ಸೂಜಿ ದಾರ ಬೇಡ, ಈ ಒಂದು ಮ್ಯಾಜಿಕ್ ವಸ್ತು ಸಾಕು ಹರಿದ ಬಟ್ಟೆ ಹೊಸದರಂತೆ ಆಗುತ್ತದೆ.... - Karnataka's Best News Portal

ಸೂಜಿ ದಾರ ಬೇಡ, ಈ ಒಂದು ಮ್ಯಾಜಿಕ್ ವಸ್ತು ಸಾಕು ಹರಿದ ಬಟ್ಟೆ ಹೊಸದರಂತೆ ಆಗುತ್ತದೆ….!!

ಮನೆಯಲ್ಲಿ ಕೆಲವೊಂದು ಬಟ್ಟೆಗಳು ಅಚಾನಕ್ಕಾಗಿ ಹರಿದು ಹೋಗುತ್ತದೆ ಹಾಗೂ ಕೆಲವೊಮ್ಮೆ ಯಾವುದಾದರು ವಸ್ತುಗೆ ಸಿಕ್ಕಿ ಆ ಬಟ್ಟೆ ಹರಿದು ಹೋಗುತ್ತದೆ. ಹಾಗೆಂದ ಮಾತ್ರಕ್ಕೆ ಅದನ್ನು ಎಸೆಯಲು ಸಾಧ್ಯವಾಗುವು ದಿಲ್ಲ, ಏಕೆಂದರೆ ಬಟ್ಟೆ ಹೊಸದಾಗಿರುತ್ತದೆ ಹಾಗೂ ಇನ್ನೂ ಹೆಚ್ಚಿನ ದಿನಗಳ ತನಕ ಬಾಳಿಕೆಗೆ ಬರುತ್ತದೆ.

ಆದರೆ ಅದನ್ನು ಹೇಗೆ ಸರಿಪಡಿಸುವುದು ಎನ್ನುವ ವಿಷಯ ಯಾರಿಗೂ ಕೂಡ ಗೊತ್ತಿಲ್ಲ. ಕೆಲವೊಂದು ಬಟ್ಟೆಗಳನ್ನು ಸರಿಪಡಿಸಿ ಹೊಲೆದು ನಂತರ ಅದನ್ನು ಮರುಬಳಕೆ ಮಾಡಿಕೊಳ್ಳಬಹುದು ಆದರೆ ಮಧ್ಯ ಭಾಗದಲ್ಲಿ ಆ ಬಟ್ಟೆ ಸಿಕ್ಕಿಹಾಕಿಕೊಂಡು ಹರಿದರೆ ಅದನ್ನು ಹೊಲೆದು ಉಪಯೋಗಿಸಲು ಸಾಧ್ಯ ವಾಗುವುದಿಲ್ಲ. ಅದು ಚೆನ್ನಾಗಿ ಕಾಣಿಸುವುದಿಲ್ಲ. ಅದಕ್ಕಾಗಿ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು.

ನೀವು ಅನುಸರಿಸಿದ್ದೆ ಆದಲ್ಲಿ ನೀವು ಕೂಡ ಈ ಕೆಲಸವನ್ನು ಮಾಡಿ ಕೊಳ್ಳುತ್ತೀರಾ ಎಂದೇ ಹೇಳಬಹುದು. ಅದರಲ್ಲೂ ಈ ಒಂದು ವಿಧಾನ ವನ್ನು ಅನುಸರಿಸುವುದಕ್ಕೆ ಯಾವುದೇ ರೀತಿಯ ಸೂಜಿ ಮತ್ತು ದಾರದ ಅವಶ್ಯಕತೆ ಇಲ್ಲ ಹಾಗಾದರೆ ಇದನ್ನು ಹೇಗೆ ಮಾಡುವುದು ಇದಕ್ಕೆ ಬೇಕಾಗುವ ಪದಾರ್ಥ ಯಾವುದು ಎನ್ನುವುದರ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ.

