ಆ ಗ್ರಂಥ ಯಾಕೆ ಅಷ್ಟೊಂದು ನಿಗೂಢ||ಓದಿದವರಿಗೆ ಏನಾಯ್ತು..? ಬ್ಯಾನ್ ಮಾಡಲಾಗಿದೆ ಎಂದು ಹೇಳಲಾದ ಗ್ರಂಥ ಈಗ ಎಲ್ಲಿದೆ..?ಈ ಒಂದು ಗ್ರಂಥವನ್ನು ಸರ್ಕಾರ ಬ್ಯಾನ್ ಮಾಡಿತ್ತು, ಆ ಒಂದು ಗ್ರಂಥವನ್ನು ಯಾರು ಓದಬಾರದು ಎಂದು ಹೇಳಿತ್ತು. ಆ ಒಂದು ಪುಸ್ತಕದಿಂದ ಪ್ರಾಣಿ ಪಕ್ಷಿಗಳ ಜೊತೆ ಮರ ಗಿಡಗಳ ಜೊತೆ ಮಾತನಾಡಬಹುದಾಗಿತ್ತು. ಎಲ್ಲೆಲ್ಲಿ ನಿಧಿಗಳನ್ನು ಹೂತಿಡಲಾಗಿದೆ.ಎಂಬುದನ್ನು ಈ ಗ್ರಂಥದಿಂದ ತಿಳಿಯಬಹುದಾಗಿತ್ತು. ಆ ಗ್ರಂಥದ ಹೆಸರೇ ನೀಲಾವಂತಿ ಗ್ರಂಥ. ಇದರ ಒಂದು ರಚನೆಯನ್ನು ಮಾಡಿದವರು ಯಾರು ಎಂದು ನೋಡುವುದಾದರೆ ಅಲ್ಲಿ ಒಂದು ಆಸಕ್ತಿದಾಯಕವಾಗಿ ರುವ, ರೋಚಕವಾಗಿರುವ, ಅಷ್ಟೇ ಭಯಾನಕವಾಗಿರುವಂತಹ ಕಥೆ ಒಂದು ತೆರೆದುಕೊಳ್ಳುತ್ತದೆ. ಈ ಒಂದು ಕಥೆ ಶುರುವಾಗುವುದು ಉತ್ತರ ಪ್ರದೇಶದಲ್ಲಿ. ಅಲ್ಲಿಯ ಒಂದು ಹಳ್ಳಿಯಲ್ಲಿ ಆಯುರ್ವೇದಚಾರ್ಯ ಎಂಬ ಒಬ್ಬ ಪಂಡಿತ ಇದ್ದ.
ಆತ ಆಯುರ್ವೇದದಲ್ಲಿ ಮಹಾ ದೊಡ್ಡ ಪಂಡಿತನಾಗಿದ್ದ. ಆತನಿಗೆ ಹೆಂಡತಿ ಮತ್ತು ಒಂದು ಹೆಣ್ಣು ಮಗು ಇತ್ತು. ಆ ಮಗು 5 ವರ್ಷದ ಪ್ರಾಯವಾಗುವಷ್ಟರಲ್ಲಿ ತಾಯಿ ತೀರಿ ಹೋಗುತ್ತಾಳೆ. ತಾಯಿ ತೀರಿ ಹೋದ ನಂತರ ಆಯುರ್ವೇದಚಾರ್ಯ ಆ ಊರನ್ನೇ ಬಿಡಲು ನಿರ್ಧರಿಸುತ್ತಾನೆ. 5 ವರ್ಷದ ಹೆಣ್ಣು ಮಗುವಿನ ಹೆಸರೇ ನೀಲಾವಂತಿ. ಆಕೆ ಸದಾ ಪ್ರಾಣಿಯೊಂದಿಗೆ ಪಕ್ಷಿಯೊಂದಿಗೆ ಮಾತನಾಡುತ್ತಿದ್ದಳು.
ಹಾಗೂ ಮರ ಗಿಡಗಳೊಂದಿಗೂ ಕೂಡ ಮಾತನಾಡುತ್ತಿದ್ದಳು. ಆಕೆಗೆ ಹೇಗೋ ಆ ಒಂದು ವಿಸ್ಮಯಕಾರಿ ವಿದ್ಯೆ ತಿಳಿದಿತ್ತು. ತಂದೆಗೂ ಕೂಡ ಆಕೆಗೆ ಈ ವಿದ್ಯೆ ಹೇಗೆ ಬಂತೆಂದು ತಿಳಿದಿರಲಿಲ್ಲ. ಆ ಊರಿನಲ್ಲಿ ತನ್ನ ಮಗುವಿಗೆ ಜನರಿಂದ ನಿಂದನೆಗಳು ಬರುತ್ತಿದ್ದುದ್ದನ್ನು ನೋಡಲು ಆಗುತ್ತಿರಲಿಲ್ಲ. ಹೀಗಿರುವಾಗ ಆತ ತನ್ನ ಊರನ್ನೇ ಬಿಟ್ಟು ಹೊರ ನಡೆಯಲು ನಿರ್ಧಾರ ಮಾಡುತ್ತಾನೆ.
ಹೀಗೆ ಹೊರ ನಡೆದ ಆಯುರ್ವೇದಚಾರ್ಯ ರಾಜ್ಯಗಳನ್ನು ದಾಟಿ ಒಂದು ಊರಲ್ಲಿ ಬಂದು ನೆಲೆಯಾಗುತ್ತಾನೆ. ಆ ಒಂದು ಜಾಗದಲ್ಲಿಯೂ ಕೂಡ ನೀಲಾವಂತಿಕೆಗೆ ಹಾವುಗಳು ಮಾತನಾಡುವುದು ಕೇಳಿಸುತ್ತಿತ್ತು. ಆಕೆ ಅವುಗಳೊಂದಿಗೂ ಕೂಡ ಮಾತನಾಡುತ್ತಿದ್ದಳು ನಿಧಿ ಇರುವ ಜಾಗಗಳನ್ನು ಅವು ಹೇಳುತ್ತಿದ್ದವು ಆದರೂ ನೀಲಾವಂತಿ ನಿಧಿಯ ಹಿಂದೆ ಬೀಳಲಿಲ್ಲ. ಪ್ರಾಣಿ ಪಕ್ಷಿಗಳೊಂದಿಗೆ ಮಾತನಾಡುತ್ತಾ ಕಾಲ ಕಳೆಯುವು ದಷ್ಟೇ ಆಕೆ ಮಾಡುತ್ತಿದ್ದಳು. ಹೀಗೆ ಅವಳು ದೊಡ್ಡವಳಾಗುತ್ತಾ ಬಂದು ಯೌವ್ವನಕ್ಕೆ ಕಾಲಿಡುತ್ತಾಳೆ.
ಯೌವ್ವನದಲ್ಲಿ ಆಕೆ ಅಪ್ರತಿಮ ಸೌಂದರ್ಯವತಿಯಾಗಿ ಕಾಣುತ್ತಿದ್ದಳು. ಒಂದು ದಿನ ಅವಳ ಕನಸಿನಲ್ಲಿ ಬೇತಾಳಗಳು ಕಾಣಿಸಿಕೊಳ್ಳುತ್ತದೆ. ಅವುಗಳು ಮುಂದೆ ಆಗುವ ಕೆಲವೊಂದು ವಿಚಾರಗಳನ್ನು ಅವಳಿಗೆ ಹೇಳುತ್ತಿದ್ದವು. ಈ ವಿಚಾರವನ್ನು ಆಕೆ ತನ್ನ ತಂದೆಗೂ ಕೂಡ ಹೇಳುತ್ತಿ ದ್ದಳು ಕೆಲವು ಸಮಯ ಆ ಸಂಗತಿಗಳು ನಿಜವಾಗಿ ಕಣ್ಣೆದುರು ನಡೆದಾಗ ನೀಲಾವಂತಿಗೆ ಮಾತ್ರವಲ್ಲದೆ ಆಕೆಯ ತಂದೆಗೂ ಕೂಡ ಆಶ್ಚರ್ಯವಾಗು ತ್ತಿತ್ತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.