ಕೋಳಿ ಇಲ್ಲದೆ ಮೊಟ್ಟೆ ಹೇಗೆ ತಯಾರು ಮಾಡುತ್ತಾರೆ..! ಈ ವಿಷಯ ತಿಳಿದುಕೊಳ್ಳಿ….||
ಮೊಟ್ಟೆಯಲ್ಲಿ ಒಂದು ದೊಡ್ಡ ರೆವೆಲ್ಯೂಷನ್ ಶುರು ಆಗಿದೆ. ನೀವೆಂದಾ ದರೂ ಊಹಿಸಿದ್ದೀರಾ ಕೋಳಿ ಇಲ್ಲದೆ ಮೊಟ್ಟೆಯನ್ನು ಹೇಗೆ ತಯಾರು ಮಾಡಬಹುದು ಅಂತ, ಖಂಡಿತವಾಗಿಯೂ ಕೂಡ ಈ ರೀತಿಯಾದಂತಹ ಯೋಚನೆ ಮಾಡುವುದು ಸಾಧ್ಯ ಇಲ್ಲ. ಆದರೆ ನಿಮ್ಮ ಊಹೆಗೂ ನಿಲುಕದ ಒಂದು ಬದಲಾವಣೆ ಮೊಟ್ಟೆ ಮಾರುಕಟ್ಟೆಯಲ್ಲಿ ಆರಂಭವಾಗಿದೆ.
ಹೌದು, ಕೋಳಿ ಇಲ್ಲದೆ ಮೊಟ್ಟೆಯನ್ನು ತಯಾರಿಸಬಹುದು ಇನ್ನು ಮುಂದೆ ಮೊಟ್ಟೆಗಾಗಿ ಕೋಳಿಯ ಅವಶ್ಯಕತೆ ಇಲ್ಲ. ಕೋಳಿ ಇಲ್ಲದೆ ಮೊಟ್ಟೆ ತಯಾರಿಕೆ ಈಗಾಗಲೇ ಶುರುವಾಗಿದ್ದು ಇನ್ನೇನು ಸ್ವಲ್ಪ ದಿನದ ಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಷ್ಟಕ್ಕೂ ಈ ಮೊಟ್ಟೆಯನ್ನು ಹೇಗೆ ತಯಾರು ಮಾಡುತ್ತಾರೆ, ಇದರ ಅಸಲಿ ಕಥೆ ಏನು, ಕೋಳಿ ಮೊಟ್ಟೆಗೂ ಮಾನವ ನಿರ್ಮಿತ ಮೊಟ್ಟೆಗೂ ಏನು ವ್ಯತ್ಯಾಸ ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಅಮೆರಿಕಾದ ಕ್ಲಾರಾ ಫುಡ್ಸ್ ಎಂಬ ಆಹಾರ ಸಂಸ್ಥೆ ಮೊಟ್ಟೆ ತಯಾರಿಕೆ ಮೇಲೆ ಸಾಕಷ್ಟು ವರ್ಷಗಳಿಂದ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಮಾನವ ನಿರ್ಮಿತ ಮೊಟ್ಟೆ ತಯಾರಿಕೆ ಅಮೇರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಪ್ರಾರಂಭವಾಗಿದೆ ಹಾಗೂ ಇನ್ನೇನು ಸ್ವಲ್ಪ ದಿನದಲ್ಲಿಯೇ ಮಾರಾಟವೂ ಕೂಡ ಆರಂಭವಾಗುತ್ತದೆ.
ಅಮೆರಿಕದಲ್ಲಿ ತಯಾರಾದಂತಹ ಮಾನವ ನಿರ್ಮಿತ ಮೊಟ್ಟೆಗೆ ಪ್ರಪಂಚ ದಾದ್ಯಂತ ಸಾಕಷ್ಟು ಬೇಡಿಕೆಗೆ ಬಂದಿದೆ. ಈಗಾಗಲೇ ಯುರೋಪ್, ಚೈನಾ, ನಾರ್ತ್ ಕೊರಿಯಾ, ಈ ಮೊಟ್ಟೆ ತಯಾರು ಮಾಡಲು ತುದಿಗಾಲಿ ನಲ್ಲಿ ನಿಂತಿದ್ದಾರೆ. ನಮ್ಮ ಭಾರತ ದೇಶದಲ್ಲಿ ಈ ಮೊಟ್ಟೆ ತಯಾರಿಕೆ ಬಗ್ಗೆ ಯಾವುದೇ ರೀತಿಯಾದಂತಹ ಮಾಹಿತಿಯನ್ನು ಹೊರಹಾಕಿಲ್ಲ. ಆದರೆ ಆಹಾರ ಪಂಡಿತರು ಹೇಳುವ ಪ್ರಕಾರ ಭಾರತ ದೇಶದಲ್ಲೂ ಕೂಡ ಈ ಹೊಸ ಮೊಟ್ಟೆ ತಯಾರು ಮಾಡಲು ಹೊಸ ವೇದಿಕೆ ಸಜ್ಜಾಗುತ್ತಿದೆ ಎಂದು ಹೇಳಿದ್ದಾರೆ.
ಅಷ್ಟಕ್ಕೂ ಪ್ರತಿಯೊಬ್ಬರಿಗೂ ಕಾಡುತ್ತಿರುವಂತಹ ಪ್ರಶ್ನೆ ಏನು ಎಂದರೆ ಕೋಳಿ ಇಲ್ಲದೆ ಹೇಗೆ ಮೊಟ್ಟೆ ತಯಾರಾಗುತ್ತದೆ ಎಂದು? ಅಷ್ಟಕ್ಕೂ ನಿಮ್ಮ ಪ್ರಶ್ನೆಗೆ ಉತ್ತರ ಈ ಕೆಳಗಿನಂತೆ ಇದೆ! ಅಮೇರಿಕಾದ ಕ್ಲಾರಾ ಫುಡ್ಸ್ ಸಂಸ್ಥೆ ಕೋಳಿ ಇಲ್ಲದೆ ಹೇಗೆ ಮೊಟ್ಟೆ ತಯಾರು ಮಾಡುತ್ತಾರೆ ಎಂದು ನೋಡೋಣ.
ಮೊದಲಿಗೆ ಕೋಳಿ ಮೊಟ್ಟೆಯ ಒಳಗಡೆ ಇರುವಂತಹ DNA ಅನ್ನು ತೆಗೆಯಲಾಗುತ್ತದೆ, ನಂತರ ಮೊಟ್ಟೆ ತಯಾರಿಕೆಗೆ ಬೇಕಾಗಿರುವಂತಹ ಯಾವ ಜೀವಕೋಶಗಳು ಅಗತ್ಯವಿದೆ ಎನ್ನುವುದನ್ನು ತಿಳಿದುಕೊಳ್ಳು ತ್ತಾರೆ. ನಂತರ ಈ DNA ಅಲ್ಲಿ ಇರುವಂತಹ ಎಲ್ಲಾ ಅಂಶಗಳನ್ನು ಹೊರಗೆ ತೆಗೆಯುತ್ತಾರೆ, ಮೊದಲಿಗೆ ಈ DNA ಬಳಸಿಕೊಂಡು ಎಗ್ ವೈಟ್ ತಯಾರಿಸಲಾಗುತ್ತದೆ, ಎಗ್ ವೈಟ್ ಎಂದರೆ ಮೊಟ್ಟೆಯ ಹೊರಗಿನ ಭಾಗ ತಯಾರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.