100 ವರ್ಷಕ್ಕೆ ಒಮ್ಮೆ ಬಾಗಿಲು ತೆಗೆದು ದರ್ಶನ ಕೊಡುವ ಪರಮಾತ್ಮ….!
ಮೇಲೆ ಹೇಳಿದಂತೆ ಈ ಒಂದು ದೇವಸ್ಥಾನ ವರ್ಷಕ್ಕೆ ಒಮ್ಮೆ ಮಾತ್ರ ಗರ್ಭಗುಡಿಯ ಬಾಗಿಲು ತೆಗೆಯುತ್ತಾರೆ. ಈ ದೇವಸ್ಥಾನ ಎಷ್ಟು ಶಕ್ತಿಶಾಲಿ ಆಗಿರುತ್ತದೆ ಎಂದರೆ 100 ವರ್ಷದ ಮುಂಚೆ ಗರ್ಭಗುಡಿಯ ಬಾಗಿಲನ್ನು ಏನಾದರೂ ತೆರೆದರೆ ಭೂಮಿಗೆ ಕತ್ತಲು ಆವರಿಸುತ್ತದೆ ಎಂದೇ ಹೇಳುತ್ತಾರೆ. ಈ ದೇವಸ್ಥಾನದಲ್ಲಿ ನೆಲೆಸಿರುವ ರಾಮದೇವರು.
ತಮ್ಮ ನೆರಳಿಗೆ ಶಕ್ತಿಯನ್ನು ತುಂಬಿ ವಜ್ರದ ಶಿಲೆಯಲ್ಲಿ ಪ್ರತಿಷ್ಠಾಪನೆ ಗೊಂಡಿದ್ದಾರೆ ಎಂದು ಹೇಳುತ್ತಾರೆ. ಮೂಲ ರಾಮ ಎಂದು ಹೆಸರು ಬಂದಿದ್ದೇ ಈ ದೇವಸ್ಥಾನದಲ್ಲಿ ನೆಲೆಸಿರುವ ರಾಮ ದೇವರಿಂದ. ಬರೋಬ್ಬರಿ 100 ವರ್ಷಕ್ಕೊಮ್ಮೆ ಬಾಗಿಲು ತೆಗೆಯುವಂತಹ ರಾಮ ದೇವರನ್ನು ಜನಕ್ ಪುರ್ದಂ ರಾಮ ದೇವರು ಎಂದು ಕರೆಯುತ್ತಾರೆ. ಜನಕ್ ಪುರ್ದಂ ಎಂದರೆ ಮೈಥಿಲಿ ಅಂದರೆ ನೇಪಾಳಿ ಭಾಷೆಯಲ್ಲಿ 100 ವರ್ಷದ ರಾಜ ಎಂದು ಅರ್ಥ.
ಇಲ್ಲಿಯವರೆಗೆ ಈ ದೇವಸ್ಥಾನದ ಬಾಗಿಲನ್ನು 18 ಬಾರಿ ತೆಗೆಯಲಾಗಿದೆ. ಈಗ 19ನೇ ಬಾರಿ ತೆಗೆಯಲು ಹೆಚ್ಚಿನ ತಯಾರಿಗಳು ಕೂಡ ನಡೆಯು ತ್ತಿದೆ. ಹಾಗಾದರೆ ಈ ಅದ್ಭುತವಾದಂತಹ ದೇವಸ್ಥಾನ ಇರುವುದಾದರೂ ಎಲ್ಲಿ? ಇದರ ಸಂಪೂರ್ಣ ವಿಳಾಸವನ್ನು ಈ ದಿನ ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ.
04/05/1924 ರಲ್ಲಿ ಈ ದೇವಸ್ಥಾನದ ಗರ್ಭಗುಡಿ ಬಾಗಿಲು ತೆಗೆಯ ಲಾಗಿತ್ತು. ವರದಿಗಳ ಪ್ರಕಾರ ಆಗಿನ ಕಾಲದಲ್ಲಿ 25 ದಿನಗಳ ಕಾಲ ದರ್ಶನದ ಭಾಗ್ಯ ದೊರೆತಿತ್ತು ಎಂದು ಹೇಳುತ್ತಾರೆ. ಆ ಸಮಯದಲ್ಲಿ ಸ್ವತಹ ಬ್ರಿಟಿಷರು ಇಲ್ಲಿ ನೆಲೆಸಿರುವ ರಾಮದೇವರಿಗೆ ಭಕ್ತರಾಗಿದ್ದರಂತೆ. ಹಾಗಾದರೆ ಈ ದೇವಸ್ಥಾನ ಎಲ್ಲಿ ಬರುತ್ತದೆ ಇದರ ವಿಳಾಸ ಯಾವುದು ಎಂದು ನೋಡುವುದಾದರೆ.
ನೇಪಾಳ ದೇಶದ ಕಠ್ಮಂಡು ನಗರಕ್ಕೆ ವಿಮಾನದಲ್ಲಿ ಹೋಗಬೇಕು, ಕಠ್ಮಂಡು ನಗರದಿಂದ 224 ಕಿಲೋಮೀಟರ್ ಪಯಾಣ ಮಾಡಿದರೆ ಜನಕ್ ಪುರ್ ಎಂಬ ಹಳ್ಳಿ ಸಿಗುತ್ತೆ. ಇದೆ ಜನಕ್ ಪುರ್ ಹಳ್ಳಿಯಲ್ಲಿ ನೆಲೆಸಿರುವ “ಜನಕಪುರದಂ ಶ್ರೀ ರಾಮ ಮಂದಿರ ದೇವಸ್ಥಾನ”. 04/05/1924 ರಲ್ಲಿ ದರ್ಶನ ಕೊಟ್ಟಿದ್ದಂತಹ ಈ ರಾಮದೇವರು ಈಗ ಮತ್ತೆ ದರ್ಶನ ಕೊಡಲು ನೇಪಾಳದಲ್ಲಿ ಎಲ್ಲಾ ಸಿದ್ಧವಾಗಿದೆ ಎಂದೇ ಹೇಳಬಹುದು.
ನೀವೇ ಯೋಚಿಸಿ ನೋಡಿ ಕೇವಲ ಒಂದು ವಾರ ಒಂದು ತಿಂಗಳು ಎಂದರೆ ದೇವಸ್ಥಾನದಲ್ಲಿ ಹೆಚ್ಚಿನ ಭಕ್ತಾದಿಗಳು ಸೇರುತ್ತಾರೆ. ಇನ್ನೂ 100 ವರ್ಷಕ್ಕೊಮ್ಮೆ ಈ ದೇವಸ್ಥಾನದ ಬಾಗಿಲು ತೆಗೆಯುತ್ತದೆ ಎಂದರೆ ಎಷ್ಟು ಜನ ಭಕ್ತಾದಿಗಳು ಇಲ್ಲಿ ಸೇರುತ್ತಾರೆ ಎಂದು. ದೇವಸ್ಥಾನದ ಆಡಳಿತ ಮಂಡಳಿ ಹೇಳಿರುವ ಪ್ರಕಾರ ಸರಿಯಾದ ವ್ಯವಸ್ಥೆ ಮಾಡಿಕೊಟ್ಟರೆ ಸುಮಾರು 10 ಕೋಟಿಗೂ ಹೆಚ್ಚು ಮಂದಿ ಬರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.