ಈ ಹುಡುಗ ಐ ಫೋನ್ ಬುಕ್ ಮಾಡಿದ ರೀತಿ ನೋಡಿ ಫ್ಲಿಪ್ ಕಾರ್ಟ್ ಬೆಚ್ಚಿ ಬಿತ್ತು! ಐ ಫೋನ್ ಲವ್ ಸ್ಟೋರಿ//
ನಾವು ಇದುವರೆಗೂ ಎಷ್ಟೆಷ್ಟೋ ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಆದರೆ ಇಲ್ಲಿ ಹೇಳುವಂತದ್ದು ಅವುಗಳಲ್ಲಿ ಅತ್ಯಂತ ಕ್ರೇಜಿ ವಿಲಕ್ಷಣ ಹಾಗೂ ಕ್ರೂರವೆನಿಸುವಂತಹ ಒಂದು ಹತ್ಯ ಬಗ್ಗೆ, ಇದು ನಡೆದಿರುವುದು ನಮ್ಮ ಕರ್ನಾಟಕದಲ್ಲಿಯೇ, ರಾಜ್ಯದ ಪೊಲೀಸರು ಈ ಬಗ್ಗೆ ಇಷ್ಟು ಸಣ್ಣ ಕಾರಣಕ್ಕೆ ಯಾರಾದರೂ ಕೊಲೆ ಮಾಡಿದರ ಅಂತ ಸೋಜಿಗ ಪಡುವಂತೆ ಮಾಡಿದೆ? ಇಲ್ಲಿ ಹತ್ಯೆ ಮಾಡಿದವನು 20 ವರ್ಷದ ಒಬ್ಬ ಹುಡುಗ.
ಹುಡುಗ ಹೆಚ್ಚು ಕಡಿಮೆ ತನ್ನ ವಯಸ್ಸಿನ ಒಬ್ಬ ಹುಡುಗನೊಬ್ಬನನ್ನು ಹತ್ಯೆ ಮಾಡಿದ್ದಾನೆ. ಅದು ಯಾಕೆ ಗೊತ್ತಾ? ಕೇವಲ ಒಂದು ಐ ಫೋನ್ ಗಾಗಿ!ಹತ್ಯೆ ಮಾಡಿದ ಕಾಲೇಜು ಹುಡುಗ ಫ್ಲಿಪ್ಕಾರ್ಟ್ ಅಲ್ಲಿ 41,000 ದರದ ಫೋನ್ ಬುಕ್ ಮಾಡಿದ್ದಾನೆ. ಅದನ್ನು ಡೆಲಿವರಿಗೆ ಬಂದ ಆ ಡೆಲಿವರಿ ಬಾಯ್ ಅನ್ನು ಆ ಯುವಕ ಫೋನ್ ಕೊಂಡುಕೊಳ್ಳೋದಕ್ಕೆ ಹಣ ಇಲ್ಲ ಎಂಬುದಕ್ಕೆ ಕೊಂದು ಹಾಕಿದ್ದಾನೆ.
ಇಲ್ಲಿ ಸತ್ತವನು ಒಬ್ಬ ಅಮಾಯಕ ಈ ಕಾಮರ್ಸ್ ನ ಡೆಲಿವರಿ ಹುಡುಗ. ಇಲ್ಲಿ ಹತ್ಯೆ ಮಾಡಿದವನಿಗೆ ಕೊಲ್ಲುವುದಕ್ಕೆ ಯಾವುದೇ ಮೋಟಿವ್ ಇರಲಿಲ್ಲವಾದರೂ ತನಗೆ ಆ ಐ ಫೋನ್ ಬೇಕೆಬೇಕೆಂಬ ಕಾರಣಕ್ಕೆ ಹಾಗೂ ಹಣ ಕೊಡದೆ ಇದ್ದರೆ. ಆ ಡೆಲಿವರಿ ಹುಡುಗ ಅದನ್ನು ವಾಪಸ್ ಕೊಂಡೊಯ್ಯುತ್ತಾನೆ ಎಂಬ ಕಾರಣಕ್ಕೆ ಅವನನ್ನೆ ಕೊಂದರೆ ಐಫೋನ್ ತನಗೆ ಉಚಿತವಾಗಿ ಸೇರುತ್ತಲ್ಲ ಎಂದು ಭಾವಿಸಿ, ಈ ಒಂದು ಹತ್ಯೆಯನ್ನು ಮಾಡಿದ್ದಾನೆ.
ಇಷ್ಟೇ ಅಲ್ಲ ಕೊಲೆ ಮಾಡಿದ ಬಳಿಕ ಸಿನಿಮಾ ಮಾದರಿಯಲ್ಲಿ ಆ ಒಂದು ಶವವನ್ನು ಮರೆಮಾಚಿ ಡಿಸ್ಪೋಸ್ ಮಾಡುವುದಕ್ಕೆ ಬಳಿಸಿದಂತಹ ತಂತ್ರಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಮೂರು ದಿನ ಆ ಶವವನ್ನು ತನ್ನ ರೂಮಲ್ಲಿ ಇಟ್ಟು ಕೊಂಡಿದ್ದಂತಹ ಆ ಹುಡುಗ ರಾತ್ರಿ ವೇಳೆ ದೂರದ ರೈಲ್ವೆ ಟ್ರ್ಯಾಕ್ ಒಂದರ ಬಳಿ ಹೊಯ್ದು.
ಅಲ್ಲಿ ಅದರ ಮೇಲೆ ಸೀಮೆ ಎಣ್ಣೆ, ಪೆಟ್ರೋಲ್ ಮುಂತಾದವುಗಳನ್ನು ಸುರಿದು ಸುಟ್ಟು ಹಾಕಿದ್ದಾನೆ. ಈ ಕೇಸ್ ಅನ್ನು ಬೇಯಿಸೋದಕ್ಕೆ ಅತ್ಯಂತ ಜಟಿಲ ಹಾಗೂ ಕಠಿಣವಾಗಿತ್ತು. ಕಾರಣ ಇಲ್ಲಿ ಸತ್ತವನ ಹಾಗೂ ಕೊಂದವನ ನಡುವೆ ಯಾವುದೇ ಸಂಬಂಧ ಕೂಡ ಇರಲಿಲ್ಲ. ಸಾಮಾನ್ಯವಾಗಿ ನಡೆಯುವಂತಹ ಯಾವುದೇ ಕೊಲೆ ಹಿಂದೆ
ಕೊಂದವರು ಹಾಗೂ ಕೊಲೆಯಾದವರ ಇಬ್ಬರ ನಡುವೆ ಏನಾದರೂ ಮುಖ್ಯ ಲಿಂಕ್ ಹಾಗೂ ಮೋಟಿವ್ ಇದ್ದೇ ಇರುತ್ತೆ. ಅದನ್ನ ಅನುಸರಿಸಿ ಅದರ ಜಾಲವನ್ನು ಹಿಡಿದು ಪೋಲೀಸ್. ಈ ಒಂದು ಕೇಸನ್ನು ಭೇದಿಸಿ ದ್ದಾರೆ. ಆದರೆ ಇಲ್ಲಿ ಅಂತ ಯಾವುದೇ ಮೋಟಿವ್ ಆಗ್ಲಿ ಆರೋಪಿ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.