ತಿರುಪತಿಯಲ್ಲಿ ಜೀವಂತವಾಗಿರುವ ಶ್ರೀನಿವಾಸನ ಮಹಾ ರಹಸ್ಯ..ವಿನಯ್ ಗುರೂಜಿ ಹೇಳೊದೇನು ನೋಡಿ.. - Karnataka's Best News Portal

ತಿರುಪತಿಯಲ್ಲಿ ಜೀವಂತವಾಗಿರುವ ಶ್ರೀನಿವಾಸನ ಮಹಾ ರಹಸ್ಯ…!!

ಕಲ್ಯಾಣಾದ್ಬುತ ಗಾತ್ರಾಯ ಕಾಮಿತಾರ್ಥ ಪ್ರಧಾಯಿನಿ ಶ್ರೀಮಧ್ ವೆಂಕಟನಾಥಾಯ ಶ್ರೀನಿವಾಸಾಯ ಮಂಗಳಂ. ರಾಮಾನುಜರು ಈ ಶ್ಲೋಕವನ್ನು ಹೇಳುತ್ತಾರೆ. ಹಾಗೆಯೇ ಮಧ್ವಾಚಾರ್ಯರು ಇನ್ನೊಂದು ಅರ್ಥದಲ್ಲಿ ಅನಂತ ಕಲ್ಯಾಣ ಗುಣ ಪರಿಪೂರ್ಣ ಎಂದು. ಮದ್ವಾಚಾ ರ್ಯರಿಗೆ ಪರಿಪೂರ್ಣವಾಗಿ ವರ್ಣಿಸಲು ಕಷ್ಟವಾಗುತ್ತದೆ. ಸ್ವಯಂ ಹನುಮಂತ ಹೇಳುವಂತಹ ಶ್ಲೋಕವಿದು. ಈ ಒಂದು ಶ್ಲೋಕದ ಅರ್ಥ.

ಅಂದರೆ ಅನಂತ ಕಲ್ಯಾಣ ಗುಣ ಪರಿಪೂರ್ಣ ಎಲ್ಲವನ್ನು ಹೊಂದಿರು ವಂತಹ ನೀವೇ ಶ್ರೇಷ್ಠರು ಎನ್ನುವಂತೆ ಮಧ್ವಾಚಾರ್ಯರು ವರ್ಣಿಸು ತ್ತಾರೆ. ನಮ್ಮಲ್ಲಿಯೂ ಕೂಡ ಎಲ್ಲಾ ಗುಣಗಳು ಇದೆ ಆದರೆ ಅವೆಲ್ಲವೂ ಕೂಡ ಪರಿಪೂರ್ಣವಾಗಿಲ್ಲ ಒಂದಲ್ಲ ಒಂದು ವಿಚಾರದಲ್ಲಿ ನಾವು ಹಿಂದೆ ಇದ್ದೇವೆ ಹಾಗೂ ಆ ವಿಚಾರಗಳು ನಮಗೆ ಗೊತ್ತಿರುವುದು ಇಲ್ಲ. ಹೀಗೆ ನಾವು ಒಂದಲ್ಲ ಒಂದರಲ್ಲಿ ಹಿಂದೆ ಉಳಿದಿರುತ್ತೇವೆ.

ಆದರೆ ಭಗವಂತ ಆ ರೀತಿ ಅಲ್ಲ ಸಂಪೂರ್ಣವಾದಂತಹ ಪರಿಪೂರ್ಣವಾ ದಂತಹ ಗುಣಗಳು ಇರುತ್ತದೆ. ಆದ್ದರಿಂದಲೇ ಅವರನ್ನು ಭಗವಂತ ಎಂದು ಕರೆಯುತ್ತಾರೆ. ನೀವು ಗಮನಿಸಿದರೆ ಅದರ ಅರ್ಥ ತಿಳಿಯುತ್ತದೆ ಭೂಮಿಯ ಮೇಲೆ ಪ್ರತಿಯೊಂದನ್ನು ಕೂಡ ಸೃಷ್ಟಿ ಮಾಡಿರುವುದೇ ಇದಕ್ಕೆ ಒಂದು ನಿದರ್ಶನ. ಹೌದು ನಾವೆಲ್ಲರೂ ಕೂಡ ಈ ದಿನ ಸುಖವಾಗಿ ನೆಮ್ಮದಿಯಾಗಿ ಜೀವನ ಸಾಗಿಸುತಿದ್ದೇವೆ ಎಂದರೆ ಅದಕ್ಕೆ ಅರ್ಥ ಪರಿಪೂರ್ಣವಾಗಿರುವಂತಹ ಜಗತ್ತು ಆದ್ದರಿಂದಲೇ ನಾವು ಇಲ್ಲಿ ನೆಲೆಸುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಬಹುದು.

ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನೀವೇ ಗಮನಿಸಬಹುದು ಹೆತ್ತ ತಂದೆ ತಾಯಿಗಳ ಮಾತನೇ ಮಕ್ಕಳು ಕೇಳುವುದಿಲ್ಲ ಇನ್ನೆಲ್ಲಿಂದ ಬರುತ್ತವೆ ಪರಿಪೂರ್ಣತೆ. ಅವರಯಾವುದೇ ಮಾತುಗಳನ್ನು ಕೇಳದೆ ತಮ್ಮದೇ ಆದಂತಹ ದಾರಿಯಲ್ಲಿ ಹೋಗುತ್ತಿರು ತ್ತಾರೆ. ಆದ್ದರಿಂದ ಮನುಷ್ಯ ಯಾವುದೇ ಕಾರಣಕ್ಕೂ ಪರಿಪೂರ್ಣ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಜಗತ್ತನ್ನು ಸೃಷ್ಟಿಸಿರುವುದು ಭಗವಂತ ಅದೇ ರೀತಿಯಾಗಿ ಎಲ್ಲಾ ಗ್ರಹಗಳನ್ನು ಕೂಡ ನಿಯಂತ್ರಿಸುತ್ತಿರುವುದು ಕೂಡ ಭಗವಂತನೇ ಆಗಿದ್ದಾನೆ. ಅದೇ ರೀತಿಯಾಗಿ ನಮ್ಮ ಪಂಚಭೂತಗಳನ್ನು ಕೂಡ ನಿಯಂತ್ರಿಸುವ ಶಕ್ತಿ ಅವನಲ್ಲಿ ಇರುವುದರಿಂದ ಪರಿಪೂರ್ಣತೆ ಹೊಂದಿರುವಂತಹ ದೇವರು ಎಂದೇ ಹೇಳಬಹುದು. ಇವೆಲ್ಲವೂ ಕೂಡ ಭಗವಂತನಿಗೆ ಇರುವ ಪರಿಪೂರ್ಣತೆಯ ಸ್ವಭಾವ ಅಥವಾ ಗುಣವಾಗಿರುತ್ತದೆ.

ಅದೇ ರೀತಿಯಾಗಿ ನಮ್ಮ ಭೂಮಿಯ ಮೇಲೆ ಯಾವ ಸಮಯಕ್ಕೆ ಯಾವ ಘಟನೆ ನಡೆಯಬೇಕು, ಯಾವ ಸಮಯಕ್ಕೆ ಮಳೆ ಬರಬೇಕು, ಹಾಗೆ ಯಾವ ಸಮಯಕ್ಕೆ ಎಲೆ ಚಿಗುರಬೇಕು, ಹೂವು ಅರಳಬೇಕು, ಹೀಗೆ ಪ್ರತಿಯೊಂದು ವಿಷಯವು ಕೂಡ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಆದರೆ ಅವೆಲ್ಲವೂ ನಮ್ಮ ಕೈಯಿಂದ ನಡೆಯಲು ಸಾಧ್ಯವಿಲ್ಲ ಇವೆಲ್ಲ ಅರ್ಥವೂ ಕೂಡ ಭಗವಂತ ಎಲ್ಲಾ ರೀತಿಯಲ್ಲಿಯೂ ಕೂಡ ಪರಿಪೂರ್ಣ ಎಂಬ ಅರ್ಥವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *