ತುಲಾ ರಾಶಿ ಮಾರ್ಚ್ 2023 ಮಾಸ ಭವಿಷ್ಯ ಆ ಒಂದು ಕೆಲಸ ಕೈಗೂಡಲಿದೆ ಗೊತ್ತಾ ? ನಿಮ್ಮ ಈ ತಿಂಗಳ ಭವಿಷ್ಯ ನೋಡಿ - Karnataka's Best News Portal

ತುಲಾ ರಾಶಿ ಮಾರ್ಚ್ ತಿಂಗಳ ಮಾಸ ಭವಿಷ್ಯ 2023….||ಶುಭ ವಿಚಾರಗಳು!!ತುಲಾ ರಾಶಿಯ ಮಾಸ ಭವಿಷ್ಯವನ್ನು ನೋಡುವುದಕ್ಕೂ ಮೊದಲು ಮಾರ್ಚ್ ತಿಂಗಳ ಮಾಸ ಭವಿಷ್ಯದಲ್ಲಿ ಗ್ರಹ ಸ್ಥಿತಿಗಳು ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ. ಮಾರ್ಚ್ 12ನೇ ತಾರೀಖು ಮಿಥುನ ರಾಶಿಗೆ ಕುಜ ಗ್ರಹ ಬರಲಿದ್ದಾನೆ, ಅಂದರೆ ನಿಮ್ಮ ಧನ ಸಪ್ತಮಾಧಿಪತಿ ಅಷ್ಟಮದಿಂದ 8ನೇ ಮನೆಯಿಂದ 9ನೇ ಮನೆಗೆ ಬರಲಿದ್ದಾನೆ.

ಅದೇ ರೀತಿ ಮಾರ್ಚ್ 12ನೇ ತಾರೀಖಿನಂದೆ ಮೇಷ ರಾಶಿಗೆ ಶುಕ್ರ ಗ್ರಹ ಬರಲಿದ್ದಾನೆ ನಿಮ್ಮ ರಾಶಿಯ ಅಧಿಪತಿ ಹಾಗೂ 8ನೇ ಮನೆ ಅಧಿಪತಿಯಾಗಿರುವಂತಹ ಶುಕ್ರ 7ನೇ ಮನೆಗೆ ಬರಲಿದ್ದಾನೆ. ಹಾಗೂ ಮಾರ್ಚ್ 14ನೇ ತಾರೀಖು ಮೀನ ರಾಶಿಗೆ ರವಿ ಬರಲಿದ್ದಾನೆ ನಿಮ್ಮ ಲಾಭಾಧಿಪತಿ 6ನೇ ಮನೆ ಅಂದರೆ ಷಷ್ಟಕ್ಕೆ ಬರಲಿದ್ದಾನೆ.


ಇನ್ನು ಮಾರ್ಚ್ 16ನೇ ತಾರೀಖು, ಮೀನ ರಾಶಿಯ ಬುಧ ಗ್ರಹ ಬರಲಿದ್ದಾನೆ, ನಿಮ್ಮ ಭಾಗ್ಯಾಧಿಪತಿ ಹಾಗೂ ವ್ಯಯಾಧಿಪತಿ ಷಷ್ಟಕ್ಕೆ ಬಂದು 6ನೇ ಮನೆಯಲ್ಲಿ ನೀಚ ಸ್ಥಿತಿ ಹೊಂದಲಿದ್ದಾನೆ. ಒಟ್ಟಾರೆಯಾಗಿ ಗ್ರಹಗಳ ಪರಿಸ್ಥಿತಿ ತಿಳಿದುಕೊಂಡೆವು ಇನ್ನೂ ತುಲಾ ರಾಶಿಯವರಿಗೆ ಮಾರ್ಚ್ ತಿಂಗಳು ಯಾವ ರೀತಿಯಾದಂತಹ ಶುಭ ವಿಚಾರಗಳು ಇರುತ್ತದೆ ಎಂದು ನೋಡುವುದಾದರೆ.

ಬುಧ ಗ್ರಹ ಮಾರ್ಚ್ 16ನೇ ತಾರೀಕು ಮೀನ ರಾಶಿಗೆ ಬರಲಿದ್ದಾನೆ, ಅಂದರೆ ಷಷ್ಟ ನೀಚ ಸ್ಥಿತಿ ಹೊಂದಿದ್ದಾನೆ ಎಂದರೆ ನೀವು ವ್ಯರ್ಥವಾಗಿ ಬೇರೆ ಯಾವುದಕ್ಕಾದರೂ ಹಣ ಖರ್ಚು ಮಾಡುತ್ತಿದ್ದರೆ ಅದು ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ನಿಮ್ಮ ಖರ್ಚಿನ ಪ್ರಮಾಣವೂ ಕೂಡ ಕಡಿಮೆಯಾಗುತ್ತದೆ, ಅಥವಾ ನೀವೇನಾದರೂ ಬೇರೆಯವರ ಬಳಿ ಸಾಲವನ್ನು ಪಡೆದುಕೊಂಡಿದ್ದರೆ ಅದಕ್ಕೆ ಬಡ್ಡಿಯನ್ನು ಕಟ್ಟುವಂತಹ ಪ್ರಮಾಣ ಕಡಿಮೆಯಾಗುತ್ತದೆ ಒಟ್ಟಾರೆಯಾಗಿ ನೀವು ಕಟ್ಟುವಂತಹ ಹಣ ಉಳಿತಾಯವಾಗುತ್ತದೆ.

ರವಿ ಗ್ರಹ ಮಾರ್ಚ್ 14ನೇ ತಾರೀಖು 6ನೇ ಮನೆಗೆ ಬರಲಿದ್ದಾನೆ ಇದರಿಂದ ಕುಟುಂಬಸ್ಥರೊಟ್ಟಿಗೆ ನಿಮಗೇನಾದರೂ ಭಿನ್ನಾಭಿಪ್ರಾಯಗಳು ಇದ್ದರೆ ಈ ಸಮಯದಲ್ಲಿ ನಿಮ್ಮ ನಡುವೆ ಕೆಲವೊಂದಷ್ಟು ಮಾತುಕತೆಯ ಮೂಲಕ ಸಂಧಾನಗಳು ಕೂಡ ನಡೆಯಲಿದೆ.ಇದರಿಂದ ನಿಮ್ಮ ಸಂಬಂಧ ಮೊದಲಿನ ಸ್ಥಿತಿಗೆ ಬರುವ ಸಾಧ್ಯತೆ ಕೂಡ ಹೆಚ್ಚಾಗಿದೆ. ನೀವೇನಾದರೂ ಯಾವುದಾದರೂ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೆ.

ಅದರಿಂದ ಮುಕ್ತಿ ಪಡೆಯುತ್ತೀರಿ, ಆದರೆ ಆ ಸಂದರ್ಭದಲ್ಲಿ ಕೆಲವೊಂದಷ್ಟು ಅವಮಾನದ ಮಾತುಗಳು ಕೂಡ ಎದುರಾಗುತ್ತದೆ, ಆದರೆ ಅದನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬಾರದು ಬದಲಿಗೆ ಅದನ್ನು ಛಲವಾಗಿ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಇನ್ನೂ ಎತ್ತರದ ಸ್ಥಾನಕ್ಕೆ ಹೋಗುವಂತೆ ನೀವು ಪ್ರಯತ್ನಿಸಬೇಕು. ಒಟ್ಟಾರೆಯಾಗಿ ತುಲಾ ರಾಶಿಯವರಿಗೆ ಈ ಮಾಸ ಬಹಳ ಅತ್ಯುತ್ತಮ ವಾದ ಮಾಸವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *