ಹಾರುವ ಶಿವಲಿಂಗ ಈ ಶಿವಲಿಂಗದ ಒಳಗಡೆ ಇದೆ ಶಮಂತಕ ಮಣಿ ನಿಮ್ಮ ಕಣ್ಣಾರೆ ನೋಡಿ.. - Karnataka's Best News Portal

ಹಾರುವ ಶಿವಲಿಂಗ ಈ ಶಿವಲಿಂಗದ ಒಳಗಡೆ ಇದೆ ಶಮಂತಕ ಮಣಿ ನಿಮ್ಮ ಕಣ್ಣಾರೆ ನೋಡಿ…..!!

ಈ ದಿನ ನಾವು ಹೇಳಲು ಹೊರಟಿರುವಂತಹ ಈ ಶಿವಲಿಂಗ ಭಾರತ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಮೊದಲ ಸ್ಥಾನದಲ್ಲಿ ಇದೆ. ನಮ್ಮ ಭಾರತ ದೇಶದ ಅತ್ಯಂತ ನಿಗೂಢ ಹಾಗೂ ಶಕ್ತಿಶಾಲಿ ಶಿವಲಿಂಗ ಎಂದೇ ಪರಿಗಣಿಸಲಾಗಿದೆ. ಈ ಶಿವಲಿಂಗವನ್ನು ನೋಡಿದರೆ ಎಂಥವರಿಗಾದರೂ ಮೈ ರೋಮಾಂಚನಗೊಳ್ಳುತ್ತದೆ.

ಒಂದು ರೀತಿಯ ಭಕ್ತಿ ಉಕ್ಕಿ ಹರಿಯುತ್ತದೆ ಎಂದೇ ಹೇಳಬಹುದು. ಈ ಶಿವಲಿಂಗವನ್ನು ಪ್ರತಿಯೊಬ್ಬ ಭಕ್ತರು ಹಾರುವ ಹಾಗೂ ತೇಲುವ ಶಿವಲಿಂಗ ಎಂದೇ ಕರೆಯುತ್ತಾರೆ. ಏಕೆಂದರೆ ಈ ಶಿವಲಿಂಗ ಸಾವಿರಾರು ವರ್ಷಗಳಿಂದ ಹಾರುತ್ತಲೇ ಇತ್ತು. ನಮ್ಮ ಭಾರತ ದೇಶದಲ್ಲಿರುವ ಎಲ್ಲಾ ಶಿವಲಿಂಗದ ಮೂಲ ಈ ಹಾರುವ ಶಿವಲಿಂಗ ಎಂದೇ ಉಲ್ಲೇಖಿಸಲಾಗಿದೆ. ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ.

ಪ್ರಪಂಚದ ಮೊದಲ ಶಿವಲಿಂಗ ಎಂದು ಹೇಳುತ್ತಾರೆ. ಹಾಗಾದರೆ ಈ ಅದ್ಭುತವಾದ ಶಿವಲಿಂಗ ಇರುವುದಾದರೂ ಎಲ್ಲಿ? ಅದರ ವಿಳಾಸವನ್ನು ಈ ಕೆಳಗಿನಂತೆ ತಿಳಿಯೋಣ. ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಹೋಗಬೇಕು ಅಹಮದಾಬಾದ್ ನಿಂದ 300 ಕಿಲೋಮೀಟರ್ ಪಯಾಣ ಮಾಡಿದರೆ ಕೇಂದ್ರಾಡಳಿತ ಪ್ರದೇಶ ಡಿಯು ಎಂಬ ಊರಿಗೆ
ತಲುಪುತ್ತೀರಾ, ಡಿಯು ಇಂದ 82 ಕಿಲೋಮೀಟರ್ ಪ್ರಯಾಣ ಮಾಡಿದರೆ ನಿಮಗೆ ಸೋಮನಾಥ ಊರು ಸಿಗುತ್ತದೆ. ಇದೇ ಊರಿನಲ್ಲಿ ನೆಲೆಸಿರುವ “ಜ್ಯೋತಿರ್ಲಿಂಗ ಶ್ರೀ ಸೋಮನಾಥ ಮಹಾದೇವ ಮಂದಿರ”

ಈ ದೇವಸ್ಥಾನ ಸ್ವರ್ಗದಂತೆ ಕಂಗೊಳಿಸುತ್ತದೆ, ಎರಡು ಕಣ್ಣು ಸಾಲದು ಈ ಒಂದು ದೇವಸ್ಥಾನವನ್ನು ನೋಡುವುದಕ್ಕೆ. ಈ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡುವಂತಹ ಸಮಯದಲ್ಲಿ. ಈ ಶಿವಲಿಂಗಕ್ಕೆ ವಜ್ರ ಮತ್ತು ವೈಢೂರ್ಯದ ಲೇಪನವನ್ನು ಮಾಡಲಾಗಿತ್ತು ಎಂದು ಹೇಳುತ್ತಾರೆ. ಈ ಸೋಮನಾಥ ದೇವಾಲಯವನ್ನು ಅತ್ಯಂತ ಶ್ರೀಮಂತ ಮಂದಿರ ಎಂದೇ ಪುರಾವೆಯಲ್ಲಿ ಹೇಳಲಾಗಿದೆ.

17 ಬಾರಿ ಅನ್ಯ ಧರ್ಮದ ದಾಳಿ ಕೂರರ ದಾಳಿಗೆ ತುತ್ತಾದ ಈ ಸೋಮನಾಥ ದೇವಸ್ಥಾನ. ಈ ಹಾರುವ ಶಿವಲಿಂಗವನ್ನು ಚಂದ್ರದೇವರು ಪ್ರತಿಷ್ಠಾಪಿಸಿದ್ದಾರೆ. ಸೋಮ ಎಂದರೆ ಚಂದ್ರ ಹಾಗಾಗಿ ಸೋಮನಾಥ ದೇವಸ್ಥಾನ ಎಂಬ ಹೆಸರು ಬಂದಿದೆ. 1024 ನೇ ಇಸವಿಯಲ್ಲಿ ಗಝನ್ ವಿಡ್ ರಾಜ, ಮೊಹಮ್ಮದ್ ಗಝಾನಿ ಈ ದೇವಸ್ಥಾನಕ್ಕೆ ಹಲವು ಬಾರಿ ಆಕ್ರಮಣ ಮಾಡಿ.

ದೇವಸ್ಥಾನವನ್ನು ಕೊಳ್ಳೆ ಹೊಡೆದು, ಮಂದಿರವನ್ನು ದ್ವಂಸ ಮಾಡುತ್ತಾನೆ. ಆದರೆ ಈ ಶಿವಲಿಂಗವನ್ನು ನೋಡಿದಂತಹ ಮೊಹಮ್ಮದ್ ಗಝಾನಿ ಬೆಚ್ಚಿ ಬೀಳುತ್ತಾನೆ. ಹೌದು ಚಂದ್ರ ದೇವರು ಸ್ಥಾಪಿಸಿರುವಂತಹ ಈ ಶಿವಲಿಂಗ ಮೇಲಿನಿಂದ ಅಥವಾ ಕೆಳಗಿನಿಂದ ಯಾವುದೇ ಆಧಾರವಿಲ್ಲದೆ ಗಾಳಿಯಲ್ಲಿ ತೇಲುತ್ತಾ ಇತ್ತು. ಮೊಹಮ್ಮದ್ ಗಝಾನಿ ಎಷ್ಟೇ ಪ್ರಯತ್ನ ಪಟ್ಟರು ಈ ಲಿಂಗವನ್ನು ಮುಟ್ಟುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *