ಆಂಜನೇಯ ಸ್ವಾಮಿ ಎದೆಯಿಂದ ಬರುತ್ತೆ ಅಮೃತ ಜಲ ನೀರು…||ಈ ದೇವಸ್ಥಾನಕ್ಕೆ ಬಂದರೆ ಹೆದರಿ ಓಡಿ ಹೋಗುತ್ತೀರಾ…..!!
ಈ ಪ್ರದೇಶದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ನೀವು ಹೋಗಬೇಕು ಅಂದರೆ ಗುಂಡಿಗೆ ಗಟ್ಟಿ ಇರಬೇಕು. ಹಾಗೇನಾ ದರೂ ನೀವು ಈ ದೇವಸ್ಥಾನದ ವಿಚಾರ ತಿಳಿಯದೆ ದೇವಸ್ಥಾನಕ್ಕೆ ಬಂದರೆ ಖಂಡಿತ ಹೆದರಿಕೊಂಡು ಓಡಿ ಹೋಗುತ್ತೀರ! ಎಲ್ಲ ದೇವಸ್ಥಾನಕ್ಕೆ ಹೋಗುವಂತೆ ಈ ದೇವಸ್ಥಾನಕ್ಕೆ ನೀವು ಹೋಗುವಂತಿಲ್ಲ.
ತಿರುಪತಿ ದೇವಸ್ಥಾನ ಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ ಈ ದಿನ ನಾವು ಹೇಳುತ್ತಿರುವಂತಹ ಈ ಆಂಜನೇಯ ಸ್ವಾಮಿ ದೇವಸ್ಥಾನ. ಈ ದೇವಸ್ಥಾನದಲ್ಲಿ 24 ಗಂಟೆಯೂ ಕೂಡ ಭಕ್ತಾದಿಗಳು ಇರುತ್ತಾರೆ. ಈ ಆಂಜನೇಯ ಸ್ವಾಮಿಯ ಎದೆಯ ಭಾಗದಿಂದ ಬರುತ್ತದೆ ಪ್ರತಿನಿತ್ಯ ಪವಿತ್ರವಾದಂತಹ ಜಲ. ಈ ಪವಿತ್ರ ಜಲವನ್ನು ಅಮೃತ ಎಂದು ಕೂಡ ಕರೆಯುತ್ತಾರೆ.
ಈ ಪವಿತ್ರ ಜಲವನ್ನು ನೀವು ತೆಗೆದುಕೊಂಡು ಹೋಗಿ ಮನೆಯಲ್ಲಿ ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಕೂಡ 3 ದಿನದಲ್ಲಿ ದೂರವಾಗುತ್ತದೆ ಎನ್ನುವುದು ಇಲ್ಲಿಯ ಭಕ್ತರ ನಂಬಿಕೆ. ನಮ್ಮ ದೇಶದಲ್ಲಿ ನೆಲೆಸಿರುವ ಎಲ್ಲಾ ಆಂಜನೇಯ ಸ್ವಾಮಿ ದೇವಸ್ಥಾನಗಳ ರಾಜ ಎಂದು ಈ ಆಂಜನೇಯ ಸ್ವಾಮಿಯನ್ನು ಕರೆಯುತ್ತಾರೆ. ಈ ದೇವಸ್ಥಾನದ ಬಗ್ಗೆ ತಿಳಿಯದೆ ಬಂದಂತಹ ಹಲವಾರು ಜನರು ಹೆದರಿಕೊಂಡು ಹಿಂದಿರುಗಿದ್ದಾರೆ.
ಹಾಗಾದರೆ ಭಕ್ತರು ಯಾಕೆ ಈ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಬರಲು ಹೆದರಿಕೊಳ್ಳುತ್ತಾರೆ? ಹಾಗೂ ಈ ದೇವಸ್ಥಾನ ಇರುವುದಾದರೂ ಎಲ್ಲಿ? ಎನ್ನುವುದರ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ. ಈ ದೇವಸ್ಥಾನಕ್ಕೆ ಹೋಗುವಂತಹ ವಿಳಾಸ ನೋಡುವುದಾದರೆ ಮೊದಲು ರಾಜಸ್ಥಾನ ರಾಜ್ಯದಲ್ಲಿರುವ ದೌಸ ಎಂಬ ಊರಿಗೆ ಹೋಗಬೇಕು, ಅಲ್ಲಿಂದ ನೀವು 48 ಕಿಲೋಮೀಟರ್ ಪ್ರಯಾಣ ಮಾಡಿದರೆ ಪಾರ್ಲಿ ಎಂಬ ಪ್ರದೇಶ ಸಿಗುತ್ತದೆ.
ಇದೇ ಪ್ರದೇಶದಲ್ಲಿ ನೆಲೆಸಿರುವ ಮೆಹೆಂದಿ ಪೂರ್ ಬಾಲಾಜಿ ದೇವಸ್ಥಾನ. ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯನ್ನು ಬಾಲಾಜಿ ಎಂದು ಕರೆಯುತ್ತಾರೆ. ಆಂಜನೇಯ ಸ್ವಾಮಿಯ ಬಾಲ್ಯದ ಹೆಸರು ಬಾಲ ಎಂದು. ರಾಜಸ್ಥಾನದಲ್ಲಿ ಆಂಜನೇಯ ಸ್ವಾಮಿಯನ್ನು ಹನುಮಾನ್ ಜೀ ಎಂದು ಕರೆಯುತ್ತಾರೆ. ಹಾಗಾಗಿ ಇಲ್ಲಿ ಬಾಲಾಜಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಈ ದೇವಸ್ಥಾನಕ್ಕೆ ನೀವು ಹೋದರೆ 2ರಿಂದ 3 ಗಂಟೆಗಳ ಸಮಯ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆಯಲು ಕಾಯಬೇಕಾಗು ತ್ತದೆ. ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಮಂದಿರ ಎಂದು ಹೇಳಿದರು ತಪ್ಪಾಗುವುದಿಲ್ಲ. ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಯಾರಿಗೆ ದೆವ್ವ ಭೂತ ಹೊಕ್ಕಿರುತ್ತದೆಯೋ ಅದನ್ನು ಬಿಡಿಸುವಂತಹ ಆಂಜನೇಯ ಸ್ವಾಮಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.