7 ವರ್ಷದ ಪುಟ್ಟಮಗು ಕಿಡ್ನಾಪ್ ಆಗುತ್ತೆ ಕಾಣೆಯಾದ ಮಗುವನ್ನು ಹೆತ್ತ ತಾಯಿ ಹುಡುಕಿದ್ದು ಹೇಗೆ ಕಿಡ್ನಾಪ್ ಮಾಡಿದವರು ಯಾರು? » Karnataka's Best News Portal

7 ವರ್ಷದ ಪುಟ್ಟಮಗು ಕಿಡ್ನಾಪ್ ಆಗುತ್ತೆ ಕಾಣೆಯಾದ ಮಗುವನ್ನು ಹೆತ್ತ ತಾಯಿ ಹುಡುಕಿದ್ದು ಹೇಗೆ ಕಿಡ್ನಾಪ್ ಮಾಡಿದವರು ಯಾರು?

ಏಳು ವರ್ಷದ ಪುಟ್ಟ ಮಗು ಕಿಡ್ನಾಪ್ ಆಗುತ್ತೆ! ಕಾಣೆಯಾದ ಮಗುವನ್ನು ಹೆತ್ತ ತಾಯಿ ಹುಡುಕಿದ್ದು ಹೇಗೆ?
ಈ ದಿನ ನಾವು ಹೇಳುತ್ತಿರುವಂತಹ ಈವಿಷಯ ಸತ್ಯ ಘಟನೆಯಾಗಿದ್ದು ಈ ಒಂದು ಘಟನೆ ನಡೆದಿದ್ದು ಮುಂಬೈ ನಗರದಲ್ಲಿ! ಹೌದು ಮುಂಬೈನ ಅಂದೇರಿ ಎನ್ನುವ ಏರಿಯಾದಲ್ಲಿ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ನಾಲ್ಕು ಜನ ವಾಸ ಮಾಡುತ್ತಿರುತ್ತಾರೆ ತಂದೆ ತಾಯಿ ಹಾಗೂ ಇಬ್ಬರು ಮಕ್ಕಳು.

WhatsApp Group Join Now
Telegram Group Join Now

ಮೊದಲನೆಯ ಮಗ ಸಂತೋಷ್ ಎರಡನೆಯ ಮಗಳು ಪೂಜಾ ಎಂದು, ಎಲ್ಲರೂ ಕೂಡ ಸಂತೋಷದ ಜೀವನವನ್ನು ನಡೆಸುತ್ತಿರುತ್ತಾರೆ. ಒಂದು ದಿನ ಶಾಲೆಗೆ ಹೋಗಿ ಬರುವಂತಹ ಸಮಯದಲ್ಲಿ ಸಂತೋಷ್ ಮತ್ತು ಪೂಜಾ ಇಬ್ಬರು ಬರುವಾಗ ಪೂಜಾ ಕಾಣೆಯಾಗುತ್ತಾಳೆ! ಆಗ ಮನೆಯವರೆಲ್ಲರೂ ಕೂಡ ಪೂಜ ಎಲ್ಲಿ ಹೋದಳು ಎಂದು ಹುಡುಕುವುದರಲ್ಲಿ ಮುಂದಾಗಿರುತ್ತಾರೆ.


ಆದರೆ ಕಳೆದು ಹೋದಂತಹ ಪೂಜ ನಾಲ್ಕು ವರ್ಷ ಐದು ವರ್ಷ ಆದರೂ ಕೂಡ ಸಿಗುವುದಿಲ್ಲ ಇದೇ ಶೋಕಸಾಗರದಲ್ಲಿ ಕುಟುಂಬದವರೆಲ್ಲರೂ ಮುಳುಗುತ್ತಾರೆ. ಈ ಸಮಯದಲ್ಲಿ ಪೂಜ ಅವರ ತಂದೆ ಕ್ಯಾನ್ಸರ್ ಎನ್ನುವ ದೊಡ್ಡ ಕಾಯಿಲೆ ಬಂದು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಮೊದಲೇ ಮಗಳು ಹೋಗಿರುವಂತಹ ವಿಷಯ ತಾಯಿಗೆ ದುಃಖವನ್ನು ತಂದಿತ್ತು ಅದೇ ಸಮಯದಲ್ಲಿ ತನ್ನ ಪತಿಯು ಕೂಡ ತನ್ನನ್ನು ಬಿಟ್ಟು ಹೋಗಿರುವುದು ಸಮುದ್ರದಲ್ಲಿ ಹಡಗು ಮುಳುಗಿದಂತೆ ಆ ತಾಯಿಗೆ ಅಂದಿನ ಪರಿಸ್ಥಿತಿ ಇತ್ತು.

