ಯಾವುದೇ ಪರಿಸ್ಥಿತಿಯಲ್ಲು ಈ ನಾಲ್ಕು ಜನರ ಹತ್ತಿರ ಸಹಾಯ ಕೇಳಬೇಡಿ..ಹಸಿವೆ ಯಿಂದ ಕೂಡಿದ ಎರಡು ಕಾಗೆಗಳ ಕಥೆ - Karnataka's Best News Portal

ಯಾವುದೇ ಪರಿಸ್ಥಿತಿಯಲ್ಲೂ ಈ 4 ಜನರ ಹತ್ತಿರ ಸಹಾಯ ಕೇಳಬೇಡಿ ……|| ಹಸಿವೆ ಯಿಂದ ಕೂಡಿದ ಎರಡು ಕಾಗೆಗಳ ಕಥೆ..!ಬೇಕಾದರೆ ಹಸಿವಿನಿಂದ ಸಾಯಿರಿ, ಆದರೆ ಈ ನಾಲ್ಕು ಜನರಿಂದ ಯಾವುದೇ ರೀತಿಯ ಸಹಾಯವನ್ನು ಪಡೆಯಬೇಡಿ. ಏನೇ ತೊಂದರೆ ಬರಲಿ ಎಷ್ಟೇ ಕಷ್ಟ ಬರಲಿ, ಯಾವುದೇ ಸ್ಥಿತಿ ಬರಲಿ ಈ ನಾಲ್ಕು ಜನರ ಹತ್ತಿರ ಮಾತ್ರ ಯಾವುದೇ ಸಹಾಯ ಪಡೆದುಕೊಳ್ಳಬೇಡಿ.ಹಾಗಾದರೆ ಆ ನಾಲ್ಕು ಜನ ಯಾರು ಮತ್ತು ಹಸಿವೆಯಿಂದ ಕೂಡಿದ ಕಾಗೆ ಈ ರೀತಿಯಾಗಿ ಹೇಳಲು ಕಾರಣವೇನು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ. ಒಮ್ಮೆ ಒಂದು ಕಾಡಿನಲ್ಲಿ ಒಂದು ಮರದಲ್ಲಿ ಒಂದು ಕಾಗೆ ಜೋಡಿ ಇರುತ್ತಿತ್ತು. ಒಂದು ದಿನ ಆ ಎರಡು ಕಾಗೆ ಮರದ ಮೇಲೆ ಕುಳಿತು ಸುತ್ತ ನೋಡುತ್ತಿತ್ತು ಏನಾದರೂ ತಿನ್ನಲು ಆಹಾರ ಸಿಗುತ್ತದೆಯಾ ಎಂದು.

ಒಂದು ಕಡೆ ಆ ಕಾಡಿನಲ್ಲಿ ಬರಗಾಲದ ವಾತಾವರಣವಿತ್ತು. ಎಲ್ಲ ಪ್ರಾಣಿ ಪಕ್ಷಿಗಳು ಕೂಡ ಅಲ್ಲಿಂದ ಹೋಗಿದ್ದವು, ಕೆಲವೊಂದು ಪ್ರಾಣಿ ಪಕ್ಷಿಗಳು ಮಾತ್ರ ಆ ಕಾಡಿನಲ್ಲಿ ಉಳಿದಿದ್ದವು. ಆದರೆ ಆ ಎರಡು ಕಾಯಿಗಳು ಎಷ್ಟೋ ದಿನದಿಂದ ಆಹಾರವಿಲ್ಲದೆ ಹಸಿವಿನಿಂದ ಇದ್ದವು. ಆಗ ಎಲ್ಲಿಂದಲೋ ಬಂದ ಒಂದು ನರಿಯು ತನ್ನ ಬಾಯಲ್ಲಿ ಒಂದು ಆಹಾರದ ತುಂಡನ್ನು ತೆಗೆದುಕೊಂಡು ಬಂದು.

ಕಾಗೆಗಳು ಇದ್ದಂತಹ ಆ ಮರದ ಕೆಳಗಡೆ ಬಂದು ತಿನ್ನಲು ಕುಳಿತುಕೊಂಡಿತು. ಇದನ್ನು ನೋಡಿದ ಆ ಕಾಗೆಗಳು ಅದರಲ್ಲೂ ಹೆಣ್ಣು ಕಾಗೆ ಆ ನರಿಯನ್ನು ಕುರಿತು ಅಣ್ಣ ಇಂದು ಎರಡು ದಿನ ಆಯಿತು ನಮಗೆ ತಿನ್ನಲು ಆಹಾರ ಸಿಗಲಿಲ್ಲ, ನಿಮಗೆ ಸಿಕ್ಕಿರುವುದರಲ್ಲಿ ನಮಗೆ ಸ್ವಲ್ಪ ಕೊಟ್ಟರೆ ತುಂಬಾ ಉಪಕಾರವಾಗುತ್ತದೆ ಎಂದು ಹೇಳಿತು.

ಆಗ ನರಿಯು ಮೇಲೆ ನೋಡುತ್ತಾ ಮನಸಿನಲ್ಲಿಯೇ ಯೋಚನೆ ಮಾಡತೊಡಗಿತು! ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನರಿಯು ಕುತಂತ್ರಿ ಬುದ್ಧಿಯನ್ನು ಹೊಂದಿರುತ್ತದೆ. ಅದೇ ರೀತಿಯಾಗಿ ಕಾಗೆಗಳನ್ನು ನೋಡುತ್ತಾ ಇದನ್ನು ಆಹಾರ ತಿನ್ನಲು ಕರೆದರೆ ನಾನು ಆ ಕಾಗೆಯನ್ನು ಸಹ ತಿನ್ನಬಹುದು ಎಂದು ಆಲೋಚನೆಯನ್ನು ಇದು ಮಾಡುತ್ತಿದ್ದು, ಹಾಗೂ ಆ ಸಂದರ್ಭದಲ್ಲಿ ಕಾಗೆಯನ್ನು ಬಾ ತಿನ್ನು ಎಂದು ಹೇಳುತ್ತದೆ.

ಆಗ ಹೆಣ್ಣು ಕಾಗೆ ಆ ಆಹಾರವನ್ನು ತಿನ್ನಲು ಹೋಗುವಾಗ ಗಂಡು ಕಾಗೆ, ಹೆಣ್ಣು ಕಾಗೆಯನ್ನು ತಡೆಯಿತು, ನೀನು ಅವನ ಬಳಿ ಆಹಾರ ತಿನ್ನಲು ಹೋಗುತ್ತಿರುವೆಯಾ ಇವನು ತನ್ನ ಜೀವನದಲ್ಲಿ ಯಾರಿಗೂ ಕೂಡ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ಅದಕ್ಕೆ ಹೆಣ್ಣು ಕಾಗೆಯು ಈಗ ಅವನೇ ನನ್ನನ್ನು ಬಾ ಇದರಲ್ಲಿ ನೀನು ತಿನ್ನು ಎಂದು ಕರೆಯಿತು ಅಲ್ಲವೇ, ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *