ಸಂಖ್ಯಾಶಾಸ್ತ್ರದ ಪ್ರಕಾರ 1, 10, 19, ಮತ್ತು 28ನೇ ದಿನಾಂಕದಂದು ಜನಿಸಿದವರ ಗುಣಲಕ್ಷಣಗಳು....| - Karnataka's Best News Portal

ಸಂಖ್ಯಾಶಾಸ್ತ್ರದ ಪ್ರಕಾರ 1, 10, 19, ಮತ್ತು 28ನೇ ದಿನಾಂಕದಂದು ಜನಿಸಿದವರ ಗುಣಲಕ್ಷಣಗಳು….||

1, 10, 19 ಹಾಗೂ 28ನೇ ಸಂಖ್ಯೆಯ ಒಡೆಯ ಸೂರ್ಯ ಈ ದಿನಾಂಕ ದಲ್ಲಿ ಹುಟ್ಟಿದವರ ಸಂಪೂರ್ಣ ಮಾಹಿತಿ ಹಾಗೂ ಅವರ ಗುಣಲಕ್ಷಣ ಗಳು ಯಾವ ರೀತಿ ಇರುತ್ತದೆ ಅವರು ಯಾವ ರೀತಿಯ ಸ್ವಭಾವಗಳನ್ನು ಹೊಂದಿರುತ್ತಾರೆ. ಹೀಗೆ ಅವರ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ವರ್ಷದ ಯಾವುದೇ ತಿಂಗಳು 1, 10, 19, 28 ಈ ದಿನಗಳಲ್ಲಿ ಜನಿಸಿದ ವರು ಸೂರ್ಯನ ನಿಯಂತ್ರಣಕ್ಕೆ ಒಳಪಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಗ್ರಹಕ್ಕೆ ಸಂಬಂಧಪಟ್ಟ ಎಲ್ಲ ಗುಣ ನಡತೆಗಳು ಇವರಲ್ಲಿ ಅಡಗಿರುತ್ತದೆ. ನವಗ್ರಹಗಳ ನಾಯಕನೂ, ಸಮಸ್ತ ಜೀವ ರಾಶಿಗಳಿಗೆ ಆತ್ಮ ಸ್ವರೂಪನು, ಪ್ರಪಂಚದ ಬೆಳಕಿನಾಟದ ಸೂತ್ರದಾರನು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸ್ವರೂಪನು ಈ ಸೂರ್ಯದೇವ.

ಸಂಖ್ಯಾಶಾಸ್ತ್ರದ ಪ್ರಕಾರ ಪ್ರಪ್ರಥಮವಾದ 1 ನೇ ಸಂಖ್ಯೆಗೆ ಸೂರ್ಯ ಒಡೆಯನೆಂದು ಹೇಳಲಾಗುತ್ತದೆ, ಸಾಮಾನ್ಯ ಎತ್ತರವುಳ್ಳವರಾಗಿ ವಿಶಾಲ ವಾದ ಭುಜಗಳು, ದೃಢಕಾಯರು, ದಟ್ಟವಾದ ತಲೆ ಕೂದಲು, ದೃಢವಾದ ದಂತ ಫಕ್ತಿಗಳು, ಸಿಂಹ ಗಾಂಭೀರ್ಯ ಉಳ್ಳವರು, ಸ್ವಾಭಿಮಾನಿಗಳು ಮಿತ ಭಾಷಿಗಳು, ಮುಂದಾಳತ್ವ ವಹಿಸುವವರು, ತಾವು ಇನ್ನೊಬ್ಬರ ಕೈ ಕೆಳಗೆ ಬದುಕುವುದಕ್ಕಿಂತ ತಮ್ಮ ಕೈ ಕೆಳಗೆ ಇತರರೂ ಬದುಕಬೇಕು.

ನಾವು ಹೇಳಿದಂತೆ ಕೇಳಬೇಕು ಎಂದು ಇವರು ಬಯಸುತ್ತಾರೆ. ಈ ಸಂಖ್ಯೆಯವರು ನ್ಯಾಯ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿರು ತ್ತಾರೆ. ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಇವರ ನೈಪುಣ್ಯತೆ ಎದ್ದು ಕಾಣುತ್ತದೆ. ಹೆಚ್ಚಾಗಿ ಇವರು ಯಾರ ಬಳಿಯೂ ಕೂಡ ಸೇರುವುದಿಲ್ಲ. ಹಾಗೆಯೇ ಹೆಚ್ಚು ಮಾತನಾಡುವುದು ಕೂಡ ಇಲ್ಲ. ಮಾತನಾಡಬೇಕು ಎಂದು ಬಯಸಿದರೆ ಮಾತಿನಲ್ಲಿಯೇ ಮೋಡಿ ಮಾಡುತ್ತಾರೆ.

ಇವರ ಹೃದಯ ಬಹಳ ಮೃದುವಾಗಿರುವುದರಿಂದ ಇತರರ ಕಷ್ಟಗಳಿಗೆ ನೆರವಾಗಲು ಬಯಸುತ್ತಾರೆ. ಸುಳ್ಳು ಕಪಟ ಎನ್ನುವುದು ಇವರಿಗೆ ಆಗುವುದಿಲ್ಲ. ಮನಸ್ಸಿನಲ್ಲಿ ಯಾವುದೇ ರಹಸ್ಯ ಮುಚ್ಚಿಟ್ಟುಕೊಳ್ಳದೆ ಎಲ್ಲವನ್ನು ಹೇಳಿಬಿಡುವ ಇವರ ಸ್ವಭಾವಗಳಲ್ಲಿ ಇದು ಕೂಡ ಒಂದು. ತಮಗಾಗಿ ಇನ್ನೊಬ್ಬರಿಂದ ಸಹಾಯ ಬೇಡುವುದು ಎಲ್ಲರ ಮನಸ್ಸಿಗೆ ವಿರುದ್ಧವಾದದ್ದು. ತಮ್ಮಲ್ಲಿರುವುದನ್ನು ಕೊಟ್ಟು ಸುಮ್ಮನಿರುತ್ತಾರೆ ವಿನಹ ಯಾವುದೇ ಕಾರಣಕ್ಕೂ ಇನ್ನೊಬ್ಬರ ಹತ್ತಿರ ಬೇಡುವುದಿಲ್ಲ.

ಪ್ರಯಾಣವನ್ನು ಮಾಡುವುದು ಪ್ರಕೃತಿಯ ಸೌಂದರ್ಯವನ್ನು ಸವಿಯು ವುದು, ದೈವ ಶಕ್ತಿಗಳಲ್ಲಿ ನಂಬಿಕೆ ಇಡುವುದು, ತಾವೇ ಸ್ವಂತವಾಗಿ ದುಡಿದು ಯಾರ ಬಳಿಯೂ ಸಹಾಯವನ್ನು ಬೇಡದಂತೆ ಬದುಕಬೇಕು ಎನ್ನುವ ಛಲವನ್ನು ಇವರು ಹೊಂದಿರುತ್ತಾರೆ. ಸಾಮಾನ್ಯವಾಗಿ ಇವರ ಸಂಸಾರಿಕ ಜೀವನ 25ನೇ ವಯಸ್ಸಿನಿಂದ 40ನೇ ವಯಸ್ಸಿನವರೆಗೂ ಕೂಡ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ. ಆದರೂ ಕೂಡ ಇವರ ಸಂಸಾರಿಕ ಜೀವನ ಸುಖವಾಗಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *