ಪೂಜೆ ಮಾಡುವಾಗ ಗರ್ಭಗುಡಿಗೆ ಸ್ವತಃ ದುರ್ಗಾಪರಮೇಶ್ವರಿ ದೇವಿ ಬರುತ್ತಾರೆ ಭಕ್ತರು ಕಣ್ಣಾರೆ ದೇವಿಯನ್ನು ನೋಡಬಹುದು..!!
ದೇವಿಗಳಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಖ್ಯಾತಿ ಪಡೆದಿರುವ ದೇವಿ ಅಂದರೆ ದುರ್ಗಾಪರಮೇಶ್ವರಿ ಅಮ್ಮನವರು. ನಮ್ಮ ಕರ್ನಾಟಕದಲ್ಲಿ ನೆಲೆಸಿರುವ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪವಾಡ ಅತ್ಯಂತ ನಿಗೂಢ ಹಾಗೂ ವಿಸ್ಮಯಗಳಿಂದ ಕೂಡಿದೆ. ಯಾಕೆ ಅಂದರೆ ಇಲ್ಲಿ ಕಾಣುವ ದುರ್ಗಾಪರಮೇಶ್ವರಿ ಅಮ್ಮನವರು ಕಮಲದಂತೆ ಕಾಣುವ ಶಿಲೆಯಲ್ಲಿ ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾರೆ.
ಪ್ರಪಂಚದ ಏಕೈಕ ಹೆಣ್ಣು ದೇವರ ಲಿಂಗ ಎಂದು ಪ್ರಸಿದ್ದಿ ಪಡೆದು ಕೊಂಡಿದೆ. ಪ್ರತಿ ವರ್ಷ ಈ ದೇವಸ್ಥಾನದ ಒಳಗಡೆ ನದಿ ಹರಿದು ಬಂದು ಲಿಂಗಕ್ಕೆ ಅಭಿಷೇಕ ಮಾಡಿ ಮತ್ತೆ ವಾಪಸ್ ಹೋಗುತ್ತದೆ. ಈ ನದಿಯ ಪವಾಡ ಭಕ್ತರ ಕಣ್ಣೆದುರೇ ನಡೆಯುತ್ತದೆ. ಹಾಗಾದರೆ ಕರ್ನಾಟಕದಲ್ಲಿ ಈ ದೇವಸ್ಥಾನ ಎಲ್ಲಿ ಇದೆ? ಇಲ್ಲಿ ನೆಲೆಸಿರುವ ಲಿಂಗದ ವಿಶೇಷತೆ ಏನು? ಎಂಬುದರ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ದೇವಸ್ಥಾನದ ಹೆಸರು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಂದಾಪುರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ಸಿದ್ದಾಪುರ ಊರು ಬರುತ್ತೆ ಸಿದ್ದಾಪುರ ಊರಿನಿಂದ 6 ಕಿಲೋಮೀಟರ್ ದೂರ ಸಾಗಿದರೆ ಕಮಲಶಿಲೆಯಲ್ಲಿ ಸಿಗುತ್ತೆ. ಇದೇ ಹಳ್ಳಿಯಲ್ಲಿ ಇರುವ ಕುಬ್ಜ ಎಂಬ ನದಿ ದಡದಲ್ಲಿ ನೆಲೆಸಿರುವ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು.
ಈ ದೇವಸ್ಥಾನದಲ್ಲಿ ನೆಲೆಸಿರುವ ಶ್ರೀ ದುರ್ಗಾಪರಮೇಶ್ವರಿ ದೇವಿ ಅಮ್ಮ ನವರನ್ನು ಲಿಂಗದ ರೂಪದಲ್ಲಿ ನೋಡಬಹುದು. ಪ್ರಪಂಚದಲ್ಲಿ ಬೇರೆ ಕಡೆ ಈ ರೀತಿ ಹೆಣ್ಣು ದೇವರ ಲಿಂಗವನ್ನು ನೋಡಲು ಸಾಧ್ಯವಿಲ್ಲ. ಈ ಲಿಂಗವು ಕೆಂಪು ಬಣ್ಣದಲ್ಲಿ ಕಂಡುಬರುತ್ತದೆ. ಮಹಾಲಕ್ಷ್ಮಿ, ಮಹಾಕಾಳಿ ಹಾಗೂ ಮಹಾ ಸರಸ್ವತಿಯವರು ಈ ಲಿಂಗದಲ್ಲಿ ನೆಲೆಸಿರುವರು ಎಂದು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ.
ಈ ದೇವಸ್ಥಾನದ ಪಕ್ಕದಲ್ಲಿ ನೆಲೆಸಿರುವ ಅತ್ಯಂತ ಪವಿತ್ರವಾದ ಕುಬ್ಜ ನದಿ ಕಂಡುಬರುತ್ತದೆ. ಕುಬ್ಜ ನದಿಯನ್ನು ಇಲ್ಲಿ ಬಿಟ್ಟರೆ ಮತ್ತೆ ಕೈಲಾಸ ಪರ್ವತದ ಹತ್ತಿರ ಹರಿದು ಹೋಗುವುದನ್ನು ನೋಡಬಹುದು. ಕೈಲಾಸ ಪರ್ವತದ ಹತ್ತಿರ ಹರಿದು ಹೋಗುವ ಕುಬ್ಜ ನದಿ ಕಮಲಶಿಲೆ ಪ್ರದೇಶ ದಲ್ಲಿ ಹೇಗೆ ಬಂತು ಇದುವರೆಗೂ ಯಾರಿಗೂ ತಿಳಿದಿಲ್ಲ! ಹಾಗಾಗಿ ಕುಬ್ಜ ನದಿ ಅತ್ಯಂತ ಶ್ರೇಷ್ಠ ನದಿಗಳ ಪಟ್ಟಿಯಲ್ಲಿ ಸೇರುತ್ತದೆ.
ವರ್ಷಕ್ಕೆ ಒಮ್ಮೆ ಈ ನದಿಯ ನೀರು ಉಕ್ಕಿ ದೇವಾಲಯದ ಬಾಗಿಲ ಮುಖಾಂತರ ಗರ್ಭಗುಡಿ ಪ್ರವೇಶಿಸಿ ದುರ್ಗಾಪರಮೇಶ್ವರಿ ಅಮ್ಮನವರ ಲಿಂಗಕ್ಕೆ ಅಭಿಷೇಕ ಮಾಡಿ ಲಿಂಗಕ್ಕೆ ಇಟ್ಟ ಪ್ರಸಾದ ಹೂವನ್ನು ತೆಗೆದು ಕೊಂಡು ನೀರು ವಾಪಸ್ ಹೋಗುತ್ತದೆ. ಸ್ವತಹ ದುರ್ಗಾಪರಮೇಶ್ವರಿ ಅಮ್ಮನವರೇ ಕುಬ್ಜ ನದಿಯಾಗಿ ದೇವಸ್ಥಾನದ ಒಳಗೆ ಪ್ರವೇಶಿಸುತ್ತಾರೆ ಎಂದು ನಂಬುತ್ತಾರೆ. ನದಿ ನೀರು ಗರ್ಭಗುಡಿಯೊಳಗೆ ಬರುವುದನ್ನು ಮತ್ತು ಗರ್ಭಗುಡಿಯಿಂದ ಭಕ್ತರು ಕಣ್ಣು ತುಂಬಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.