ಕುಬೇರ ಯಂತ್ರ ಬರೆದು ಈ ಮಂತ್ರ ಹೇಳಿ ಎಷ್ಟೇ ದರಿದ್ರವಂತನೂ ಸಹ ಧನವಂತನಾಗ್ತಾನೆ ..ಲಕ್ಷ್ಮಿ ಕುಬೇರ ಕೃಪೆಯಿಂದ ಶ್ರೀಮಂತರಾಗುವ ಯೋಗ - Karnataka's Best News Portal

ಈ ಮಂತ್ರಗಳನ್ನು ನಿತ್ಯ ಪಠಿಸುವುದರಿಂದ ಬಡವನೂ ಧನವಂತನಾಗುತ್ತಾನೆ….!! ಕುಬೇರ ಮಂತ್ರ

ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಕರೆದರೆ ಕುಬೇರ ದೇವರನ್ನು ಸಂಪತ್ತಿನ ರಾಜ ಎಂದು ಕರೆಯುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಕುಬೇರ ಮಂತ್ರವನ್ನು ಪಠಿಸುವುದರಿಂದ ಅವನು ಅಪಾರ ಸಂಪತ್ತನ್ನು ಪಡೆದು ಶ್ರೀಮಂತನಾಗುತ್ತಾನೆ ಎಂದೇ ಹೇಳಬಹುದು. ಆದ್ದರಿಂದ ಕುಬೇರ ದೇವರನ್ನು ಯಾರು ಪ್ರಾಮಾಣಿಕ ಹೃದಯ ಮತ್ತು ಭಕ್ತಿಯಿಂದ.

ಪೂಜಿಸುತ್ತಾರೋ ಆ ವ್ಯಕ್ತಿಯು ಬೇರೆ ದೇವರ ಸಂಪೂರ್ಣ ಅನು ಗ್ರಹವನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಕುಬೇರರನ್ನು ಪೂಜಿಸುವುದು ಬಹಳ ಮುಖ್ಯ ವಾಗಿರುತ್ತದೆ. ಅದರಲ್ಲೂ ಯಾರು ಭಕ್ತಿಯಿಂದ ದೇವರನ್ನು ಆರಾಧನೆ ಮಾಡುತ್ತೋರೋ ಅವರೆಲ್ಲರಿಗೂ ಕೂಡ ಒಳ್ಳೆಯ ಅನುಗ್ರಹವನ್ನು ಕೊಡುತ್ತಾರೆ. ಯಾರೇ ದೇವರಾದರು ಕೂಡ ಮೊದಲು ಅವರಲ್ಲಿ ನಂಬಿಕೆಯನ್ನು ಇಡಬೇಕು ಆಗ ಮಾತ್ರ ನಿಮ್ಮ ಎಲ್ಲಾ ಕೆಲಸಗಳು ಕೂಡ ಪೂರ್ಣವಾಗುವುದಕ್ಕೆ ಸಾಧ್ಯವಾಗುತ್ತದೆ.

ಬದಲಿಗೆ ಮೇಲ್ನೋಟಕ್ಕೆ ನೀವು ಎಷ್ಟೇ ಪೂಜೆ ಹೋಮ ಹಾವನ ಮಾಡಿಸಿದರು ಕೂಡ ಅದು ನಿಮಗೆ ಒಳ್ಳೆಯ ಪ್ರತಿಫಲವನ್ನು ಕೊಡುವು ದಿಲ್ಲ. ಮೊದಲೇ ಹೇಳಿದಂತೆ ನೀವು ಎಷ್ಟು ಭಕ್ತಿಯಿಂದ ದೇವರನ್ನು ಪೂಜಿಸುತ್ತಿರೋ, ನೀವು ಎಷ್ಟು ಒಳ್ಳೆಯ ಮನಸ್ಸಿನಿಂದ ಇರುತ್ತೀರೋ, ಆಗ ಮಾತ್ರ ನೀವು ದೇವರಿಂದ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಹಾಗಾದರೆ ಈ ದಿನ ನೀವು ಯಾವ ಕುಬೇರ ಮಂತ್ರವನ್ನು ಹೇಳುವುದ ರಿಂದ ನಿಮ್ಮ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಲಾಭವನ್ನು ಪಡೆದು ಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಮೊದಲು ನಿಮ್ಮ ಇಡೀ ಮನೆಯನ್ನು ಸ್ವಚ್ಛ ಮಾಡಿ ದೇವರ ಮನೆಯಲ್ಲಿ ಲಕ್ಷ್ಮಿ ಮತ್ತು ಕುಬೇರ ಫೋಟೋ ಇಟ್ಟು ಪೂಜೆಯನ್ನು ಸಲ್ಲಿಸಬೇಕು ನಂತರ ಒಂದು ಹಲಗೆಯ ಮೇಲೆ ಈಗ ನಾವು ಹೇಳುವಂತಹ ಎಲ್ಲಾ ಸಂಖ್ಯೆಯನ್ನು ಬರೆದು ಅದರ ಮೇಲೆ.

ಐದು ರೂಪಾಯಿ ನಾಣ್ಯವನ್ನು ಇಟ್ಟು ಪೂಜೆ ಮಾಡಬೇಕು ಹಾಗಾದರೆ ಆ ಸಂಖ್ಯೆಗಳು ಯಾವುದು ಎಂದರೆ ಮೊದಲನೇ ಸಾಲಿನಲ್ಲಿ 27 20 25 ಎರಡನೇ ಸಾಲಿನಲ್ಲಿ 22 24 26 ಹಾಗೆಯೇ ಮೂರನೇ ಸಾಲಿನಲ್ಲಿ 23 28 21 ಈ ರೀತಿ ಸಂಖ್ಯೆ ಬರೆದು ಇದರ ಮೇಲೆ ನಾಣ್ಯ ಇಟ್ಟು ಪೂಜೆಯನ್ನು ಸಲ್ಲಿಸಬೇಕು.

ಈ ರೀತಿ ನೀವು ಮಾಡುತ್ತಾ ಬರುವುದರಿಂದ ನಿಮ್ಮ ಯಾವುದೇ ವ್ಯಾಪಾರ ವ್ಯವಹಾರದಲ್ಲಾಗಿರಬಹುದು ನಿಮ್ಮ ಆರ್ಥಿಕ ಜೀವನದಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ ಅವೆಲ್ಲವೂ ಕೂಡ ಸರಿಹೋಗು ತ್ತದೆ. ಸಮಸ್ಯೆಗಳು ದೂರವಾಗುತ್ತದೆ ಎಂದೇ ಹೇಳಬಹುದು. ಅದರಲ್ಲೂ ವ್ಯಾಪಾರ ವ್ಯವಹಾರ ಮಾಡುವವರು ಇದನ್ನು ಮಾಡುವುದರಿಂದ ಉತ್ತಮ ಲಾಭ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *