ಕಳಸಕ್ಕೆ ಇಟ್ಟ ವೀಳ್ಯದೆಲೆಯನ್ನು ಏನು ಮಾಡಬೇಕು ಕಳಸದ ವೀಳ್ಯದೆಲೆಯನ್ನು ಹೀಗೆ ಮಾಡಿದರೆ ಸಂಪಾದಿಸಿದ ಹಣ ಬೇರೆಯವರ ಪಾಲಾಗುತ್ತೆ. - Karnataka's Best News Portal

ಕಳಸಕ್ಕೆ ಇಟ್ಟ ವೀಳ್ಯದೆಲೆಯನ್ನು ಏನು ಮಾಡಬೇಕು ಕಳಸದ ವೀಳ್ಯದೆಲೆಯನ್ನು ಹೀಗೆ ಮಾಡಿದರೆ ಸಂಪಾದಿಸಿದ ಹಣ ಬೇರೆಯವರ ಪಾಲಾಗುತ್ತೆ.

ಕಳಶಕ್ಕೆ ಇಟ್ಟ ವೀಳ್ಯದೆಲೆಯನ್ನು ಹೀಗೆ ಮಾಡಿದರೆ ಸಂಪಾದಿಸಿದ ಹಣ ಬೇರೆಯವರ ಪಾಲಾಗುತ್ತೆ! ಕಳಸದ ಎಲೆಯನ್ನು ಏನು ಮಾಡಬೇಕು?ಸಾಮಾನ್ಯವಾಗಿ ಎಲ್ಲಾ ಹಿಂದೂ ಮನೆತನಗಳಲ್ಲಿ ಅದರಲ್ಲೂ ಹೆಚ್ಚು ಸಂಪ್ರದಾಯ ಇರುವಂತಹ ಮನೆಗಳಲ್ಲಿ ಪ್ರತಿಯೊಬ್ಬರೂ ಕೂಡ ಕಳಶಕ್ಕೆ ವೀಳ್ಯದೆಲೆಯನ್ನು ಇಟ್ಟು ಕುಲದೇವರನ್ನು ಅದರ ರೂಪವಾಗಿ ಪೂಜಿಸುತ್ತಿರುತ್ತೇವೆ. ಆದರೆ ಕೆಲವೊಂದು ವೀಳ್ಯದೆಲೆಯನ್ನು ಕಳಶಕ್ಕೆ ಇಟ್ಟು ನಂತರ ಬೇರೆ ದಿನ ಪೂಜೆ ಮಾಡುವಂತಹ ಸಮಯದಲ್ಲಿ ಅದನ್ನು ಸಿಕ್ಕಲ್ಲೆಲ್ಲಾ ಬಿಸಾಕುತ್ತಿರುತ್ತಾರೆ.

WhatsApp Group Join Now
Telegram Group Join Now

ಆದರೆ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬಾರದು. ಜೊತೆಗೆ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಲವಾರು ರೀತಿಯ ಸಂಕಷ್ಟಗಳು ಎದುರಾಗುತ್ತದೆ,ಜೊತೆಗೆ ನೀವು ಸಂಪಾದನೆ ಮಾಡಿರುವಂತಹ ಹಣವೆಲ್ಲವೂ ಕೂಡ ಬೇರೆಯವರ ಪಾಲಾಗುತ್ತದೆ ಹಾಗೂ ಎಲ್ಲರೂ ಓಡಾಡುವಂತಹ ಸ್ಥಳದಲ್ಲಿಯೂ ಕೂಡ ವೀಳ್ಯದೆಲೆಯನ್ನು ಹಾಕಬಾರದು ಅದರಿಂದ ಹಲವಾರು ಸಂಕಷ್ಟಗಳು ಎದುರಾಗುತ್ತದೆ.


ಹಾಗಾದರೆ ಕಳಶಕ್ಕೆ ಇಟ್ಟು ಪೂಜೆ ಮಾಡಿರುವಂತಹ ವೀಳ್ಯದೆಲೆಯನ್ನು ಏನು ಮಾಡಬೇಕು? ಅದನ್ನು ಹೇಗೆ ಉಪಯೋಗಿಸಬೇಕು?ಎನ್ನುವ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಮೇಲೆ ಹೇಳಿದಂತೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಕುಲದೇವರನ್ನು ಆರಾಧನೆ ಮಾಡುತ್ತ ಕುಲ ದೇವರಿಗೆ ಅರ್ಪಿಸುತ್ತಾ ಕಳಶವನ್ನು ಪ್ರತಿಷ್ಠಾಪನೆ ಮಾಡುತ್ತೇವೆ ಹಾಗೂ ಪ್ರತಿನಿತ್ಯ ದೀಪವನ್ನು ಹಚ್ಚುವುದರ ಮೂಲಕ ದೇವರನ್ನು ಆರಾಧಿಸುತ್ತಿರುತ್ತೇವೆ.

ಹಾಗಾದರೆ ಕಳಶವನ್ನು ಇಡುವಾಗ ಕಳಶಕ್ಕೆ ಹಾಕುವಂತಹ ವೀಳ್ಯದೆಲೆ ಯಾವ ರೀತಿ ಇರಬೇಕು ಯಾವ ವಿಧಾನದಲ್ಲಿ ಕಳಶವನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ನೋಡುವುದಾದರೆ. ನಿಮ್ಮ ಮನೆಯ ದೇವರ ಅಂದರೆ ಕುಲದೇವರ ಮುಖ್ಯ ವಾರ ಯಾವ ದಿನ ಇರುತ್ತದೆಯೋ ಆ ದಿನ ದೇವರ ಮನೆಯ ಎಲ್ಲಾ ಪಾತ್ರೆಗಳನ್ನು ಸ್ವಚ್ಛ ಮಾಡಿ ಕಳಶವನ್ನು ತಾಮ್ರ ಹಿತ್ತಾಳೆ ಅಥವಾ ಬೆಳ್ಳಿಯ ಬಿಂದಿಗೆಯನ್ನು ಉಪಯೋಗಿಸಿ ಕಳಶವನ್ನು ಪ್ರತಿಷ್ಠಾಪಿಸುತ್ತೇವೆ.

See also  ಮಕರ ರಾಶಿ 5 ವರ್ಷಗಳ ನಂತರ ಯೋಗ.ಜೀವನ ಸೂಪರ್..ಆಗಿರುತ್ತೆ ಇನ್ನುಮುಂದೆ..ಯಾವುದರಲ್ಲಿ ಜಯ ಸಿಗಲಿದೆ ನೋಡಿ

ಅದೇ ರೀತಿಯಾಗಿ ಕಳಶಕ್ಕೆ ಇಡುವಂತಹ ವೀಳ್ಯದೆಲೆಯನ್ನು ಸ್ವಚ್ಛವಾಗಿರುವಂತಹ ಹಚ್ಚ ಹಸಿರಾಗಿರುವಂತಹ ಯಾವುದೇ ರೀತಿಯ ಹರಿದಿರದಂತಹ ವೀಳ್ಯದೆಲೆಯನ್ನು ಧರಿಸುವುದು ಉತ್ತಮ, ಬದಲಿಗೆ ವೀಳ್ಯದೆಲೆ ಏನಾದರೂ ಹಾಳಾಗಿದ್ದರೆ ಮುಂಭಾಗ ಏನಾದರೂ ಇಲ್ಲದೆ ಇದ್ದರೆ ಅದನ್ನು ಕಳಶಕ್ಕೆ ಧರಿಸುವುದು ಉತ್ತಮವಲ್ಲ, ಈ ರೀತಿ ಧರಿಸುವುದರಿಂದ ಅದು ಅಶುಭ ಫಲವನ್ನು ಕೊಡುತ್ತದೆ ಎಂದು ಹೇಳುತ್ತಾರೆ. ಮೇಲೆ ಹೇಳಿದಂತೆ ಕಳಶಕ್ಕೆ ಇಟ್ಟಂತಹ ವೀಳ್ಯದೆಲೆಯನ್ನು ಏನು ಮಾಡುವುದು ಎಂದರೆ

ನಿಮ್ಮ ಮನೆಯ ಯಾವುದಾದರೂ ಗಿಡಗಳ ಬುಡಕ್ಕೆ ಹಾಕಬಹುದು. ಅದರಲ್ಲೂ ಬಹಳ ಮುಖ್ಯವಾಗಿ ತುಳಸಿ ಗಿಡದ ಬುಡಕ್ಕೆ ವೀಳ್ಯದೆಲೆಯನ್ನು ಹಾಕುವುದರಿಂದ ನಿಮ್ಮ ಎಲ್ಲಾ ದರಿದ್ರ ದೋಷಗಳು ಕೂಡ ದೂರವಾಗುತ್ತದೆ ಎಂದೇ ಹೇಳುತ್ತಾರೆ. ಕೆಲವೊಮ್ಮೆ ನಿಮ್ಮ ಮನೆಯಲ್ಲಿ ಹಿರಿಯರು ಏನಾದರೂ ವಿಳ್ಯದೆಲೆಯನ್ನು ತಿನ್ನುತ್ತಿದ್ದರೆ ಅವರಿಗೆ ಇದನ್ನು ಕೊಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">