ಐಪಿಎಸ್ ಅಧಿಕಾರಿಯಾದ ಶ್ರೀಮತಿ ರೋಹಿಣಿ‌ ಸಿಂಧೂರಿ ಅವರ ರಿಯಲ್ ಲೈಫ್ ಜರ್ನಿ...ಹೇಗಿತ್ತು ನೋಡಿ.. - Karnataka's Best News Portal

ಇಂಜಿನಿಯರಿಂಗ್ ವಿದ್ಯಾರ್ಥಿನಿ ‘ಲೇಡಿ ಸಿಂಗಂ’ ಆಗಿದ್ದೆಗೆ ಗೊತ್ತಾ? ಲೈಫ್ ಸ್ಟೋರಿ ಆಫ್ IAS ಆಫೀಸರ್ ರೋಹಿಣಿ ಸಿಂಧೂರಿ//

ರೋಹಿಣಿ ಸಿಂಧೂರಿ, ರಾಜ್ಯ ಕಂಡ ಕೆಲವೇ ಕೆಲವು ಖಡಕ್ ಅಧಿಕಾರಿ ಗಳಲ್ಲಿ ಇವರು ಕೂಡ ಒಬ್ಬರು. ಸಚಿವರು, ಎಂ ಎಲ್ಎ ಗಳು, ಅಷ್ಟೇ ಯಾಕೆ ಸರ್ಕಾರವನ್ನೇ ಎದುರು ಹಾಕಿಕೊಂಡು ಟ್ರಾನ್ಸ್ಫರ್ ಮೇಲೆ ಟ್ರಾನ್ಸ್ಫರ್ ಆಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಲೇಡಿ ಸಿಂಗಂ. ಇಂತಹ ರೋಹಿಣಿ ಸಿಂಧೂರಿ ಇಲ್ಲಿಯವರೆಗೆ ಬೆಳೆದು ಬಂದದ್ದು ಹೇಗೆ? ಅವರ ಲೈಫ್ ಜರ್ನಿ ಹೇಗಿತ್ತು? ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.

1984 ರ ಮೇ 30 ರಂದು ಜನನ. ರೋಹಿಣಿ ಸಿಂಧೂರಿ ಹುಟ್ಟಿದ್ದು ಅಂದಿನ ಆಂಧ್ರಪ್ರದೇಶದ ಕಮಮ್ ಜಿಲ್ಲೆಯ ರುದ್ರಾಕಪಲ್ಯ ಎಂಬಲ್ಲಿ. ಇದು ಈಗ ತೆಲಂಗಾಣ ರಾಜ್ಯದಲ್ಲಿದೆ. ತೆಲಂಗಾಣ ಮತ್ತು ಆಂಧ್ರ ಸಮೀಪದಲ್ಲಿರುವ ಊರು ಜೊತೆಗೆ ಛತ್ತಿಸ್ ಗಡ್ ಗೂ ಹತ್ತಿರದಲ್ಲಿದೆ ಎಂದು ಹೇಳಬಹುದು. ಸಾಕಷ್ಟು ಜನ ರೋಹಿಣಿ ಸಿಂಧೂರಿ ಕರ್ನಾಟಕದವರು ಅಂದುಕೊಂಡಿದ್ದಾರೆ.

ಆದರೆ ಇವರ ಮೂಲ ಆಂಧ್ರಪ್ರದೇಶ ಅನ್ನೋದು ಗಮನರ್ಹ. ಇವರದ್ದು ಹಿಂದೂ ದಾಸರಿ ಕುಟುಂಬ. ರೋಹಿಣಿ ಸಿಂಧೂರಿಯದ್ದು ಹಿಂದೂ ಧರ್ಮದಲ್ಲಿ ಬರುವ ದಾಸರಿ ಕುಟುಂಬ. ಈ ಜಾತಿಯ ಜನ ಹೆಚ್ಚಾಗಿ ಆಂಧ್ರದಲ್ಲಿ ಮತ್ತು ತೆಲಂಗಾಣದಲ್ಲಿ ಕಂಡು ಬರುತ್ತಾರೆ. ಅಂದಹಾಗೆ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಮೊದಲು ದಂಗೆ ಎದ್ದವರಲ್ಲಿ ದಾಸರಿ ಸಮುದಾಯ ಕೂಡ ಒಂದು.

ಸಿಪಾಯಿ ದಂಗೆಗೂ 11 ವರ್ಷ ಮುಂಚೆ, ಅಂದರೆ 1846 ರಲ್ಲಿ ದಾಸರಿ ಸಮುದಾಯದ ಉಯ್ಯಾಲ ನರಸಿಂಹ ರೆಡ್ಡಿ ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರು. ಇಂತಹ ಸಮುದಾಯಕ್ಕೆ ಸೇರಿದ್ದಾರೆ. ರೋಹಿಣಿ ಸಿಂಧೂರಿ ಯವರ ಪೂರ್ಣ ಹೆಸರು ಕೂಡ ರೋಹಿಣಿ ಸಿಂಧೂರಿ ದಾಸರಿ. ತಂದೆ ಹೆಸರು ದಾಸರಿ ಜಯಪಾಲ ರೆಡ್ಡಿ, ತಾಯಿ ಲಕ್ಷ್ಮಿ ರೆಡ್ಡಿ.

ಇಂತಹ ರೋಹಿಣಿ ಆಂಧ್ರ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಸುಧೀರ್ ರೆಡ್ಡಿ ಅವರನ್ನು ಮದುವೆಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಒಂದು ಗಂಡು, ಮತ್ತೊಂದು ಹೆಣ್ಣು. ತೆಲುಗು ಮಾತೃಭಾಷೆ ಯಾದರೂ ರೋಹಿಣಿ ಸಿಂಧೂರಿ ಕನ್ನಡ ಇಂಗ್ಲಿಷ್ ಹಾಗೂ ಮುಂತಾದ ಭಾಷೆಗಳನ್ನು ಚೆನ್ನಾಗಿ ಮಾತನಾಡುತ್ತಾರೆ. ಇವರು ಓದಿದ್ದು ಬಿ ಟೆಕ್. ಆದರೆ ಆಗಿದ್ದು ಐಎಎಸ್ ಆಫೀಸರ್!

ರೋಹಿಣಿ ಸಿಂಧೂರಿ ಹೈದರಾಬಾದ್ ಯುನಿವರ್ಸಿಟಿಯಲ್ಲಿ ಬಿ ಟೆಕ್ ಕೆಮಿಕಲ್ ಇಂಜಿನಿಯರಿಂಗ್ ಓದಿದರು ನಂತರ ತಮ್ಮ 25ನೇ ವಯಸ್ಸಿ ನಲ್ಲಿ ಅಂದರೆ 2009 ರಲ್ಲಿ UPSC ಪರೀಕ್ಷೆ ಬರೆದು ದೇಶಕ್ಕೆ 43ನೇ ಸ್ಥಾನ ಪಡೆದರು. ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿಯಾದರು. ಇಲ್ಲಿ ಕೇಡರ್ ಅಂದರೆ ರಾಜ್ಯ ಎಂದು ಹೇಳಬಹುದು. ಕೇಡರ್ ಹಂಚಿಕೆ ಮಾಡುವಾಗ ತವರು ರಾಜ್ಯ ಸಿಗೋದು ತುಂಬಾ ಅಪರೂಪ. ಹೀಗಾಗಿ ರೋಹಿಣಿ ಸಿಂಧೂರಿ ಪಕ್ಕದ ಕರ್ನಾಟಕವನ್ನು ಆರಿಸಿಕೊಂಡರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *