ಗಾಜಿನ ಲೋಟದಲ್ಲಿ ಮನೆಯ ಈ ಸ್ಥಳದಲ್ಲಿ ನೀರಿನಲ್ಲಿ ನಿಂಬೆಹಣ್ಣು ಇಟ್ಟು ನೋಡಿ 7 ದಿನದಲ್ಲಿ ನಿಮ್ಮ ಮನೆ ವಾತಾವರಣ ಬದಲಾಗುತ್ತೆ. - Karnataka's Best News Portal

ನಿಂಬೆ ಹಣ್ಣನ್ನು ಗಾಜಿನ ಲೋಟದಲ್ಲಿಟ್ಟು ಬದಲಾವಣೆ ನೀವೇ ನೋಡಿ.ಚಿಕ್ಕ ಮಕ್ಕಳಿಗೆ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅವರಿಗೆ ಒಂದು ನಿಂಬೆ ಹಣ್ಣಿನಿಂದ ಕೆಳಗಿನಿಂದ ಮೇಲಕ್ಕೆ ಮತ್ತು ಮೇಲಿನಿಂದ ಕೆಳಗಡೆ ಮೂರು ಬಾರಿ ನಿವಾಳಿಸಿ, ಆ ನಿಂಬೆಹಣ್ಣನ್ನು 4 ಹೋಳುಗಳಾಗಿ ಕತ್ತರಿಸಿ ಯಾರು ಇಲ್ಲದ ಜಾಗದಲ್ಲಿ ಅಥವಾ ಮೂರು ದಾರಿಗಳು ಸೇರುವ ಜಾಗದಲ್ಲಿ ಯಾರಿಗೂ ಕಾಣದಂತೆ ಎಸೆದು ಹಿಂದೆ ತಿರುಗಿ ನೋಡದೆ ಬರಬೇಕು.

ವ್ಯಾಪಾರ ಪ್ರಗತಿಗಾಗಿ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ನಿಮ್ಮ ವ್ಯಾಪಾರವು ಸರಿಯಾಗಿ ನಡೆಯಲಿ ಎಂದು ಬೇಡಿಕೊಂಡು ಅದನ್ನು 4 ತುಂಡುಗಳಾಗಿ ಕತ್ತರಿಸಿ ಪ್ರತಿ ನಾಲ್ಕು ದಿಕ್ಕುಗಳಲ್ಲಿ ಒಂದು ನಿಂಬೆ ತುಂಡುಗಳನ್ನು ಎಸೆಯಬೇಕು ಪ್ರತಿದಿನ ಈ ಪರಿಹಾರವನ್ನು ಮಾಡಬೇಕು. ವೃತ್ತಿಜೀವನದ ಯಶಸ್ವಿಗಾಗಿ ನಿಂಬೆಹಣ್ಣಿನ ಮೇಲೆ ನಾಲ್ಕು ಲವಂಗಲಗಳನ್ನು ಇಟ್ಟು 108 ಬಾರಿ ಓಂ ಶ್ರೀ ಹನುಮತೇ ನಮಃ ಎಂದು ಹೇಳಬೇಕು.


ಕೆಲಸಕ್ಕೆ ಹೋಗುವಾಗ ನಿಮ್ಮ ಜೊತೆ ಈ ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಬೇಕು ಇದರಿಂದ ನೀವು ಖಂಡಿತವಾಗಿ ವೃತ್ತಿಪರ ಯಶಸ್ಸನ್ನು ಸಾಧಿಸುತ್ತೀರಿ. ಉದ್ಯೋಗ ಪಡೆಯುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಕೂಡ ಕೆಲಸ ಸಿಗದೇ ಇದ್ದರೆ ಮಧ್ಯರಾತ್ರಿ ಸಮಯದಲ್ಲಿ ಒಂದು ಕಲೆಗಳಿಲ್ಲದ ನಿಂಬೆ ಹಣ್ಣನ್ನು ತೆಗೆದುಕೊಂಡು ಸ್ವಚ್ಚವಾಗಿ ತೊಳೆಯಬೇಕು.

ನಂತರ ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ನಾಲ್ಕು ದಾರಿ ಸೇರುವಲ್ಲಿ ನಾಲ್ಕು ಮೂಲೆಗಳಲ್ಲಿ ಎಸೆಯಬೇಕು ಎಸೆಯುವ ಸಂದರ್ಭದಲ್ಲಿ ಉದ್ಯೋಗ ಸಿಗಲಿ ಎಂದು ಕೇಳಿಕೊಳ್ಳಬೇಕು ಇದರ ಪರಿಣಾಮವಾಗಿ ನಿಮಗೆ ನಿರುದ್ಯೋಗ ದೂರವಾಗಿ ಉದ್ಯೋಗ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಶುಕ್ಲ ಪಕ್ಷದ ಯಾವುದೇ ದಿನ ನೀವು ಮಾಡಬಹುದು ಸತತ ಏಳು ದಿನಗಳ ಕಾಲ ಈ ಪ್ರಯೋಗವನ್ನು ಮಾಡಬೇಕು.

ಸಂತೋಷ ಮತ್ತು ಸಮೃದ್ಧಿ ಗಾಗಿ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಮತ್ತು ಮೂರು ದಾರಿ ಸೇರುವಲ್ಲಿ ಹೋಗಿ ನಿಂಬೆಹಣ್ಣಿಂದ ನೀವಾಳಿಸಿ ಆ ನಿಂಬೆಹಣ್ಣನ್ನು ಎರಡು ತುಂಡುಗಳಾಗಿ ಕತ್ತರಿಸಿ ಒಂದು ತುಂಡನ್ನು ನಿಮ್ಮ ಹಿಂದೆ ಮತ್ತು ಇನ್ನೊಂದು ತುಂಡನ್ನ ನಿಮ್ಮ ಮುಂದೆ ಎಸೆದು ಹಿಂತಿರುಗಿ ನೋಡದ ಹಾಗೆ ಬರಬೇಕು.

ಗುರುವಾರದ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಾಲ್ಕು ನಿಂಬೆಹಣ್ಣುಗಳು ಮತ್ತು ಲವಂಗವನ್ನು ಕೊಟ್ಟು ಪೂಜೆ ಮಾಡಿಸಿಕೊಂಡು ಬರಬೇಕು ವ್ಯಾಪಾರ ನಷ್ಟದಲ್ಲಿ ಸಾಗುತ್ತಿದ್ದರೆ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ವ್ಯಾಪಾರಸ್ಥಳದ ನಾಲ್ಕು ಮೂಲೆಗಳಿಗೂ ಒಂದೊಂದು ಮೂಲೆಗು ಮುಟ್ಟಿಸಿ ನಂತರ ನಿಂಬೆ ಹಣ್ಣನ್ನು ನಾಲ್ಕು ತುಂಡುಗಳಾಗಿ ಮಾಡಿ ನಾಲ್ಕು ದಿಕ್ಕಿನಲ್ಲಿ ಇಡಬೇಕು ಇದರಿಂದ ಶನಿದೋಷ ದೂರವಾಗುತ್ತದೆ ಈ ಪರಿಹಾರವನ್ನು ಮಾಡಿಕೊಂಡರೆ ಎಲ್ಲಾ ಕೆಟ್ಟ ಶಕ್ತಿಯು ಆ ಸ್ಥಳದಿಂದ ದೂರವಾಗುತ್ತದೆ.

Leave a Reply

Your email address will not be published. Required fields are marked *