ಯಾವ ಜಿಲ್ಲೆಯಲ್ಲಿ ಎಷ್ಟು ಸಚಿವರಿದ್ದಾರೆ ಸಚಿವರ ಜಾತಿ ಶಿಕ್ಷಣ ಯಾವ ಜಾತಿಯ ಸಚಿವರು ಎಷ್ಟಿದ್ದಾರೆ ನೋಡಿ - Karnataka's Best News Portal

ಯಾವ ಜಿಲ್ಲೆಯಲ್ಲಿ ಎಷ್ಟು ಸಚಿವರಿದ್ದಾರೆ? ಎಷ್ಟು ಓದಿದ್ದಾರೆ..??ನಮ್ಮ ಸರ್ಕಾರದಲ್ಲಿ ಹಲವಾರು ಜನ ಸಚಿವರು ಇದ್ದು ಎಲ್ಲರೂ ಕೂಡ ತಮ್ಮದೇ ಆದಂತಹ ವಿದ್ಯಾಭ್ಯಾಸವನ್ನು ಹೊಂದಿದ್ದಾರೆ ಹಾಗಾದರೆ ಈ ದಿನ ಯಾವ ಸಚಿವರು ಎಷ್ಟು ಓದಿದ್ದಾರೆ ಹಾಗೂ ಯಾವ ಯಾವ ಜಾತಿಯವರಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನವನ್ನು ಕೊಡಲಾಗಿದೆ. ಹಾಗೂ ಬೋಮ್ಮಾಯಿ ಸಂಪುಟದಲ್ಲಿ ಹೆಚ್ಚಾಗಿ ಯಾವ ಜಾತಿಯ ಸಚಿವರು ಇದ್ದಾರೆ ಹೀಗೆ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿಯುತ್ತಾ ಹೋಗೋಣ.

ಮೊದಲನೆಯದಾಗಿ ಬಸವರಾಜ್ ಬೊಮ್ಮಾಯಿ ಪ್ರಸ್ತುತ ಸಿಎಂ ಆಗಿರುವ ಇವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಸಚಿವಾಲಯ ವ್ಯವಹಾರ ಇಲಾಖೆ, ಹಣಕಾಸು ಇಲಾಖೆ, ಬೆಂಗಳೂರು ಅಭಿವೃದ್ಧಿ, ಗುಪ್ತಚರ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.


ಇವರು ಹಾವೇರಿಯ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿದ್ದಾರೆ, ಲಿಂಗಾಯತ ಸಮುದಾಯದವರಾದ ಇವರು ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದು ಕೊಂಡಿದ್ದಾರೆ. ಎರಡನೆಯದಾಗಿ ಗೋವಿಂದ ಎಂ ಕಾರಜೋಳ ಇವರ ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆಯ ಸಚಿವರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದ ಶಾಸಕರಾಗಿದ್ದು ಇವರು ದಲಿತ ಸಮುದಾಯಕ್ಕೆ ಸೇರಿದ್ದಾರೆ ಇವರು ಎಸ್ ಎಸ್ ಎಲ್ ಸಿ ಶಿಕ್ಷಣ ಪಡೆದಿದ್ದಾರೆ.

ಆರ್ ಅಶೋಕ್ ಬಿಜೆಪಿಯಲ್ಲಿ ಹಿರಿಯ ನಾಯಕರಾದ ಆರ್ ಅಶೋಕ್ ಅವರು ಕಂದಾಯ ಇಲಾಖೆಯ ಸಚಿವರಾಗಿದ್ದಾರೆ, ಇವರು ಬೆಂಗಳೂರು ನಗರದ ಪದ್ಮನಾಭ ಕ್ಷೇತ್ರದ ಶಾಸಕರಾಗಿದ್ದಾರೆ ಇವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ಇವರು ಬಿಎಸ್ಸಿ ಪದವಿಯನ್ನು ಪಡೆದುಕೊಂಡಿದ್ದಾರೆ. ಬಿ ಶ್ರೀರಾಮುಲು, ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಮೂರು ಜನ ಸಿಎಂಗಳನ್ನು ಮಾಡಿದಾಗ, ಇವರನ್ನು ಕೂಡ ಸಿಎಂ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು.

ಆದರೆ ಇವರನ್ನು ಮಾಡಲಿಲ್ಲ, ಸದ್ಯ ಇವರು ಈಗ ಸಾರಿಗೆ ಇಲಾಖೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿದ್ದಾರೆ ಇವರು ನಾಯಕ ಸಮುದಾಯದವರಾಗಿದ್ದು ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ವಿ ಸೋಮಣ್ಣ ಇವರು ವಸತಿ ಇಲಾಖೆಯ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದು, ಬೆಂಗಳೂರು ಜಿಲ್ಲೆಯ ಗೋವಿಂದರಾಜನಗರದ ಶಾಸಕರಾಗಿದ್ದು.

ಇವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಇವರು ಬಿಎ ಪದವಿಯನ್ನು ಪಡೆದಿದ್ದಾರೆ. ಎಸ್ ಅಂಗಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಸಚಿವರಾದ ಇವರು ಮೀನುಗಾರಿಕೆ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವರಾಗಿದ್ದಾರೆ. ಇವರು ಎಸ್ ಸಿ ಸಮುದಾಯಕ್ಕೆ ಸೇರಿದ್ದು 9ನೇ ತರಗತಿಯಲ್ಲಿ ಫೇಲ್ ಕೂಡ ಆಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *