ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಇವತ್ತು ಇವನೇ ಭಾರತದ ಮೊದಲ ಟ್ರಾನ್ಸ್ ಬಾಡಿ ಬಿಲ್ಡರ್ ನಿಮ್ಮೆಲ್ಲರ ಕಣ್ಣು ತೆರೆಸುವ ಇವರ ಸಾಧನೆ ಎಂತದ್ದು ಅಂತ ಗೊತ್ತಾ? - Karnataka's Best News Portal

ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಬಾಡಿ ಬಿಲ್ಡರ್ ನಿಮ್ಮೆಲ್ಲರ ಕಣ್ಣು ತೆರೆಸುವ ಸಾಧಕರ ಬದುಕು.ಆರ್ಯನ್ 1991ರಲ್ಲಿ ನೈಲ ಎಂಬ ಹುಡುಗಿಯಾಗಿ ಜನಿಸುತ್ತಾರೆ. ಮೊದಲಿನಿಂದಲೂ ಅವರು ಹುಡುಗಿಯಾಗಿ ಯಾರ ಜೊತೆಯೂ ಕೂಡ ಯಾವ ವಿಧವಾದ ಸಂಬಂಧವನ್ನು ಹೊಂದಿರಲಿಲ್ಲ ಅವರಿಗೆ ತಾವು ಹುಡುಗಿ ಎಂಬುದನ್ನು ಒಪ್ಪಲು ಇಷ್ಟವಿರಲಿಲ್ಲ ಎರಡನೇ ತರಗತಿಯ ಇಂದಲೇ ಅವರು ಹುಡುಗನ ಸಮವಸ್ತ್ರದಲ್ಲಿ ಹುಡುಗನ ಶಾಲೆಗೆ ಹೋಗಲು ಪ್ರಾರಂಭಿಸಿದರು ಮತ್ತು ಅದರಲ್ಲಿಯೇ ಹೆಚ್ಚು ಕಂಫರ್ಟೆಬಲ್ ಆಗಿ ಇದ್ದರು.

ಇಂತಹ ಎಷ್ಟೋ ಉದಾಹರಣೆಗಳು ನಮ್ಮ ಸುತ್ತಮುತ್ತ ಇವೆ ಅವರಲ್ಲಿ ಹೀಗೆ ಹುಟ್ಟಿದ ಎಷ್ಟೋ ಮಕ್ಕಳನ್ನು ತಂದೆ ತಾಯಿಯರು ದೂರ ಮಾಡುವ ದಾರುಣ ಕಥೆಗಳನ್ನು ನಾವು ಕೇಳುತ್ತೇವೆ ಆದರೆ ಅದೃಷ್ಟ ವರ್ಷ ಆರ್ಯ ಅವರಿಗೆ ಈ ಕೌಟುಂಬಿಕ ಸಮಸ್ಯೆ ಇರಲಿಲ್ಲ ಅವರ ಕುಟುಂಬದವರು ಆಯ್ಕೆಯನ್ನು ಬೆಂಬಲಿಸಿದರು.


ತಾನು 19ನೇ ವರ್ಷವಿದ್ದವನಾಗಿದ್ದಾಗ ಆರ್ಯನ್ ಪುರುಷನಾಗಲು ಲೈಂಗಿಕ ಪರಿವರ್ತನೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದು ನಿರ್ಧರಿಸಿದರು ಅವರ ಕುಟುಂಬದವರು ಅವನ ನಿರ್ಧಾರವನ್ನು ಬೆಂಬಲಿಸಿ ಅವನ ಪರವಾಗಿ ನಿಲ್ಲುತ್ತಾರೆ ಶಸ್ತ್ರ ಚಿಕಿತ್ಸೆಯ ನಂತರ ದೈಹಿಕ ಅಸ್ವಸ್ಥತೆಯ ಹೊರತಾಗಿ ಆರ್ಯನ್ ನವರು ಏನನ್ನು ಯಾರಿಂದಲೂ ಮರೆಮಾಚಲಿಲ್ಲ ಮತ್ತು ಅವರ ಹೊಸ ಗುರುತುಗಳನ್ನು ಸ್ವೀಕರಿಸಿ ತಾನೊಬ್ಬ ಟ್ರಾನ್ಸ್ ಎಂದು ಅವರು ಜಗತ್ತಿಗೆ ಹೆಮ್ಮೆಯಿಂದ ಪ್ರತಿನಿಧಿಸಿ ತೋರ್ಪಡಿಸಿದರು

ಕೆಲವು ವರ್ಷಗಳ ಹಿಂದೆ ಆರ್ಯನ್ ಟ್ರಾನ್ಸ್ ಆಗಿ ಬಹಿರಂಗವಾಗಿ ಹಾಗೂ ಸಾರ್ವಜನಿಕವಾಗಿಯೇ ಹೊರಬಂದರು. ಮನುಷ್ಯ ಮತ್ತು ಎಲ್ ಜಿ ಬಿ ಟಿ ಕ್ಯೂ ಹಕ್ಕುಗಳ ಸಂಸ್ಥೆಯೊಂದಿಗೆ ತೊಡಗಿಸಿಕೊಂಡಿರುವ ಇತರರನ್ನು ತಮ್ಮಂತೆ ಒಪ್ಪಿಕೊಳ್ಳುವಂತೆ ಉತ್ತೇಜಿಸುವ ಉದ್ದೇಶದಿಂದಾಗಿ ಅವರು ಕೈಜೋಡಿಸುವ ಆಶಯವನ್ನು ಹೊಂದಿದ್ದರು.

ಆರ್ಯನ್ ಗೆ ಮೊದಲಿನಿಂದಲೂ ಸಹ ಬಾಡಿ ಬಿಲ್ಡಿಂಗ್ ಬಗ್ಗೆ ಆಸಕ್ತಿ ಹಾಗೂ ಅಭಿರುಚಿ ಇದ್ದದ್ದರಿಂದ ಅವರು
ವರ್ಷಗಳ ಹಿಂದೆ ದೇಹದಾಡ್ಯದ ಅಭ್ಯಾಸವನ್ನು ಕೈಕೊಂಡರು ಅವರು ಚಿಕ್ಕ ವಯಸ್ಸಿನಿಂದಲೂ ಫಿಟ್ನೆಸ್ ಫ್ರೀಕ್ ಆಗಿದ್ದರು ಶಾಲೆಯಲ್ಲಿ ಹಲವಾರು ಕ್ರೀಡೆಗಳನ್ನು ಆಡುತ್ತಿದ್ದರು ಮತ್ತು ರಾಷ್ಟ್ರೀಯ ಮಠದ ಸ್ಕೇಟಿಂಗ್ ಚಾಂಪಿಯನ್ ಕೂಡ ಆಗಿದ್ದರು ಇವೆಲ್ಲ ಅವರಲ್ಲಿ ಬಾಡಿ ಬಿಲ್ಡರ್ ಉತ್ಸಾಹ ತುಂಬಿ ಅವರನ್ನು ಅದರ ಕಡೆ ತಿರುಗುವಂತೆ ಮಾಡಿತು.

2014ರಲ್ಲಿ ಮುಂಬೈನಲ್ಲಿ ಕಾನೂನು ಅಧ್ಯಯನ ಮಾಡುವುದರ ಜೊತೆಗೆ ತೂಕದ ತರಬೇತಿಯನ್ನು ಕೂಡ ಪ್ರಾರಂಭಿಸಿದರು ತರಬೇತಿಯನ್ನು ಪ್ರಾರಂಭಿಸಲು ಮುಖ್ಯ ಕಾರಣ ಎಂದರೆ ಮಜಲ್ ಗಳನ್ನು ಹೆಚ್ಚಿಸುವುದು ಮತ್ತು ಅವುಗಳ ನೇರ ಚೌಕಟ್ಟುಗಳನ್ನು ಪರಿವರ್ತಿಸುವುದು. ಟ್ರಾನ್ಸ್ ಜೆಂಡರ್ ಗಾಗಿ ನಡೆಯುವ ವಿಶ್ವದ ಏಕೈಕ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಅವರ ಮುಂದೆ ಇದ್ದಂತಹ ಸವಾಲಿನ ಸಂಕೋಲೆಗಳು ಅವರನ್ನು ಗೆಲುವಿನತ್ತ ಕೊಂಡೊಯ್ಯಲು ಮುಂದಾಯಿತು.

Leave a Reply

Your email address will not be published. Required fields are marked *