ದೇಹ ಹಾಗೂ ಬಾಯಿಯ ಕೆಟ್ಟ ವಾಸನೆಗೆ ಪರಿಣಾಮಕಾರಿ ಮನೆಮದ್ದು…ಹೀಗೆ ಮಾಡಿದರೆ ಕೆಟ್ಟ ವಾಸನೆ ಬರೋದಿಲ್ಲ

ದೇಹ ಮತ್ತು ಬಾಯಿಯ ಕೆಟ್ಟ ವಾಸನೆಗೆ ಮನೆ ಮದ್ದು…!!
ದೇಹದಿಂದ ಬರುವ ದುರ್ವಾಸನೆಯನ್ನು ಯಾವ ರೀತಿ ತಡೆಗಟ್ಟಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಈ ರೀತಿಯಾದಂತಹ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳು ತ್ತದೆ. ಹಾಗಾದರೆ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳು ತ್ತಿದೆ ಎಂದರೆ ಇದಕ್ಕೆ ಏನು ಕಾರಣ ಎನ್ನುವುದನ್ನು ಈ ದಿನ ಮೊದಲು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಆನಂತರ ಇದಕ್ಕೆ ಯಾವ ಮನೆ ಮದ್ದನ್ನು ಉಪಯೋಗಿಸುವುದರ ಮುಖಾಂತರ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಎನ್ನುವ ಮಾಹಿತಿಯನ್ನು ತಿಳಿಯೋಣ. ಮೊದಲನೆಯದಾಗಿ ಇದಕ್ಕೆ ಕಾರಣ ಏನು ಎಂಬುದನ್ನು ನೋಡುವುದಾದರೆ ಅಜೀರ್ಣ ಮಲಬದ್ಧತೆ ಹಾಗೂ ಅತಿಯಾದ ದೇಹದ ತೂಕ ಏನಿದು ಎಲ್ಲದಕ್ಕೂ ಅಜೀರ್ಣ ಮಲಬದ್ಧತೆ ಎಂದು ನೀವು ಪ್ರಶ್ನಿಸಬಹುದು? ಆದರೆ ಇದು ಸತ್ಯ.


ಪ್ರತಿಯೊಬ್ಬ ಮನುಷ್ಯರಿಗೂ ಕೂಡ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ಅದಕ್ಕೆ ಮೊದಲನೆಯದಾಗಿ ಬಹಳ ಮುಖ್ಯವಾದ ಕಾರಣ ಏನು ಎಂದರೆ ಅವನ ದೇಹದಲ್ಲಿ ಉಂಟಾಗುವ ಅಜೀರ್ಣ ಮತ್ತು ಮಲಬದ್ಧತೆ, ಆದ್ದರಿಂದ ಪ್ರತಿಯೊಬ್ಬರೂ ಇದರ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದು ಉತ್ತಮ. ಹಾಗೂ ಮಾನಸಿಕ ಒತ್ತಡದಿಂದ ಹಾಗೂ ಶರೀರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ಈ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಜೊತೆಗೆ ಹೆಣ್ಣು ಮಕ್ಕಳು ದೇಹಕ್ಕೆ ಅಂಟಿಕೊಳ್ಳುವ ಹಾಗೆ ಜೀನ್ಸ್ ಬಟ್ಟೆಗಳನ್ನು ಧರಿಸುವುದರಿಂದ ಈ ರೀತಿಯ ಸಮಸ್ಯೆ ಎದುರಿಸುತ್ತಿರು ತ್ತಾರೆ. ಹಾಗಾದರೆ ಇಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣಪಡಿಸಿ ಕೊಳ್ಳಬೇಕು ಎಂದು ಹಲವಾರು ಮಾಹಿತಿಯನ್ನು ಹುಡುಕುತ್ತಿರುವವರಿಗೆ ಈ ದಿನ ನಾವು ಹೇಳುವ ಈ ಮನೆಮದ್ದನ್ನು ಮಾಡಿ ನೀವು ಉಪಯೋಗಿಸುವುದರಿಂದ ಈ ಸಮಸ್ಯೆಯನ್ನು ಸಂಪೂರ್ಣವಾಗಿ ತೆಗೆದು ಹಾಕಬಹುದು. ಹಾಗಾದರೆ ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದರೆ.

ಜೇನು, ಕಮಲದ ಹೂವಿನ ಬೊಬ್ಬಳೆಗಳು, ದಾಳಿಂಬೆ ಹಣ್ಣಿನ ಬೀಜಗಳು ಹಾಗೂ ಲೋದ್ರ ಈ ನಾಲ್ಕು ಪದಾರ್ಥಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇಷ್ಟನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿ ಕೊಳ್ಳಬೇಕು ನಂತರ ಇದನ್ನು ನಿಮ್ಮ ಇಡೀ ದೇಹಕ್ಕೆ ಹಚ್ಚಿ ಬೆಳಗಿನ ಸಮಯ ಸೂರ್ಯನ ಕಿರಣಗಳಿಗೆ ನಿಮ್ಮ ಮೈಯನ್ನು ಒಡ್ಡಿ ನಂತರ ಸ್ನಾನ ಮಾಡಬೇಕು.

ಈ ರೀತಿ 21 ದಿನಗಳವರೆಗೆ ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುವಂತಹ ಬೆವರಿನ ದುರ್ಗಂಧ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಆದರೆ ಬಹಳಷ್ಟು ಜನ ಈ ಸಮಸ್ಯೆಗೆ ಒಳಗಾಗಿ ಹೆಚ್ಚು ಸೆಂಟ್ ಇವುಗಳನ್ನು ಉಪಯೋಗಿಸುತ್ತಿರು ತ್ತಾರೆ ಆದರೆ ಇವುಗಳನ್ನು ಬಳಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಕ್ಯಾನ್ಸಲ್ ಕೂಡ ಬರುತ್ತದೆ ಆದ್ದರಿಂದ ಇವುಗಳ ಬದಲಿಗೆ ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]