ಕೋಟಿ ರಾಮ ಜಪ ಲೇಖನ ಸಂಕಲ್ಪ ಸಹಿತ ವಿಷ್ಣು ಸಹಸ್ರನಾಮಕ್ಕೆ ಸಮ ..ಪಠಿಸಿ ಆಗುವ ಚಮತ್ಕಾರ ನೋಡಿ.

ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಿಕ್ಕೆ ಆಗದಿದ್ದರೆ ಈ ಒಂದು ನಾಮ ಜಪಮಾಡಿ…||ಜೀವನದ ಕಷ್ಟಗಳೆಲ್ಲ ದೂರ ಆಗುತ್ತದೆ….||

WhatsApp Group Join Now
Telegram Group Join Now

ರಾಮ ಕೋಟಿ ಜಪವನ್ನು ಬರೆಯುವ ರೀತಿ ಆಗಿರಬಹುದು ಅಥವಾ ಜಪ ಮಾಡುವ ರೀತಿ ಆಗಿರಬಹುದು, ಯಾವ ರೀತಿ ಮಾಡಬೇಕು ಯಾವ ರೀತಿ ಸಂಕಲ್ಪ ಮಾಡಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ರಾಮ ನಾಮದ ಮಹತ್ವ ಎಷ್ಟಿದೆ ಎನ್ನುವುದು.

ಶಿವನು ತನ್ನ ಹೆಂಡತಿಯಾದಂತಹ ಪಾರ್ವತಿಗೆ ಹೇಳುತ್ತಿದ್ದಾನೆ. ಪದ್ಮ ಪುರಾಣದಲ್ಲಿ ಉಲ್ಲೇಖ ಇರುವ ಹಾಗೆ ಶಿವನು ನಾಮ ಸ್ಮರಣೆಯಲ್ಲಿ ತೊಡಗಿರುವಂತಹ ಸಂದರ್ಭದಲ್ಲಿ ಪಾರ್ವತಿ ಅಲ್ಲಿಗೆ ಬರುತ್ತಾರೆ, ಮಹಾದೇವರು ಮಂತ್ರ ಜಪವನ್ನು ಮಾಡುತ್ತಿರುವುದನ್ನು ನೋಡಿದ ಪಾರ್ವತಿ ಕೇಳುತ್ತಾರೆ. ಜಗತ್ತಿಗೆ ಒಡೆಯರಾದಂತಹ ನೀವು ಯಾರ ನಾಮ ಸ್ಮರಣೆಯನ್ನು ಮಾಡುತ್ತಾ ಇದ್ದೀರಿ ನೀವು ಎಂದು. ಆಗ ಮಹಾದೇವರು.

ಭಗವಾನ್ ವಿಷ್ಣುವಿನ ಸಹಸ್ರನಾಮವನ್ನು ಮಾಡುತ್ತಿದ್ದೇನೆ. ಆಗ ಪಾರ್ವತಿ ಹೇಳುತ್ತಾಳೆ. ನಾನು ವಾಸುದೇವನ ಪ್ರತ್ಯರ್ಥವಾಗಿ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡುತ್ತೇನೆ ನನಗೂ ಉಪದೇಶ ವನ್ನು ಕೊಡಿ ಎಂದು ಕೇಳಿದಾಗ ಶಿವನು ಪಾರ್ವತಿಗೆ ಸಹಸ್ರನಾಮದ ಉಪದೇಶವನ್ನು ಕೊಡುತ್ತಾರೆ. ಆಗ ಪಾರ್ವತಿ ಪ್ರತಿನಿತ್ಯ ಊಟಕ್ಕಿಂತ ಮುಂಚೆ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ ಊಟ ಮಾಡುವಂತಹ ಪದ್ಧತಿಯನ್ನು ಇಟ್ಟುಕೊಳ್ಳುತ್ತಾಳೆ.

ಒಂದು ದಿನ ರುದ್ರ ದೇವರು ಏಕಾದಶಿಯನ್ನು ಮಾಡಿ ದ್ವಾದಶಿ ದಿನ ಪಾರಯಣ ಮಾಡುವಾಗ ಪಾರ್ವತಿಗೆ ಹೇಳುತ್ತಾರೆ ಜೊತೆಯಲ್ಲಿಯೇ ಊಟ ಮಾಡೋಣ ಬಾ ಎಂದು, ಆಗ ಪಾರ್ವತಿ ದೇವಿ ಹೇಳುತ್ತಾರೆ ನಾನು ಇನ್ನು ವಿಷ್ಣು ಸಹಸ್ರನಾಮವನ್ನು ಹೇಳಿ ಮುಗಿಸಿಲ್ಲ ನಾನು ಅದನ್ನು ಹೇಳಿ ಮುಗಿಸಿದ ಮೇಲೆ ಊಟ ಮಾಡುವುದು ಇದು ನನ್ನ ವ್ರತ ಎಂದು ಪಾರ್ವತಿ ದೇವಿ ಹೇಳುತ್ತಾರೆ. ಆಗ ಪರಮೇಶ್ವರರು ಸಕಲ ಪುಣ್ಯಗಳು

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಸುಲಭವಾಗಿ ಪ್ರಾಪ್ತಿಯಾಗುವಂತಹ ಒಂದು ಉಪಾಯವನ್ನು ನಾನು ಹೇಳುತ್ತೇನೆ ವಿಷ್ಣು ಸಹಸ್ರನಾಮಕ್ಕೆ ಸಮನಾಗಿರುವಂತಹ ಒಂದೇ ಒಂದು ನಾಮವನ್ನು ಉಪದೇಶ ಮಾಡುತ್ತೇನೆ, ಆ ನಾಮವನ್ನು ನೀನು ಪಾರಾಯಣ ಮಾಡಿದರೆ ನಿನಗೆ ವಿಷ್ಣು ಸಹಸ್ರನಾಮದಷ್ಟೇ ಪುಣ್ಯ ಬರುತ್ತದೆ ಎಂದು ಹೇಳುತ್ತಾರೆ. ಆ ನಾಮವನ್ನು ಈ ಶ್ಲೋಕದಲ್ಲಿ ಹೇಳುತ್ತಾರೆ. ಅದು ಯಾವುದೆಂದರೆ “ರಾಮ ರಾಮೇತಿ ರಾಮೇತಿ ರಮೆ ರಾಮೇ ಮನೋರಮೆ ಸಹಸ್ರ ನಾಮ ತತ್ಯುಲ್ಲಂ ರಾಮ ನಾಮ ವರಾನನೆ

ಅಂದರೆ. ಎಲೈ ಪಾರ್ವತಿಯೇ ನಾನು ರಾಮ ನಾಮ ಎನ್ನುವ ಎರಡಕ್ಷರ ಮನೋಹರ ವಾದಂತಹ ಮಂತ್ರದಲ್ಲಿ ರಮಿಸುತ್ತಿದ್ದೇನೆ ಅಂದರೆ, ಶಿವನ ಬಾಯಲ್ಲಿ ಯಾವಾಗಲೂ ರಾಮ ನಾಮ ಜಪ ಮಾಡುತ್ತಿರುತ್ತಾರೆ. ಈ ರಾಮ ನಾಮವು ವಿಷ್ಣು ಸಹಸ್ರನಾಮಕ್ಕೆ ಸಮಾನವಾದ ಮಂತ್ರವು ಬೇರೆ ಯಾವುದು ಇಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">