ಕೆಲವೊಮ್ಮೆ ಯಾವುದಾದರು ಬಟ್ಟೆಯ ಮೇಲೆ ಬೆಂಕಿಯ ಕಿಡಿ ಬಿದ್ದು ಬಟ್ಟೆ ತೂತಾಗಿರುತ್ತದೆ ಅಂತಹ ಸಮಯದಲ್ಲಿ ಅವುಗಳನ್ನು ಎಸಿಯಲ್ಲೂ ಸಾಧ್ಯವಾಗುವುದಿಲ್ಲ ಏಕೆಂದರೆ ಬಟ್ಟೆ ಚೆನ್ನಾಗಿರುತ್ತದೆ ಹಾಗೂ ಹೆಚ್ಚು ಬೆಲೆಯೂ ಕೂಡ ಇರುವುದರಿಂದ ಅವುಗಳನ್ನು ಆಚೆ ಹಾಕಲು ನಮಗೆ ಮನಸ್ಸು ಬರುವುದಿಲ್ಲ. ಹಾಗಾದರೆ ಅದನ್ನು ಹೇಗೆ ಸರಿ ಮಾಡುವುದು ಎಂದು ನೋಡುವುದಾದರೆ. ನಿಮಗೆ ಟೈಲರ್ ಅಂಗಡಿಗಳಲ್ಲಿ ಬಕ್ರಂ ಪೇಪರ್ ಎನ್ನುವುದು ಸಿಗುತ್ತದೆ. ಅದನ್ನು ತಂದು

ಅದು ಒಂದು ಭಾಗದಲ್ಲಿ ನುಣುಪಾಗಿ ಇರುತ್ತದೆ ಆ ಭಾಗವನ್ನು ನಿಮ್ಮ ಶರ್ಟ್ ಕೆಳಗಿನ ಭಾಗದಲ್ಲಿ ಇಟ್ಟು ಐರನ್ ಮಾಡಬೇಕು ಈ ರೀತಿ ಮಾಡುವುದರಿಂದ ಬಕ್ರ ಪೇಪರ್ ಬಟ್ಟೆಗೆ ಅಂಟಿಕೊಳ್ಳುತ್ತದೆ ಆಗ ಬಟ್ಟೆಯಲ್ಲಿ ಇರುವಂತಹ ತೂತು ಕಾಣಿಸುವುದಿಲ್ಲ. ಈ ರೀತಿ ಟಿ-ಶರ್ಟ್ ಬೇರೆ ಯಾವುದೇ ಬಟ್ಟೆ ಹರಿದಿದ್ದರೂ ಕೂಡ ಈ ರೀತಿ ಬಕ್ರಂ ಪೇಪರ್ ಉಪಯೋಗಿಸಿಕೊಂಡು ಆ ಬಟ್ಟೆಗಳನ್ನು ಸರಿಪಡಿಸಿಕೊಳ್ಳಬಹುದು.

ಕೆಲವೊಂದು ಬಟ್ಟೆಗಳನ್ನು ಒಗೆದ ನಂತರ ಆ ಬಟ್ಟೆಗಳು ಜುoಗೆದ್ದು ಬಿಡುತ್ತದೆ. ಆದರೆ ನಾವು ಮತ್ತೆ ಅದನ್ನು ಉಪಯೋಗಿಸಲು ಇಷ್ಟಪಡುವುದಿಲ್ಲ ಏಕೆಂದರೆ ಹಳೆಯ ಬಟ್ಟೆಯ ರೀತಿ ಕಾಣಿಸುತ್ತಿರುತ್ತದೆ ಎಂದು. ಆದರೆ ಅದನ್ನು ಒಂದು ಶೇವಿಂಗ್ ಬ್ಲೇಡ್ ಸಹಾಯದಿಂದ ಅದನ್ನು ಶೇವಿಂಗ್ ಮಾಡುವ ವಿಧಾನದಲ್ಲಿ ಮಾಡಿದರೆ ಅದರ ಮೇಲೆ ಎದ್ದಿರುವಂತಹ ಬಟ್ಟೆ ಸಂಪೂರ್ಣವಾಗಿ ಹೋಗುತ್ತದೆ ಮತ್ತು ಹೊಸ ಬಟ್ಟೆಯಂತೆ ಅದು ಕಾಣಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *