೆ ಶುಭ ಮಂಗಳವಾರದ ದಿನ ಪೂಜೆ ಮಾಡಿ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *