ಸೌಂದರ್ಯದಿಂದ ಹೆಸರಾದ ಲೇಡಿ ಐಪಿಎಸ್ ಯಾರು….??
ಈಗ ರಾಜ್ಯದಲ್ಲಿ ನಡೆಯುತ್ತಿರುವಂತಹ ಐಎಎಸ್ ಹಾಗೂ ಐಪಿಎಸ್ ಸಮರ ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಹಾಗಾದರೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಲೇಡಿ ಐಪಿಎಸ್ ಅಧಿಕಾರಿಗಳು ಯಾರು? ಪ್ರಾಮಾಣಿಕತೆಗೆ ಹೆಸರಾದ ಲೇಡಿ ಸಿಂಗಂ ಗಳು ಯಾರು ಗೊತ್ತಾ? ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಯಾರು? ಕರ್ನಾಟಕದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಯಾರು? ಹೀಗೆ ಐಪಿಎಸ್ ಅಧಿಕಾರಿಗಳಿಗೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ಈ ದಿನ ಚರ್ಚಿಸೋಣ. ಮೊದಲನೆಯದಾಗಿ ಸೋನಿಯಾ ನಾರಂಗ್ ಇವರು 2002ರ ಬ್ಯಾಚ್ ನ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿ. 2002ರಲ್ಲಿ ಇವರನ್ನು ಕರ್ನಾಟಕದ ಕಲ್ಬುರ್ಗಿಯಲ್ಲಿ ಮೊದಲ ಬಾರಿಗೆ ಇವರನ್ನು ಪೋಸ್ಟಿಂಗ್ ಮಾಡಲಾಯಿತು.
ನಂತರ ವಿವಿಧೆಡೆ ಕೆಲಸ ಮಾಡಿದಂತಹ ಇವರು ಒಂದು ಬಾರಿ ಒಬ್ಬ ಮಂತ್ರಿಗೆ ಕಪಾಳಕ್ಕೆ ಹೊಡೆಯುವುದರ ಮೂಲಕ ಆಗ ಬಹಳ ಸುದ್ದಿ ಆಗಿದ್ದರು. ಇದಾದ ನಂತರ ಲೋಕಾಯುಕ್ತಕ್ಕೆ ಎಸ್ ಪಿ ಆಗಿ ನೇಮಕ ಆದರು. 2015ರಲ್ಲಿ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ರಿಜಿಸ್ಟ್ರಾರ್ ಗೆ ಪತ್ರ ಬರೆದಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾ ಗಿತ್ತು. ಎಷ್ಟರಮಟ್ಟಿಗೆ ಅಂದರೆ ನಂತರದಲ್ಲಿ ಲೋಕಾಯುಕ್ತರಾಗಿದ್ದಂತಹ ಭಾಸ್ಕರ್ ರಾವ್ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಬೇಕಾಯಿತು. ನಂತರ ಎನ್ಐಎ ಡಿಐಜಿ ಆಗಿ ಕೆಲಸ ಮಾಡಿದ ಅವರು ಈಗ ಜಾರಿ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿ ದ್ದಾರೆ. ಇವರ ಪತಿ ಬಿಹಾರ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅಂಕಿತ ಶರ್ಮ ಇವರ ಛತ್ತೀಸ್ಗಡ್ ನ ಮೊದಲ ಐಪಿಎಸ್ ಅಧಿಕಾರಿ ಯಾಗಿದ್ದಾರೆ.
ಹೆಮ್ಮೆಯ ವಿಚಾರ ಅಂದರೆ ಇವರು ನಕ್ಸಲ್ ವಿರೋಧಿ ಕಾರ್ಯಾಚರಣೆ ಯನ್ನು ಕೂಡ ಲೀಡ್ ಮಾಡುತ್ತಾರೆ.ಇವರು ASP ಆಗಿ ಪೋಸ್ಟಿಂಗ್ ಆಗಿರುವ ಬಸ್ತರ್ ಎಂಬ ಪ್ರದೇಶದಲ್ಲಿ ಸಂಪೂರ್ಣ ವಾದಂತಹ ಕಂಟ್ರೋಲ್ ಹೊಂದಿದ್ದು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅದು ಎಷ್ಟರ ಮಟ್ಟಿಗೆ ಅಂದರೆ ಕೆಜಿಎಫ್ ನಲ್ಲಿ ಪ್ರಧಾನಿ ರಮಿತಾ ಸೇನ್ ಪಾತ್ರಕ್ಕೆ ಬಣ್ಣ ಹಚ್ಚಿರುವ ರವೀನಾ ತಂಡನ್ ಕೂಡ ಇವರನ್ನು ರಿಯಲ್ ಹೀರೋಯಿನ್ ಎಂದು ಕರೆದಿದ್ದಾರೆ.ಇವರು 2018 ನೇ ಬ್ಯಾಚ್ ಮತ್ತು ಛತ್ತೀಸ್ಗಡ್ ಕೇಡರ್ ನ ಅಧಿಕಾರಿಯಾಗಿದ್ದಾರೆ. ಚಂದನ ದೀಪ್ತಿ ಇವರು ತೆಲಂಗಾಣದ ವಾರಂಗಲ್ ನಲ್ಲಿ ಜನಿಸಿದರು ಇವರು 2012ನೇ ಬ್ಯಾಚ್ ನ ತೆಲಂಗಾಣ ಕೇಡರ್ ನ ಅಧಿಕಾರಿ ಪೊಲೀಸ್ ನ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದಂತಹ ಇವರು ಅಂತಿಮವಾಗಿ ಮೇಧಕ್ ಜಿಲ್ಲೆಯ ಎಸ್ಪಿ ಆಗಿ ಆಯ್ಕೆಯಾದರು.
ಇವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದು ಸಮಾಜದಲ್ಲಿ ಬದಲಾವಣೆ ತರಬೇಕು ಅನ್ನುವುದಕ್ಕೆ ಧ್ವನಿಯಾಗಿದ್ದಾರೆ. ಇವರು ಬಿಸಿನೆಸ್ ಮ್ಯಾನ್ ಒಬ್ಬರನ್ನು ಮದುವೆಯಾಗಿದ್ದಾರೆ. ಸಂಜುಕ್ತ ಪರಾಶರ್ ಅಸ್ಸಾಂ ಮೂಲದ ಸಂಜುಕ್ತ ದೆಹಲಿಯಲ್ಲಿ ಸೈನ್ಸ್ ನಲ್ಲಿ ಪದವಿ ಯನ್ನು ಪಡೆದುಕೊಂಡರು. JNU ಇಂದ ಪಿಜಿ ಶಿಕ್ಷಣ ಪಡೆದ ಇವರು ಪಿ ಹೆಚ್ ಡಿ ಕೂಡ ಕಂಪ್ಲೀಟ್ ಮಾಡಿದ್ದಾರೆ. ನಂತರ ಯುಪಿಎಸ್ಸಿ ಕ್ಲಿಯರ್ ಮಾಡಿ 2008 ರಲ್ಲಿ ಅಸ್ಸಾಂ ಖೇಡರ ನ ಅಧಿಕಾರಿಯಾಗಿ ಆಯ್ಕೆಯಾ ದರೂ. ಇವರ ಪತಿಯು ಕೂಡ ಒಬ್ಬ ಐಎಎಸ್ ಅಧಿಕಾರಿಯಾಗಿದ್ದು ಇವರಿಬ್ಬರಿಗೆ ಓರ್ವ ಮಗ ಕೂಡ ಇದ್ದಾನೆ. ಇವರು ಪೋಸ್ಟಿಂಗ್ ಆದ 15 ತಿಂಗಳಲ್ಲಿ 16 ಮಂದಿ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.