ಎಕ್ಕದ ಗಿಡ ವಾಸ್ತು ನಿಮ್ಮ ಮನೆ ಮುಂದೆ ಈ ಭಾಗದಲ್ಲಿ ಎಕ್ಕದ ಗಿಡ ಬೆಳೆದರೆ ಮನೆಯಲ್ಲಿ ಸದಾ ಶುಭ ಧನಲಾಭ ಸಿರಿತನ

ಎಕ್ಕದ ಗಿಡದ ವಾಸ್ತು||ನಿಮ್ಮ ಮನೆಯ ಈ ಭಾಗದಲ್ಲಿ ಎಕ್ಕದ ಗಿಡ ಬೆಳೆಸಿದರೆ ಮನೆಯಲ್ಲಿ ಸದಾ ಸಿರಿತನ ತುಂಬಿರುತ್ತೆ….!!

WhatsApp Group Join Now
Telegram Group Join Now

ಎಕ್ಕದ ಗಿಡದಲ್ಲಿ ಎರಡು ವಿಧಗಳಿದ್ದು ಮೊದಲನೆಯದಾಗಿ ಬಿಳಿ ಎಕ್ಕದ ಗಿಡ ಹಾಗೂ ನೇರಳೆ ಬಣ್ಣದ ಗಿಡ. ಅದರಲ್ಲೂ ಸಾಮಾನ್ಯವಾಗಿ ಬಿಳಿ ಎಕ್ಕದ ಗಿಡದ ಹೂವನ್ನು ಗಣಪತಿಗೆ ಹಾಗೂ ಶಿವನ ದೇವಸ್ಥಾನಗಳಿಗೆ ಹಾಗೂ ಇನ್ನೂ ಕೆಲವು ಅದನ್ನು ಅಂಗಡಿ ನಡೆಸುವಂತಹ ಜಾಗಗಳಲ್ಲಿ ಇಟ್ಟುಕೊಂಡಿರುತ್ತಾರೆ.

ಅದರಲ್ಲೂ ಮುಖ್ಯವಾಗಿ ಗಣಪತಿಗೆ ಎಕ್ಕದ ಹೂವಿನಿಂದ ಹಾರವನ್ನು ಮಾಡಿ ಅರ್ಪಿಸುತ್ತೇವೆ. ಇದರಿಂದ ನಿಮ್ಮಲ್ಲಿರುವ ಎಲ್ಲಾ ಸಮಸ್ಯೆ ತೊಂದರೆ ದೂರವಾಗುತ್ತದೆ ಎನ್ನುವ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಕೂಡ ಇದೆ ಆದ್ದರಿಂದ ಗಣಪತಿಗೆ ಎಕ್ಕದ ಗಿಡದ ಹೂವನ್ನು ಸಾಮಾನ್ಯವಾಗಿ ಎಲ್ಲರೂ ಅರ್ಪಿಸುತ್ತಿರುತ್ತಾರೆ. ಆದರೆ ಈ ದಿನ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸುವುದರಿಂದ ಏನೆಲ್ಲಾ ಅಭಿವೃದ್ಧಿ ಉಂಟಾಗುತ್ತದೆ.

ಹಾಗೂ ಇದನ್ನು ನಿಮ್ಮ ಮನೆಯ ಯಾವ ದಿಕ್ಕಿನಲ್ಲಿ ಬೆಳೆಸುವುದರಿಂದ ನಿಮ್ಮಲ್ಲಿರುವಂತಹ ಎಲ್ಲ ಸಂಕಷ್ಟಗಳು ದೂರವಾಗಿ ನಿಮ್ಮ ಮನೆಯಲ್ಲಿ ಅಭಿವೃದ್ಧಿ ಎನ್ನುವುದು ಹೆಚ್ಚಾಗುತ್ತದೆ,ಹೀಗೆ ಎಕ್ಕದ ಗಿಡಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಕೆಲವೊಬ್ಬರು ಎಕ್ಕದ ಗಿಡವನ್ನು ಮನೆಯ ಬಳಿ ತಂದು ನೆಟ್ಟರೆ ಬರುವುದಿಲ್ಲ ಅದು ತಾನಾಗಿಯೇ ಹುಟ್ಟಬೇಕು ಆಗ ಆ ಮನೆಯಲ್ಲಿ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ, ಆದರೆ ಅದು ತಪ್ಪು, ಬದಲಿಗೆ ಎಕ್ಕದ ಗಿಡದಲ್ಲಿ ಬಿಡುವಂತಹ ಬೀಜ ಹಲವಾರು ವರ್ಷಗಳಿಂದ ಇದ್ದು ಆ ಬೀಜ ಕೆಳಗೆ ಇದ್ದರೆ ಮಾತ್ರ ಆಗಿಡ ಹುಟ್ಟಲು ಸಾಧ್ಯ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ಅದರಲ್ಲೂ ಕೆಲವೊಬ್ಬರು ಬಿಳಿ ಎಕ್ಕದ ಗಿಡ ಕೇವಲ ಪೂಜೆಗಷ್ಟೇ ಇರುವುದು ಎಂದುಕೊಳ್ಳುತ್ತಾರೆ ಆದರೆ ಅದು ತಪ್ಪು ಬದಲಿಗೆ ಎಕ್ಕದ ಗಿಡದ ಹೂವನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಅಥವಾ ನಿಮ್ಮ ಮನೆಯ ಮುಂಭಾಗಲಿನಲ್ಲಿ ಅದರ ಹಾರವನ್ನು ಹಾಕುವುದರಿಂದ ನಿಮ್ಮ ಮನೆಯ ಮೇಲೆ ಯಾರದ್ದಾದರೂ ಕೆಟ್ಟ ದೃಷ್ಟಿ ಇದ್ದರೆ ನಕಾರಾತ್ಮಕ ದೃಷ್ಟಿ ಇದ್ದರೆ ಅವೆಲ್ಲವೂ ಕೂಡ ದೂರವಾಗುತ್ತದೆ ಮನೆಗೆ ಲಕ್ಷ್ಮೀದೇವಿಯ ಆಶೀರ್ವಾದವೂ ಕೂಡ ಹೆಚ್ಚಾಗುತ್ತದೆ ಇದರಿಂದ ನಿಮ್ಮ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

ಜೊತೆಗೆ ವ್ಯಾಪಾರ ಮಾಡುವಂತಹ ಜನರು ನೀವು ಹಣವನ್ನು ಇಡುವ ಸ್ಥಳದಲ್ಲಿ ಬಿಳಿ ಎಕ್ಕದ ಹೂವನ್ನು ನೀಡುವುದರಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹಣಕಾಸಿನ ಅಭಿವೃದ್ಧಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯೂ ಕೂಡ ಇದೆ. ಹಾಗಾದರೆ ಈ ದಿನ ಎಕ್ಕದ ಗಿಡವನ್ನು ನಿಮ್ಮ ಮನೆಯ ಯಾವ ದಿಕ್ಕಿನಲ್ಲಿ ನೆಡುವುದು ಉತ್ತಮ ಎಂದರೆ ಈಶಾನ್ಯ ದಿಕ್ಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">