ಧನು ರಾಶಿ ಮಾರ್ಚ್ ಮಾಸ ಭವಿಷ್ಯ....ಧನಸ್ಸು ರಾಶಿಯವರು ಸಾಡೇ ಸಾತ್ ಮುಗಿಯುತ್ತಿರುವುದರಿಂದ ಇನ್ನಷ್ಟು ಪ್ರಬಲವಾಗುತ್ತಿದ್ದೀರಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಧನು ರಾಶಿ ಮಾರ್ಚ್ ಮಾಸ ಭವಿಷ್ಯ….||ಧನಸ್ಸು ರಾಶಿಯವರು ಸಾಡೇ ಸಾತ್ ಮುಗಿಯುತ್ತಿರುವುದರಿಂದ ಇನ್ನಷ್ಟು ಪ್ರಬಲವಾಗುತ್ತಿದ್ದೀರಿ ಎಂದು ಹೇಳಬಹುದು. ಶನಿ ದೂರ ಹೋದ ಹಾಗೆ ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ, ಸಾಕಷ್ಟು ಬದಲಾವಣೆಗಳು ಬಂದವು. ಅದರಲ್ಲೂ ಎಲ್ಲವೂ ಕೂಡ ಒಂದು ರೀತಿಯ ಧನಾತ್ಮಕ ಬದಲಾವಣೆಗಳು ಎಂದೇ ಹೇಳಬಹುದು ಅಂದರೆ ಒಳ್ಳೆಯ ಬದಲಾವಣೆಗಳೇ ಆಗಿದೆ.

ಅದರಲ್ಲೂ ಹೆಚ್ಚಿನ ಧೈರ್ಯ, ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದುಕೊಂಡಿದ್ದರೆ ಅವುಗಳನ್ನು ಮಾಡುವುದಕ್ಕೆ ಮುಂದೆ ಹೋಗುತ್ತಿರುವವರೆಗೂ ಕೂಡ ಹೆಚ್ಚು ಯಶಸ್ಸು ಸಿಗುತ್ತಾ ಹೋಯಿತು. ಈಗಾಗಲೇ ಮೊದಲೇ ಹೇಳಿದಂತೆ ಜನವರಿಯಲ್ಲಿ ಶನಿಯ ಪರಿವರ್ತನೆ ಯಾದ ಮೇಲೆ, ಏಪ್ರಿಲ್ 22ನೇ ತಾರೀಖಿನ ಮೇಲೆ ಗುರು ಕೂಡ ಪರಿವರ್ತನೆಯಾಗಲಿದ್ದಾನೆ. ಅದರಲ್ಲೂ ಗುರು ಪಂಚಮ ಸ್ಥಾನಕ್ಕೆ ಹೋಗುತ್ತಿರುವುದರಿಂದ ಒಳ್ಳೆಯ ಶುಭಫಲಗಳನ್ನು ತರುತ್ತಾನೆ.

ಹಾಗೂ ಗುರು ಬಲವೂ ಕೂಡ ನಿಮಗೆ ಆಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಧನಸ್ಸು ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಯಾವುದೆಲ್ಲ ಒಳ್ಳೆಯ ಘಟನೆಗಳು ನಡೆಯುತ್ತದೆ. ಹಾಗಾದರೆ ಯಾವುದೆಲ್ಲ ಶುಭಫಲಗಳನ್ನು ಪಡೆದುಕೊಳ್ಳುತ್ತೀರಿ ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ. 12ರವರೆಗೂ 6 ರಲ್ಲಿ ಇರುವಂತಹ ಕುಜ, ಈಗಾಗಲೇ ಶನಿ ನಿಮ್ಮ ಶತ್ರುಗಳನ್ನು ದೂರ ಮಾಡುತ್ತಿದ್ದಾನೆ, ಇನ್ನು ಕುಜನೂ ಕೂಡ ಶತ್ರುಗಳನ್ನು ದೂರ ಮಾಡುತ್ತಾ ಹೋಗುತ್ತಾನೆ.

ಹಾಗಾಗಿ 12ರವರೆಗೂ ಕೂಡ ಹೊಸ ಸೈಟ್ ಖರೀದಿ ಭೂಮಿ ಖರೀದಿ, ವ್ಯಾಪಾರ ವ್ಯವಹಾರ ಹೀಗೆ ಇವುಗಳೆಲ್ಲದರಲ್ಲಿಯೂ ಕೂಡ ಹೆಚ್ಚು ಯಶಸ್ಸು ಸಿಗುತ್ತದೆ ಎಂದೇ ಹೇಳಬಹುದು. ಅದೇ ರೀತಿ 12ರ ನಂತರ ಕುಜ ಸ್ವಲ್ಪ ಸಪ್ತಮಕ್ಕೆ ಹೋಗುತ್ತಾನೆ. ಇದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಎದುರಾಗಬಹುದು.

ಅದರಲ್ಲೂ ವಿಶೇಷವಾಗಿ ಬೇರೆಯವರೊಂದಿಗೆ ಮಾತನಾಡುವಂತಹ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ಹೆಚ್ಚು ಗಮನ ವಹಿಸುವುದು ಉತ್ತಮ. ಹಾಗೆಯೇ ಭೂಮಿಯ ಕೆಲಸ ಕಾರ್ಯಗಳಿಗೇನು ಶುಭವಾಗಿಲ್ಲ 12ರ ನಂತರ. ಹಾಗೆಯೇ ತಿಂಗಳ ಮಧ್ಯಭಾಗದ ಒಳಗೆ ನಿಮ್ಮ ಸರ್ಕಾರಿ ಕೆಲಸ ಕಾರ್ಯಗಳು ಏನಾದರೂ ಇದ್ದರೆ ಅವುಗಳನ್ನು ಮಾರ್ಚ್ 14ನೇ ತಾರೀಖಿನ ಒಳಗಡೆ ಮುಗಿಸಿಕೊಳ್ಳುವುದು ಉತ್ತಮ.

ನಂತರದ ದಿನಗಳಲ್ಲಿ ನಿಮಗೆ ಅಷ್ಟೇನೂ ಉತ್ತಮವಾಗಿಲ್ಲ ಏಕೆಂದರೆ ಸುಖ ಸ್ಥಾನಕ್ಕೆ ರವಿ ಹೋದಾಗ ಸಾಕಷ್ಟು ಕಲಹಗಳು ತೊಂದರೆಗಳು ಅಡ್ಡಿ ಆತಂಕಗಳು ಉಂಟಾಗುತ್ತದೆ. ಅದರಲ್ಲೂ ನಿಮಗೆ ಕೆಲವೊಂದಷ್ಟು ವಿಚಾರಗಳು ನೆನಪಿಗೆ ಬರದೇ ಆ ಸಮಯದಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಕೂಡ ಉಂಟಾಗಬಹುದು. ಆದ್ದರಿಂದ 14ನೇ ತಾರೀಖಿನ ಒಳಗಡೆ ನಿಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *