ಸಿನಿಮಾ ಹೀರೋಗಳನ್ನು ನಮ್ಮ ಬಾಸ್ ಎನ್ನುವ ಹುಡುಗರ ಮಧ್ಯೆ ಈ ಹುಡುಗನ ಸಾಧನೆ ನಿಜಕ್ಕೂ ಗ್ರೇಟ್. - Karnataka's Best News Portal

ಸಿನಿಮಾ ಹೀರೋಗಳನ್ನು ನಮ್ಮ ಬಾಸ್ ಎನ್ನುವ ಹುಡುಗರ ಮಧ್ಯೆ ಈ ಹುಡುಗನ ಸಾಧನೆ ನಿಜಕ್ಕೂ ಗ್ರೇಟ್….!!ಒಂದು ಕಾಲದಲ್ಲಿ ಈತನ ಲುಕ್ ಹಾಗೂ ಈತನ ಹಾಡುಗಳಿಂದ ಈತ ವಿಪರೀತ ಟ್ರೊಲ್ ಗೆ ಒಳಗಾಗುತ್ತಿದ್ದ. ಆದರೆ ಈಗ ಈತನ ಲೆವೆಲ್ ಚೇಂಜ್ ಆಗಿದೆ. ಒಬ್ಬ ಸಾಧಾರಣ ಬಡ ಕುಟುಂಬದ ಹುಡುಗ ಹೇಗೆ ಒಬ್ಬ ರಾಪರ್ ಆಗಿ, ಹಾಗೆ ಈ ಸಲದ ಹಿಂದಿಯ ಬಿಗ್ ಬಾಸ್ ನ ವಿನ್ನರ್ ಆಗಿ ಹೊರಹೊಮ್ಮಿದ.ಹಾಗೂ ಈತನ ಕಥೆ ನಿಮಗೆ ನಿಜಕ್ಕೂ ಸ್ಪೂರ್ತಿಯನ್ನು ಕೊಡಬಹುದು ಎಂದುಕೊಳ್ಳುತ್ತಾ ಈ ದಿನ ಈ ಹುಡುಗನ ವಿಷಯವಾಗಿ ಇವನ ಜೀವನದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿಯೋಣ. ಅಷ್ಟಕ್ಕೂ ಈ ಹುಡುಗನ ಹೆಸರು ಅಲ್ತಾಫ್ ಶೇಕ್ ಇವನು 1999ರ ಆಗಸ್ಟ್ 30ರಂದು ಪೂಣೆಯಲ್ಲಿ ಜನಿಸುತ್ತಾನೆ.

ಇವನಿಗೆ ಮೊದಲಿನಿಂದಲೂ ಕೂಡ ರಾಪ್ ಸಾಂಗ್ ಅಂದರೆ ಮೋಹ ಇವನ ಹಿರಿಯ ಸಹೋದರ ಒಬ್ಬ ಮೊದಲ ಖ್ಯಾತ ಹಾಲಿವುಡ್ ನ ರಾಪ್ ಗಾಯಕನಾದಂತಹ 50 ಸೆಂಟ್ ನ ಯಾವುದೋ ಒಂದು ರಾಪ್ ಹಾಡನ್ನು ಅಲ್ತಾಫ್ ಗೆ ಕೇಳಿಸುತ್ತಾನೆ. ಈ ಒಂದು ಹಾಡು ಅಲ್ತಾಫ್ ಗೆ ತುಂಬಾ ಇಷ್ಟ ಆಗುತ್ತದೆ. ತಾನು ಕೂಡ ಇದೇ ರೀತಿಯ ಹಾಡುಗಳನ್ನು ರಚಿಸಬೇಕು ಎಂಬ.

ಆಸೆ ಅವನಲ್ಲಿ ಚಿಗುರೊಡೆಯುತ್ತದೆ. ಈ ಅಲ್ತಾಫ್ ಮೊದಲ ರಾಪ್ ಹಾಡನ್ನು ಕೇಳಿದಾಗ ಆತ ಆರನೇ ತರಗತಿಯಲ್ಲಿ ಓದುತ್ತಿದ್ದ. ಈತನ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ ಈತ ಹೆಚ್ಚು ಓದಲಿಲ್ಲ. ಈತ ತನಗೆ ಓದು ತಲೆಗೆ ಹತ್ತಲಿಲ್ಲ ಎಂದು ಸ್ವತಹ MC ಸ್ಟನ್ ಅನೇಕ ಕಡೆ ಹೇಳಿಕೊಂಡಿದ್ದಾನೆ. ಈತ ತನ್ನ 8ನೇ ತರಗತಿಯಲ್ಲಿ ಓದುತ್ತಿದ್ದಾಗ.

ಮೊಟ್ಟ ಮೊದಲ ರಾಪ್ ಹಾಡನ್ನು ಬರೆದ. “ಬಲ್ತಿ ಪಬ್ಲಿಕ್” ಕ್ರಮೇಣ MC ಈ ಹಾಡನ್ನು ತಾನೇ ಹಾಡಿ ಆ ವಿಡಿಯೋವನ್ನು ಕೂಡ ಶೂಟ್ ಮಾಡಿದ. ಆದರೆ ಕಾರಣಾಂತರಗಳಿಂದ ಈ ಹಾಡು ಲಾಂಚ್ ಆಗಲಿಲ್ಲ.MC ಸ್ಟನ್ ಬಾಲ್ಯದಿಂದಲೂ ಕೂಡ ತಂಟೆಕೋರ ಸ್ವಭಾವದ ಹುಡುಗನಾಗಿದ್ದ. ಆದ ಅನೇಕ ಸಲ ಪೊಲೀಸರ ಚೇಸಿಂಗ್ ಗೂ ಒಳಗಾಗಿದ್ದು ಉಂಟು.

ಒಂದು ದಿನ ಆತ ಮಾಡಿದ ಕೆಲಸಕ್ಕೆ ಇಡೀ ದಿನ ಸ್ಟೇಷನ್ ನಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿತ್ತು. ದಿನೇ ದಿನೇ ರಾಪ್ ಹಾಡುಗಳಲ್ಲಿ ಅವನ ಆಸಕ್ತಿ ಹೆಚ್ಚಾಗುತ್ತಾ ಹೋಯಿತು, ಅವನು ತನ್ನದೇ ಒಂದು ತಂಡವನ್ನು ಕಟ್ಟಿ ತಾನೆ ರಚಿಸಿದ ಹಾಡುಗಳನ್ನು ಅಭ್ಯಾಸ ಮಾಡ ತೊಡಗಿದ. ಮುಂದೆ ಆತ ಇದರ ಬಗ್ಗೆ ಹೆಚ್ಚು ತಿಳಿಯುವ ಸಲುವಾಗಿ ಕೆಲವು ಪ್ರಮುಖ ತಂಡಗಳಲ್ಲಿಯೂ ಕೂಡ ಭಾಗಿಯಾದ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *