ಧನಸ್ಸು ರಾಶಿ “ಯುಗಾದಿ ಭವಿಷ್ಯ” ಶೋಭನ ಸಂವತ್ಸರದ “ಅದೃಷ್ಟಶಾಲಿ ರಾಶಿ”….!!
ಧನಸ್ಸು ರಾಶಿಯವರಿಗೆ ಈ ಒಂದು ವರ್ಷ ಗುರುವಿನ ಸಂಪೂರ್ಣ ವಾದಂತಹ ಬಲ ಇದ್ದೇ ಇರುತ್ತೆ ಎಂದೇ ಹೇಳಬಹುದು. ಜೊತೆಗೆ ಧನಸ್ಸು ರಾಶಿಯವರಿಗೆ ಈ ಶೋಭ ಗ್ರಸ್ತ ಸಂವತ್ಸರದಲ್ಲಿ ಅಧಿಕ ಪುಣ್ಯ ಫಲ ಹಾಗೂ ಗ್ರಹಗಳ ಬೆಂಬಲ, ಮತ್ತು ಎಲ್ಲದರಲ್ಲೂ ಲಾಭ, ಎಲ್ಲದರಲ್ಲಿ ಯೂ ಆದಾಯ. ಎಲ್ಲ ಕೆಲಸದಲ್ಲಿಯೂ ಕೂಡ ಕಾರ್ಯಸಿದ್ಧಿ, ಆಗಲಿವೆ.
ಹಾಗೂ ಧನಸ್ಸು ರಾಶಿಯ ಮೂಲ ನಕ್ಷತ್ರದ ಪಾದಗಳು, ಪೂರ್ವಾಷಾಡ ನಕ್ಷತ್ರ, ಉತ್ತರಾಷಾಢ ನಕ್ಷತ್ರ ಎ ಮತ್ತು ಯೋ ಅಕ್ಷರ ಬರುವಂತದ್ದು, ಹಾಗೂ ಪೂರ್ವಾಷಾಡ ನಕ್ಷತ್ರದ ನಾಲ್ಕು ಪಾದಗಳು ಬ ಬಿ ಬು ಅಕ್ಷರ ಬರುವಂತದ್ದು, ಹಾಗೆಯೇ ಮೇಲೆ ಹೇಳಿದಂತೆ ಗುರುವಿನ ಸಂಪೂರ್ಣ ಬೆಂಬಲ ಈ ವರ್ಷ ನಿಮ್ಮ ಮೇಲೆ ಇದ್ದೇ ಇರುತ್ತದೆ.
ಹಾಗೆಯೇ ಶನಿಯ ಕಾರ್ಯಸಿದ್ಧಿಯ ಬಲ ಇರುತ್ತದೆ. ಜೊತೆಗೆ ಕೇತುವಿನ ಬಲವು ಕೂಡ ನಿಮಗೆ ಇರುತ್ತದೆ. ಹಾಗೂ ಶುಕ್ರ, ಬುಧ, ಮತ್ತು ರವಿ ಇವೆಲ್ಲದರಬಲ ನಿಮ್ಮ ಮೇಲೆ ಇರುತ್ತದೆ. ಒಟ್ಟಾರೆಯಾಗಿ ಹೆಚ್ಚಿನ ಗ್ರಹಗಳ ಬೆಂಬಲ ನಿಮ್ಮ ಮೇಲೆ ಈ ವರ್ಷ ಇರುವುದರಿಂದ ನಿಮ್ಮ ಎಲ್ಲ ಇಷ್ಟಾರ್ಥಗಳು ಕೂಡ ಈ ಯುಗಾದಿ ಭಾಗದಲ್ಲಿ ಸಿದ್ಧಿಯಾಗಲಿವೆ.
ಧನಸ್ಸು ರಾಶಿಯವರ ಕೆಲವೊಂದುಷ್ಟು ಗುಣ ಸ್ವಭಾವಗಳು ಯಾವ ರೀತಿ ಇದೆ ಎಂದು ನೋಡುವುದಾದರೆ. ಧನಸ್ಸು ರಾಶಿಯು ಅಗ್ನಿತತ್ವ ವಾಗಿದ್ದು, ಕ್ಷತ್ರಿಯ ವರ್ಣಕ್ಕೆ ಸೇರಿದ್ದು, ಅಲ್ಲದೆ ಉಷ್ಣ ಮತ್ತು ಪಿತ್ತದ ಪ್ರಕೃತಿಯಾಗಿರುತ್ತದೆ. ಹಾಗೂ ಇವರು ಸ್ವರ್ಣ ಕಾಂತಿಯನ್ನು ಕೂಡ ಹೊಂದಿರುತ್ತಾರೆ. ಉತ್ತಮವಾದಂತಹ ಬುದ್ಧಿ ಜ್ಞಾನ, ವಿನಯ ಬೇರೆಯವರಿಗೆ ಗೌರವವನ್ನು ಕೊಡುವುದು ಹೀಗೆ ಹಲವಾರು ಗುಣಗಳನ್ನು ಇವರು ಹೊಂದಿರುತ್ತಾರೆ.
ಒಟ್ಟಾರೆಯಾಗಿ ಗುರುವಿನ ಅನುಗ್ರಹ ಇವರ ಮೇಲೆ ಇರುವುದರಿಂದ ಮೇಲೆ ಹೇಳಿದ ಎಲ್ಲಾ ರೀತಿಯ ಒಳ್ಳೆಯ ಸ್ವಭಾವಗಳು ಕೂಡ ಇವರಲ್ಲಿ ಇರುತ್ತದೆ. ರವಿ ಮತ್ತು ಮಂಗಳ ಧನಸ್ಸು ರಾಶಿಯವರ ಅತ್ಯಂತ ಮಿತ್ರ ಗ್ರಹಗಳು. ಹಾಗೂ ನಿಮಗೆ ಮಂಗಳ ಮತ್ತು ರವಿಯ ಅನುಗ್ರಹ ಇರುವುದರಿಂದ ನೀವೇನಾದರೂ ಸರ್ಕಾರಿ ನೌಕರಿಯನ್ನು ಬಯಸುತ್ತಿ ದ್ದರೆ ಹಾಗೂ ಐಎಎಸ್ ಐಪಿಎಸ್ ಆಗಬೇಕು ಎಂದು ಪ್ರಯತ್ನಿಸುತ್ತಿದ್ದರೆ ಅವರೆಲ್ಲರಿಗೂ ಕೂಡ ನೀವು ಅಂದುಕೊಂಡಂತೆ ಯಶಸ್ಸನ್ನು ಪಡೆಯಬಹುದು.
ಜೊತೆಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಧನಸ್ಸು ರಾಶಿಯವರು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಉತ್ತಮ. ಹಾಗೆ ಅಕ್ಟೋಬರ್ ತಿಂಗಳು ನಿಮಗೆ ಭಾಗ್ಯದಾಯಕ ತಿಂಗಳು ಎಂದೇ ಹೇಳಬಹುದು. ಆದ್ದರಿಂದ ನೀವು ಈ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ನೀವು ಮಾಡುವುದರಿಂದ ಮುಂದಿನ ದಿನದಲ್ಲಿ ಆರಾಮವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.