ಹೊಚ್ಚ ಹೊಸ ಟ್ರಿಕ್..||ಇದನ್ನು ಹಚ್ಚಿದ ಮೇಲೆ ಮಾರ್ಕೆಟ್ ಡೈ ಮತ್ತೆ ಯಾವತ್ತು ಹಚ್ಚೋದೆ ಇಲ್ಲ….|
ಬಹಳ ಹಿಂದಿನ ಕಾಲದಲ್ಲಿ ತಲೆಕೂದಲು ವಯಸ್ಸಾದವರಿಗೆ ಮಾತ್ರ ಬೆಳ್ಳಗಾಗುತ್ತಿತ್ತು. ಆದರೆ ಈಗ ಕಾಲ ತುಂಬಾ ಬದಲಾಗಿದೆ ಚಿಕ್ಕ ಮಕ್ಕಳಿಗೂ ಕೂಡ ಬಿಳಿ ಕೂದಲು ಕಾಣಿಸಿಕೊಳ್ಳುವಂತಹ ಸಮಸ್ಯೆ ಎದುರಾಗುತ್ತಿದೆ. ಆದರೆ ಅವೆಲ್ಲದಕ್ಕೂ ಕಾರಣ ಏನು ಎನ್ನುವುದನ್ನು ಹೆಚ್ಚಾಗಿ ಯಾರು ಕೂಡ ತಿಳಿದುಕೊಳ್ಳುವುದಿಲ್ಲ, ತಿಳಿದರು ಕೆಲವೊಂದು ಹಾರ್ಮೋನ್ ಗಳ ವ್ಯತ್ಯಾಸದಿಂದ.
ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವರಿಗೆ ಕೆಲವೊಂದಷ್ಟು ಮಾತ್ರೆಗಳನ್ನು ಕೆಲವೊಂದು ಔಷಧಿಗಳನ್ನು ಕೊಡಿಸುತ್ತಿರುತ್ತಾರೆ. ಆದರೆ ಈ ರೀತಿಯಾಗಿ ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಔಷಧಿಗಳನ್ನು ಕೊಡುವುದರಿಂದ ಅವರಿಗೆ ಮುಂದಿನ ದಿನಗಳಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಆದರೆ ಅವುಗಳನ್ನು ಸರಿಪಡಿಸುವಂತೆ ಒಳ್ಳೆಯ ಆಹಾರ ಕ್ರಮವನ್ನು ಅವರ ತಲೆಕೂದಲಿನ ಸಮಸ್ಯೆಗೆ ಪರಿಹಾರವಾಗುವಂತೆ ಆಹಾರ ಕ್ರಮವನ್ನು ಅನುಸರಿಸುವುದರಿಂದ.
ಅವರ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅದೇ ರೀತಿಯಾಗಿ ಈ ದಿನ ದೊಡ್ಡವರಿಗೆ ತಲೆ ಕೂದಲು ಬೆಳ್ಳಗಾಗಿದ್ದರೆ ಪ್ರತಿಯೊಬ್ಬರೂ ಕೂಡ ಮಾರುಕಟ್ಟೆಗಳಲ್ಲಿ ಸಿಗುವಂತ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಡೈ ಗಳನ್ನು ತಂದು ಹಚ್ಚುತ್ತೀರಿ, ಆದರೆ ಅವುಗಳನ್ನು ಹಚ್ಚುವುದರಿಂದ ಹೆಚ್ಚು ದಿನದವರೆಗೂ ಕೂಡ ಇರುವುದಿಲ್ಲ ಅದರಲ್ಲೂ ಅದರಿಂದ ಕೆಲವೊಂದಷ್ಟು ಸಮಸ್ಯೆಗಳನ್ನು ಕೂಡ ಅನುಭವಿಸಬೇಕಾಗು ತ್ತದೆ
ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಂತೂ ಮೊದಲನೆಯ ದಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಅವೆಲ್ಲವನ್ನು ಕೂಡ ಉಪಯೋಗಿಸು ವುದರ ಬದಲು. ಈ ದಿನ ನಾವು ಹೇಳುವಂತಹ ನ್ಯಾಚುರಲ್ ಹೇರ್ ಡೈ ಮಾಡಿಕೊಂಡು ನೀವೇ ನಿಮ್ಮ ಮನೆಯಲ್ಲಿ ಹಚ್ಚುವುದರಿಂದ ಯಾವುದೇ ರೀತಿಯ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಇದರಿಂದ ಉತ್ತಮ ಫಲಿತಾಂಶವನ್ನು ನೀವು ಪಡೆಯಬಹುದು. ಹಾಗಾದರೆ ಈ ಒಂದು ಡೈ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಎಂದು ಈ ಕೆಳಗಿನಂತೆ ನೋಡೋಣ.
50 ಗ್ರಾಂ ಒಣಗಿರುವ ಬೆಟ್ಟದ ನೆಲ್ಲಿಕಾಯಿ ಯನ್ನು ಒಂದು ಕಬ್ಬಿಣದ ಬಾಣಲೆಗೆ ಹಾಕಿ ಚೆನ್ನಾಗಿ ಕಪ್ಪಾಗುವ ತನಕ ಉರಿದುಕೊಳ್ಳಬೇಕು ಅದು ಸಂಪೂರ್ಣವಾಗಿ ಕಪ್ಪಾದ ನಂತರ ಅದಕ್ಕೆ ಒಂದು ಲೋಟ ನೀರನ್ನು ಹಾಕಿ ಆ ನೀರು ಕಾಲು ಲೋಟ ಆಗುವ ತನಕ ಚೆನ್ನಾಗಿ ಕುದಿಸಬೇಕು ನಂತರ ಅದನ್ನು ಒಂದು ದಿನ ಹಾಗೆ ಬಿಟ್ಟು ನಂತರ ಮಾರನೇ ದಿನ ಅದನ್ನು ಶೋಧಿಸಿಕೊಳ್ಳಬೇಕು.
ನಂತರ ಶೋಧಿಸಿಟ್ಟಂತಹ ಈ ನೀರಿಗೆ ಎರಡು ಚಮಚ ಮೆಹಂದಿ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಬೆಟ್ಟದ ನೆಲ್ಲಿಕಾಯಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಕಪ್ಪಾಗಿ ಉರಿದಿರುವುದ ರಿಂದ ಅದರಲ್ಲಿರುವ ಅಂಶವೆಲ್ಲವೂ ಕೂಡ ಆ ನೀರಿನಲ್ಲಿ ಇರುತ್ತದೆ ಜೊತೆಗೆ ಅದಕ್ಕೆ ಮೆಹಂದಿ ಪೌಡರ್ ಹಾಕಿದರೆ ಅದರ ಗುಣಮಟ್ಟ ಇನ್ನು ಹೆಚ್ಚಾಗುತ್ತದೆ. ಇದನ್ನು ನಿಮ್ಮ ತಲೆ ಕೂದಲಿಗೆ ಹಚ್ಚಿ ತಲೆಸ್ನಾನ ಮಾಡುವುದರಿಂದ ತಲೆ ಕೂದಲು ಕಪ್ಪಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.