ಯುಗಾದಿ ಹಬ್ಬದ ನಂತರ 12 ರಾಶಿಗಳ ಜೀವನದಲ್ಲಿ ಗ್ರಹಗಳ ಅನುಗ್ರಹದಿಂದ ಏನೆಲ್ಲಾ ಬದಲಾವಣೆ ಆಗುತ್ತೆ ತಿಳಿಯಿರಿ..ಯುಗಾದಿ ರಾಶಿಫಲ

12 ರಾಶಿಗಳ ಯುಗಾದಿ ವರ್ಷ ಫಲ 2023……||

WhatsApp Group Join Now
Telegram Group Join Now

ಮೊದಲನೆಯದಾಗಿ ಮೇಷ ರಾಶಿಯಲ್ಲಿ ಏಪ್ರಿಲ್ 22ನೇ ತಾರೀಖಿಗೆ ಗುರು ಬರುತ್ತಾನೆ. ಹಾಗಾಗಿ ಗುರು ಈ ವರ್ಷ ಮೇಷ ರಾಶಿಯಲ್ಲಿಯೇ ಇರುತ್ತಾನೆ. ಹಾಗೂ ಈಗಾಗಲೇ ರಾಹು ಮೇಷ ರಾಶಿಯಲ್ಲಿಯೇ ಸ್ಥಿತನಾಗಿದ್ದಾನೆ. ಅಕ್ಟೋಬರ್ 29 ನೇ ತಾರೀಖಿಗೆ ಮೀನ ರಾಶಿಗೆ ತಾತ್ಕಾಲಿಕವಾಗಿ ಪ್ರವೇಶ ಮಾಡುತ್ತಾನೆ. ಆದರೆ ನಿಜವಾಗಿಯೂ ಸಂಪೂರ್ಣವಾಗಿ ಹೋಗುವಂತದ್ದು ನವೆಂಬರ್ 29ನೇ ತಾರೀಖಿಗೆ.

ಹಾಗಾಗಿ ನವೆಂಬ 29ನೇ ತಾರೀಖಿನ ವರೆಗೆ ರಾಹುವಿನ ಪ್ರಭಾವ ಮೇಷ ರಾಶಿಯಲ್ಲಿಯೇ ಇರುತ್ತದೆ. ಅದೇ ರೀತಿಯಾಗಿ ಕೇತು, ನವೆಂಬರ್ 29 ನೇ ತಾರೀಖಿಗೆ ಕನ್ಯಾ ರಾಶಿಗೆ ಹೋಗುತ್ತಾನೆ. ಅಕ್ಟೋಬರ್ 29ಕ್ಕೆ ತಾತ್ಕಾಲಿಕವಾಗಿ ಹೋಗುತ್ತಾನೆ ಆದರೆ ನವೆಂಬರ್ 29ನೇ ತಾರೀಖಿಗೆ ಸಂಪೂರ್ಣವಾಗಿ ಕನ್ಯಾ ರಾಶಿಗೆ ಹೋಗುತ್ತಾನೆ. ಹಾಗಾಗಿ ನವೆಂಬರ್ 29ನೇ ತಾರೀಖಿನವರೆಗೂ ಕೂಡ ತುಲಾ ರಾಶಿಯಲ್ಲಿಯೇ ಕೇತು ಸಂಚಾರ ಮಾಡುತ್ತಾನೆ.

ಇನ್ನು ಜನವರಿ 17ನೇ ತಾರೀಖಿಗೆ ಕುಂಭ ರಾಶಿಯ ಶನಿ ಈಗಾಗಲೇ ಬಂದಿದ್ದಾನೆ ಹಾಗಾಗಿ ಈ ವರ್ಷ ಪೂರ್ತಿ ಕುಂಭ ರಾಶಿಯಲ್ಲಿಯೇ ಶನಿ ಇರುತ್ತಾನೆ. ಹಾಗಾದರೆ ಮೇಷ ರಾಶಿಯವರಿಗೆ ಈ ನಾಲ್ಕು ಗ್ರಹಗಳಿಂದ ಯಾವ ರೀತಿಯ ಫಲ ಇರುತ್ತದೆ ಎಂದು ನೋಡುವುದಾದರೆ, ನಿಮ್ಮ ರಾಶಿಯಲ್ಲಿ ರಾಹು ಮತ್ತು ಗುರು ಇರುವುದರಿಂದ. ಗುರುಚಂಡಾಳ ಯೋಗ ಇರುತ್ತದೆ.

ಹಾಗೂ ಇದರ ಪ್ರಭಾವ ನವೆಂಬರ್ ತಿಂಗಳಿನವರೆಗೂ ಕೂಡ ಇದ್ದೇ ಇರುತ್ತದೆ. ಮೇಷ ರಾಶಿಯಲ್ಲಿ ಗುರು ಮತ್ತು ರಾಹು ಇರುವುದರಿಂದ ಗುರು ನಿಮಗೆ ಸಂಪೂರ್ಣವಾದಂತಹ ಶುಭಫಲಗಳನ್ನು ಕೊಡಲು ಸಾಧ್ಯವಾಗುವುದಿಲ್ಲ. ಏಕೆoದರೆ ಗುರು ರಾಹುವಿನ ಕಂಟ್ರೋಲ್ ನಲ್ಲಿ ಇರುವುದರಿಂದ ಸ್ವಲ್ಪಮಟ್ಟಿಗೆ ಶುಭಫಲಗಳು ಕೂಡ ಹಾಗೂ ಸ್ವಲ್ಪ ಮಟ್ಟಿಗೆ ಅಶುಭ ಫಲಗಳು ಕೂಡ ಬರುತ್ತದೆ.

ಇನ್ನು ಗುರು ನಿಮ್ಮ ಮನೆಯಲ್ಲಿಯೇ ಕುಳಿತುಕೊಂಡು 5 7 9ನೇ ಮನೆಯನ್ನು ನೋಡುತ್ತಿರುತ್ತಾನೆ. ಇದರ ಪ್ರಭಾವ ಯಾವ ರೀತಿ ಇರುತ್ತದೆ ಎಂದರೆ ಮೇಷ ರಾಶಿಯವರಿಗೆ ಈ ಯುಗಾದಿಯ ನಂತರ ಗುರುವಿನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಹಾಗಾಗಿ ಇಲ್ಲಿಯ ತನಕ ನಿಮಗೆ ಹೇಗೆಲ್ಲಾ ಹಣಕಾಸಿನ ತೊಂದರೆ ಇತ್ತು ಅವೆಲ್ಲವೂ ಕೂಡ ಇನ್ನು ಮುಂದೆ ಸರಿ ಹೋಗಲಿದೆ.

ಹಾಗೆಯೇ ಮೇಷ ರಾಶಿಯವರು ಹಿಂದಿನ ದಿನಗಳಲ್ಲಿ ಎಷ್ಟೇ ಕೆಲಸ ಮಾಡಿದರು ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತಿರುವುದಿಲ್ಲ ಆದರೆ ಇನ್ನು ಮುಂದಿನ ದಿನಗಳಲ್ಲಿ ನೀವು ಎಷ್ಟು ಶ್ರಮಪಟ್ಟು ಕೆಲಸ ಮಾಡಿರುತ್ತೀರೋ, ಅವೆಲ್ಲದಕ್ಕೂ ಕೂಡ ಈಗ ಪ್ರತಿಫಲವಾಗಿ ಹೆಚ್ಚಿನ ಹಣ ಸಂಪಾದನೆ ಮಾಡುತ್ತೀರಿ, ಹಾಗೂ ಅಂತಹ ಯೋಗ ಫಲವನ್ನು ಕೂಡ ನೀವು ಪಡೆದುಕೊಳ್ಳುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]