See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ಆದರೆ ತಾಯಿ ಮಾತ್ರ ತನ್ನ ಮಗಳನ್ನು ಹುಡುಕುವುದರಲ್ಲಿ ಹಿಂದೆ ಉಳಿಯಲಿಲ್ಲ. ಬದಲಿಗೆ ಪ್ರತಿದಿನ ಸಿಕ್ಕಸಿಕ್ಕ ದಾರಿಗಳಲ್ಲಿ ಹೋಗುತ್ತಾ ತನ್ನ ಮಗಳನ್ನು ಹುಡುಕುವಂತಹ ಕಾರ್ಯದಲ್ಲಿಯೇ ಇದ್ದಳು. ಕೊನೆಗೆ ಪೂಜ ಅವರ ತಾಯಿ ದೊಡ್ಡ ಗಣ್ಯ ವ್ಯಕ್ತಿಯನ್ನು ಭೇಟಿಯಾಗಿ ನನ್ನ ಮಗಳು ಕಾಣೆಯಾಗಿದ್ದಾಳೆ? ನನ್ನ ಮಗಳನ್ನು ಹುಡುಕಿಸಿಕೊಡಿ ಎಂದು ಅವರಿಗೆ ಅಂಗಲಾಚುತ್ತಾಳೆ.

ಆಗ ಅವರು ಆ ಹುಡುಗಿಯ ಫೋಟೋವನ್ನು ಪೇಪರ್ ಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಹಾಕಿಸಿದಾಗ ಯಾರೋ ಒಬ್ಬ ವ್ಯಕ್ತಿ ಈ ಹುಡುಗಿ ನಮ್ಮ ಅಂಗಡಿಗೆ ಪ್ರತಿನಿತ್ಯ ಬರುತ್ತಾಳೆ ನಾನು ಈ ಹುಡುಗಿಯನ್ನು ನೋಡಿದ್ದೇನೆ ಎಂದು ಹೇಳುತ್ತಾಳೆ. ಆಗ ತಕ್ಷಣವೇ ಪೂಜ ತಾಯಿ ಹಾಗೂ ಎಲ್ಲರೂ ಅವರ ಅಂಗಡಿಯ ಬಳಿ ಹೋಗುತ್ತಾರೆ.

ಆಗ ಅಂಗಡಿಯ ಬಳಿ ಹುಡುಗಿ ಬಂದ ತಕ್ಷಣ ಪೂಜ ತಾಯಿ ಅವಳನ್ನು ಮಾತನಾಡಿಸುತ್ತಾ ಇಷ್ಟು ದಿನ ಎಲ್ಲಿ ಹೋಗಿದ್ದೆ, ಎಲ್ಲಿದ್ದೀಯ ನೀನು ಎಂದಾಗ ಆ ಹುಡುಗಿ ಅವತ್ತು ನನ್ನನ್ನು ಒಬ್ಬರು ಕರೆದುಕೊಂಡು ಹೋದರು, ಎಲ್ಲೂ ಹೊರಗಡೆ ನನ್ನನ್ನು ಬಿಡುತ್ತಿರಲಿಲ್ಲ, ಬದಲಿಗೆ ಮನೆ ಕೆಲಸವನ್ನು ಮಾಡುವುದಕ್ಕೆ ನನ್ನನ್ನು ಇರಿಸಿಕೊಂಡಿದ್ದಾರೆ ನನ್ನನ್ನು ಶಾಲೆಗೂ ಕಳಿಸಲಿಲ್ಲ ಎಂದು ಎಲ್ಲರ ಮುಂದೆ ಹೇಳುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">