ಶಿವಲಿಂಗದಿಂದ ಬರುತ್ತೆ ತೆಂಗಿನ ಎಣ್ಣೆ ನಿಮ್ಮ ಕಣ್ಣಾರೆ ನೋಡಬಹುದು. ವಿಜ್ಞಾನವನ್ನು ತಲೆ ಕೆಳಗೆ ಮಾಡಿದ ಶಿವಲಿಂಗ….!!
ಈ ದಿನ ನಾವು ಹೇಳಲು ಹೊರಟಿರುವ ಶಿವಲಿಂಗದ ಬಗ್ಗೆ ನೀವೇನಾ ದರೂ ಕೇಳಿದರೆ ಒಂದು ಕ್ಷಣ ಬೆರಗಾಗುತ್ತೀರಾ. ನಿಮ್ಮ ಕಲ್ಪನೆ ಊಹೆಗೂ ನಿಲುಕದ ಪವಾಡ ಈ ಶಿವಲಿಂಗದಲ್ಲಿ ನಡೆಯುತ್ತಿದೆ. ಕನಸಿನಲ್ಲಿಯೂ ಕೂಡ ಈ ರೀತಿಯ ಪವಾಡವನ್ನು ನೋಡಲು ಸಾಧ್ಯವಾಗುವುದಿಲ್ಲ.
ಸಾವಿರಾರು ವರ್ಷಗಳಿಂದ ಈ ಶಿವಲಿಂಗದಲ್ಲಿ ತೆಂಗಿನ ಕಾಯಿ ಎಣ್ಣೆ ಬರುತ್ತಾ ಇದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಕಣ್ಣಾರೆ ಈ ಪವಾಡವನ್ನು ನೋಡಬಹುದು. ಪ್ರತಿದಿನ 24 ಗಂಟೆಯೂ ಕೂಡ ಈ ಶಿವಲಿಂಗದಿಂದ ತೆಂಗಿನಕಾಯಿ ಎಣ್ಣೆ ಬರುತ್ತಿರುತ್ತದೆ. ನಿಮಗೆ ಇದು ವಿಚಿತ್ರ ಎನ್ನಿಸ ಬಹುದು ಆದರೆ ಇದು ಖಂಡಿತವಾಗಿಯೂ ಸತ್ಯ. ಹಾಗಾದರೆ ಈ ವಿಸ್ಮಯ ನಿಗೂಢ ಶಕ್ತಿಶಾಲಿ ಶಿವಲಿಂಗ ಇರುವುದಾದರೂ ಎಲ್ಲಿ?
ಈ ಶಿವಲಿಂಗದ ಬಗ್ಗೆ ಈ ದಿನ ಸಂಪೂರ್ಣ ವಾದಂತಹ ಮಾಹಿತಿಗಳನ್ನು ತಿಳಿಯೋಣ. ನಮ್ಮ ಭಾರತ ದೇಶದಲ್ಲಿ ಎಂಟು ಲಕ್ಷಕ್ಕೂ ಹೆಚ್ಚಿನ ಶಿವಲಿಂಗಗಳು ಇವೆ, ಇಷ್ಟು ಶಿವಲಿಂಗಗಳಲ್ಲಿ. ಈ ದಿನ ನಾವು ಹೇಳಲು ಹೊರಟಿರುವಂತಹ ಶಿವಲಿಂಗ ತುಂಬಾ ಅಪರೂಪ ಮತ್ತು ವಿಶೇಷ ಈ ರೀತಿಯ ಶಿವಲಿಂಗವನ್ನು ನೀವು ಪ್ರಪಂಚದಲ್ಲಿ ಎಲ್ಲೂ ನೋಡಲು ಸಾಧ್ಯವಿಲ್ಲ.
ಈ ದೇವಸ್ಥಾನದ ಹೆಸರು ಲಿಂಬಕೇಶ್ವರ್ ನಾರಿಯಲ್ ಜ್ಯೋತಿರ್ಲಿಂಗ, ನಾರಿಯಲ್ ಜ್ಯೋತಿರ್ಲಿಂಗ ಎಂದರೆ ತೆಂಗಿನಕಾಯಿ ಎಣ್ಣೆ ಲಿಂಗ ಎಂದರ್ಥ. ಅಷ್ಟಕ್ಕೂ ಈ ದೇವಸ್ಥಾನ ಎಲ್ಲಿ ಬರುತ್ತದೆ ಎಂದು ನೋಡುವು ದಾದರೆ ಭಾರತ ದೇಶದ ನಾಗಾಲ್ಯಾಂಡ್ ರಾಜ್ಯದ ರಾಜಧಾನಿಯಲ್ಲಿ ಕೋಹಿಮ ಎಂಬ ಊರು ಬರುತ್ತದೆ, ಅಲ್ಲಿಗೆ ನೀವು ಹೋಗಬೇಕು. ಕೋಹಿಮ ರಾಜಧಾನಿಯಿಂದ 9 ಕಿಲೋಮೀಟರ್ ಪ್ರಯಾಣ ಮಾಡಿದರೆ ನಿಮಗೆ ಜೋತ್ಯೋಮ ಎಂಬ ಹಳ್ಳಿ ಸಿಗುತ್ತದೆ.
ಈ ಹಳ್ಳಿಯಿಂದ 3 ಕಿ.ಮೀ ಪ್ರಯಾಣ ಮಾಡಿದರೆ ಜೋತ್ಯೋಮ ಬೆಟ್ಟ ಕಂಡುಬರುತ್ತದೆ. ಇದೇ ಬೆಟ್ಟದಲ್ಲಿ ನೆಲೆಸಿರುವ ಲಿಂಬಕೇಶ್ವರ ನಾರಿಯಲ್ ಜ್ಯೋತಿರ್ಲಿಂಗ. ವರ್ಷದಲ್ಲಿ ಎಂಟು ತಿಂಗಳು ಮಾತ್ರ ಅಂದರೆ ನವೆಂಬರ್ ನಿಂದ ಜೂನ್ ತಿಂಗಳವರೆಗೆ ಮಾತ್ರ ಲಿಂಗದಿಂದ ತೆಂಗಿನಕಾಯಿ ಎಣ್ಣೆ ಹರಿದು ಹೋಗುವುದನ್ನು ನೋಡಬಹುದು. ಇನ್ನು ಉಳಿದ ನಾಲ್ಕು ತಿಂಗಳಲ್ಲಿ ಲಿಂಗದಲ್ಲಿ ಯಾವುದೇ ರೀತಿಯ ತೆಂಗಿನ ಕಾಯಿ ಎಣ್ಣೆ ಕಾಣುವುದಿಲ್ಲ.
ಸುಮಾರು 2000 ವರ್ಷಗಳಿಂದ ಈ ಪವಾಡ ನಡೆದುಕೊಂಡು ಬರುತ್ತಿದೆ. ಈ ಶಿವಲಿಂಗವನ್ನು ನೋಡಲು ದೇಶವಿದೇಶಗಳಿಂದ ಹಲವಾರು ಭಕ್ತರು ಬರುತ್ತಾರೆ. ಇಲ್ಲಿ ನಡೆಯುತ್ತಿರುವ ಪವಾಡವನ್ನು ಕಂಡುಹಿಡಿಯುತ್ತೇವೆ ಎಂದು ಬಂದ ಸಾಕಷ್ಟು ವಿದೇಶಿ ವಿಜ್ಞಾನಿಗಳು ದೇವರ ಮುಂದೆ ಸೋತು, ತಮ್ಮ ದೇಶಕ್ಕೆ ಹಿಂದಿರುಗಿರುವಂತಹ ಸಾಕಷ್ಟು ಉದಾಹರಣೆಗಳು ಕಂಡುಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.