ಪ್ರತಿದಿನ ಮೂರು ಬಾರಿ ಕಣ್ಣು ತೆರೆಯುವ ಪರಮಾತ್ಮ ಇವನು..ಈ ಶಿವಲಿಂಗದ ದೊಡ್ಡ ರಹಸ್ಯ ನೋಡಿ. - Karnataka's Best News Portal

ಪ್ರತಿದಿನ ಮೂರು ಬಾರಿ ಕಣ್ಣು ತೆರೆಯುವ ಶಿವ ಪರಮಾತ್ಮ…. ಈ ದೇವಸ್ಥಾನದಲ್ಲಿ ಶಿವದೇವರ ಪಾದದ ಗುರುತು ಇದೆ….!!

ಪ್ರತಿದಿನ ಕಣ್ಣನ್ನು ತೆರೆದು ತನ್ನ ಬಣ್ಣವನ್ನು ಬದಲಾಯಿಸುವಂತಹ ಶಿವಲಿಂಗವನ್ನು ನೀವೆಲ್ಲಾದರೂ ನೋಡಿದ್ದೀರಾ? ಪ್ರಪಂಚದ ಏಕೈಕ ಬಣ್ಣವನ್ನು ಬದಲಾಯಿಸುವ ಶಿವಲಿಂಗ ಮಂದಿರ, ಇಲ್ಲಿ ನಡೆಯುವ ಪವಾಡವನ್ನು ನೋಡಿದರೆ ಎಂಥವರಾದರೂ ಕೂಡ ಬೆಚ್ಚಿ ಬೀಳುತ್ತಾರೆ! ಈ ಶಿವಲಿಂಗದಿಂದ ನೇರವಾಗಿ ಸ್ವರ್ಗಕ್ಕೆ ಹಾಗೂ ಪಾತಾಳಕ್ಕೆ.

ದಾರಿ ಕೂಡ ಇದೆ ಎಂದು ಹೇಳುತ್ತಾರೆ. ಮೂರು ಲೋಕವೂ ಕೂಡ ಈ ಶಿವಲಿಂಗಕ್ಕೆ ಸೇರ್ಪಡೆಯಾಗಿದೆ ಎಂದು ಪುರಾವೆಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಈ ದಿನ ಈ ಅಪರೂಪದ ಶಿವಲಿಂಗ ಎಲ್ಲಿದೆ? ಈ ಶಿವಲಿಂಗದ ವಿಶೇಷತೆ ಏನು ಎಂಬುದರ ಸಂಪೂರ್ಣ ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಈ ದೇವಸ್ಥಾನ ಎಲ್ಲಿ ಬರುತ್ತದೆ ಇದರ ವಿಳಾಸ ಯಾವುದು ಎಂದು ನೋಡುವುದಾದರೆ.

ರಾಜಸ್ಥಾನ ರಾಜ್ಯದಲ್ಲಿರುವ ಉದಯ್ ಪುರ್ ಗೆ ಹೋಗಬೇಕು ಇಲ್ಲಿಂದ 70 ಕಿ.ಮೀ ಪ್ರಯಾಣ ಮಾಡಿದರೆ ಡೋಲು ಪುರ್ ಪ್ರದೇಶ ಸಿಗುತ್ತದೆ ಇದೇ ಪ್ರದೇಶದಲ್ಲಿ ನೆಲೆಸಿರುವ ಬಣ್ಣ ಬದಲಾಯಿಸುವ ಶಿವಲಿಂಗ. ಈ ದೇವಸ್ಥಾನದ ಹೆಸರು ಶ್ರೀ ಆಚಾಲೇಶ್ವರ ಮಹಾದೇವ ಮಂದಿರ. ವಿಜ್ಞಾನ ಮತ್ತು ವಿಜ್ಞಾನಿಗಳಿಗೆ ಸವಾಲನ್ನು ಹಾಕುತ್ತಿರುವ ಶಿವಲಿಂಗ ಎಂದೇ ಹೇಳಬಹುದು.

18 ಬಾರಿ ವಿಜ್ಞಾನಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದು. ಇಲ್ಲಿ ನಡೆಯುವ ಚಮತ್ಕಾರಕ್ಕೆ ವಿಜ್ಞಾನಿಗಳ ಬಳಿ ಇಂದಿಗೂ ಕೂಡ ಯಾವುದೇ ಕಾರಣ ಇಲ್ಲ. ಪ್ರತಿದಿನ ಮೂರು ಬಾರಿ ಶಿವಲಿಂಗವು ಬಣ್ಣ ಬದಲಿಸುತ್ತದೆ. ಬೆಳಗಿನ ಜಾವದಲ್ಲಿ ಕೆಂಪು ಬಣ್ಣದಲ್ಲಿ ಇರುತ್ತದೆ ಈ ಕೆಂಪು ಬಣ್ಣವನ್ನು ಶಿವನ ಎಡಗಣ್ಣು ಎಂದು ಹೇಳಲಾಗುತ್ತದೆ. ಹಾಗೆಯೇ ಈ ಶಿವಲಿಂಗ ಮಧ್ಯಾಹ್ನ ಕೇಸರಿ ಬಣ್ಣಕ್ಕೆ ಬದಲಾಗುತ್ತದೆ.

ಇದನ್ನು ಶಿವಲಿಂಗದ ಬಲಗಣ್ಣು ಎಂದು ಹೇಳುತ್ತಾರೆ. ಹಾಗೆಯೇ ಸೂರ್ಯ ಮುಳುಗುವಂತಹ ಸಮಯದಲ್ಲಿ ಶಿವಲಿಂಗವು ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಇದನ್ನು ಶಿವನ ಮೂರನೇ ಕಣ್ಣು ಎಂದು ಹೇಳುತ್ತಾರೆ. ಈ ಶಿವಲಿಂಗದ ಮತ್ತೊಂದು ವಿಶೇಷತೆ ಏನು ಎಂದರೆ. ಈ ಶಿವಲಿಂಗ ಉದ್ಭವ ಲಿಂಗ ಎಂದು ಪುರಾವೆಗಳಲ್ಲಿ ಹೇಳಿದ್ದಾರೆ. 2008ರಲ್ಲಿ ಈ ಶಿವಲಿಂಗದ ಉದ್ದವನ್ನು ಕಂಡುಹಿಡಿಯಲು.

ಭೂಮಿಯನ್ನು ಸಾವಿರಾರು ಅಡಿ ಕೆಳಗೆ ಅಗೆಯಲಾಗುತ್ತದೆ. ಆದರೂ ಕೂಡ ಶಿವಲಿಂಗದ ಉದ್ದವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಶಿವ ಪುರಾಣ ವಿಭಜತ್ ಸಮರ್ಥ್ ಭಾಗ ಎರಡರಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಶಿವಲಿಂಗವು ಪಾತಾಳದಲ್ಲಿರುವ ಶಿವ ಪರಮಾತ್ಮನಿಂದ ಬಂದಿದೆ. ಶಿವ ಪರಮಾತ್ಮನು ಕಣ್ಣು ತೆರೆದಂತೆ ಈ ಶಿವಲಿಂಗವು ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂದು ಉಲ್ಲೇಖಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *