ಐದು ವರ್ಷಕ್ಕೆ ಒಮ್ಮೆ ಕಾಣುವ ಪಾರ್ವತಿ ಅಮ್ಮನವರು ಈಗಲೇ ನೋಡಿ, ಇಲ್ಲವಾದರೆ ಮತ್ತೆ ಐದು ವರ್ಷ ಕಾಯಬೇಕಾಗುತ್ತದೆ,,,,!!ಈಗ ನಾವು ಹೇಳಲು ಹೊರಟಿರುವಂತಹ ದೇವಸ್ಥಾನ ಕೇವಲ ಐದು ವರ್ಷಕ್ಕೆ ಒಮ್ಮೆ ಮಾತ್ರ ತೆಗೆಯುತ್ತದೆ. ಹಾಗೂ ಆ ನಂತರ 12 ದಿನಗಳ ತನಕ ಎಲ್ಲರಿಗೂ ಕೂಡ ಈ ದೇವಿಯ ದರ್ಶನದ ಭಾಗ್ಯ ಸಿಗುತ್ತದೆ. ಭಾರತದ ಏಕೈಕ ಶಕ್ತಿಶಾಲಿ.ಪಾರ್ವತಿ ಅಮ್ಮನವರ ದೇವಸ್ಥಾನ. ಇಲ್ಲಿ ನೆಲೆಸಿರುವ ಪಾರ್ವತಿ ಅಮ್ಮನವರ ವಿಗ್ರಹವನ್ನು ಹೊಳೆಯುವ ಪಾರ್ವತಿ ಅಮ್ಮ ಎಂದು ಕರೆಯುತ್ತಾರೆ. ಐದು ವರ್ಷಕ್ಕೆ ಒಮ್ಮೆ 12 ದಿನದವರೆಗೆ ಈ ದೇವಸ್ಥಾನದ ಬಾಗಿಲು ತೆರೆದಿರುತ್ತದೆ ಆದರೆ 12 ದಿನ ಗಳಲ್ಲಿ ಕೇವಲ ನಾಲ್ಕು ಗಂಟೆಗಳ ತನಕ ಈ ದೇವಿಯ ದರ್ಶನದ ಭಾಗ್ಯವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬಹುದು.
ಇಲ್ಲಿ ನೆಲೆಸಿರುವ ಪಾರ್ವತಿ ಅಮ್ಮನವರ ವಿಗ್ರಹವು ಉಗ್ರ ರೂಪದಲ್ಲಿ ಕಂಡು ಬರುತ್ತದೆ. ಮುಕ್ಕೋಟಿ ದೇವರ ಶಕ್ತಿ ಈ ಪಾರ್ವತಿ ಅಮ್ಮನವ ರಲ್ಲಿ ಇದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಈ ದೇವಸ್ಥಾನ ಯಾವುದು? ಈ ದೇವಸ್ಥಾನ ಎಲ್ಲಿ ಬರುತ್ತದೆ? ಹೀಗೆ ಈ ದೇವಸ್ಥಾನದ ಮತ್ತಷ್ಟು ವಿಶೇಷವಾದಂತಹ ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಈಗಾಗಲೇ ಮೇಲೆ ಹೇಳಿದಂತೆ ಈ ದೇವಸ್ಥಾನವು 5 ವರ್ಷಕ್ಕೊಮ್ಮೆ ಬಾಗಿಲು ತೆಗೆಯುತ್ತಾರೆ.
ಅದರಲ್ಲೂ 12 ದಿನಗಳು ಮಾತ್ರ ದೇವಿಯ ದರ್ಶನವನ್ನು ಪಡೆಯ ಬಹುದು ಪ್ರತಿದಿನ ಬೆಳಗ್ಗಿನ ಜಾವ 6ಗಂಟೆ ಯಿಂದ 10 ಗಂಟೆಯ ತನಕ ಮಾತ್ರ ಈ ದೇವಿಯ ಅಂದರೆ ಪಾರ್ವತಿ ದೇವಿಯ ಉಗ್ರ ರೂಪವನ್ನು ನೋಡಬಹುದಾಗಿರುತ್ತದೆ. ಹಾಗಾದ್ರೆ ಈ ದೇವಸ್ಥಾನದ ವಿಳಾಸ ಯಾವುದು ಎಂದರೆ. ಕೇರಳದಲ್ಲಿ ಇರುವ ದೇಸo ಜಂಕ್ಷನ್ ಎಂಬ ಪ್ರದೇಶಕ್ಕೆ ನೀವು ಮೊದಲು ಹೋಗಬೇಕು.
ಅಲ್ಲಿಂದ ನೀವು 10 ಕಿ.ಮೀ ಪ್ರಯಾಣ ಮಾಡಿದರೆ ಶ್ರೀ ಮೂಲ ನಗರo ಎಂಬ ಊರು ಸಿಗುತ್ತದೆ ಇದೇ ಹಳ್ಳಿಯಲ್ಲಿರುವ ಪಿರಿಯಾರ್ ಎಂಬ ನದಿ ದಡದಲ್ಲಿ ಈ ಪಾರ್ವತಿ ಅಮ್ಮನವರ ದೇವಸ್ಥಾನ ಇದೆ ಈ ದೇವಸ್ಥಾನದ ಹೆಸರು “ತಿರುವೆರಾನಿಕುಲಂ ಶಿವ ಪಾರ್ವತಿ ಮಂದಿರ”. ಈ ದೇವಸ್ಥಾನ ದಲ್ಲಿ ಶಿವ ಮತ್ತು ಪಾರ್ವತಿ ಇಬ್ಬರೂ ಕೂಡ ನೆಲೆಸಿದ್ದಾರೆ.
ಈ ದೇವಸ್ಥಾನದಲ್ಲಿ ನೆಲೆಸಿರುವ ಶಿವ ಪರಮಾತ್ಮನು ಭಕ್ತರಿಗೆ ಪ್ರತಿದಿನ ದರ್ಶನ ಕೊಡುತ್ತಾರೆ, ಆದರೆ ಪಾರ್ವತಿ ಅಮ್ಮನವರ ಗರ್ಭಗುಡಿ ಮಾತ್ರ ಕೇವಲ ಐದು ವರ್ಷಕ್ಕೆ ಒಮ್ಮೆ ತೆರೆಯುತ್ತದೆ. ಭಾರತ ದೇಶದಲ್ಲಿರುವ ಎಲ್ಲಾ ದೇವತೆಗಳ ಶಕ್ತಿ ಇಲ್ಲಿ ನೆಲೆಸಿರುವ ಪಾರ್ವತಿ ಅಮ್ಮನವರಲ್ಲಿ ನೋಡಬಹುದು ಎಂದು ಪುರಾವೆಯಲ್ಲಿ ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.