ರಾಜ್ಯದ ಸಂಸದರ ಜಾತಿ ಎಷ್ಟು ಓದಿದ್ದಾರೆ ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ ? - Karnataka's Best News Portal

ಹೆಚ್ಚು ದಲಿತ ಸಂಸದರಿರೋ ಪಕ್ಷ ಯಾವುದು….?

ರಾಜ್ಯದ ಸಂಸದರ ಬಗ್ಗೆ ನಿಮಗೆಷ್ಟು ಗೊತ್ತು? ಯಾವ ಪಕ್ಷದ ಸಂಸದರು ಎಷ್ಟಿದ್ದಾರೆ? ಯಾವ ಜಾತಿಯ ಸಂಸದರು ಹೆಚ್ಚಾಗಿದ್ದಾರೆ? ರಾಜ್ಯದಲ್ಲಿ ರುವ ದಲಿತ ಸಂಸದರು ಎಷ್ಟು? ಹಾಗೆಯೇ ರಾಜ್ಯದ ಯಾವ ಭಾಗದಲ್ಲಿ ಯಾವ ಪಕ್ಷದ ಪ್ರಭಾವ ಜಾಸ್ತಿ ಇದೆ ? ಸಂಸದರ ಜಾತಿ ಶಿಕ್ಷಣ ಹಾಗೂ ಅವರಿಗೆ ಎಷ್ಟು ಆಸ್ತಿ ಇದೆ ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಪಿ ಸಿ ಗದ್ದಿಗೌಡರ್ ಒಂದು ಕಾಲದಲ್ಲಿ ಜನತಾದಳದಲ್ಲಿದ್ದಂತಹ ಇವರು ನಂತರದಲ್ಲಿ ಇವರು ಬಿಜೆಪಿ ಪಕ್ಷ ಸೇರಿದರು 2004 ರಿಂದ ಬಾಗಲ ಕೋಟೆ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಇವರು ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಜೊತೆಗೆ ಇವರು 2.68 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಪಿ ಸಿ ಮೋಹನ್ ಬಿಜೆಪಿ ನಾಯಕರಾಗಿರುವಂತಹ ಪಿಸಿ ಮೋಹನ್ ಅವರು ಎರಡು ಸಲ ಚಿಕ್ಕಪೇಟೆ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಇದಾದ ಬಳಿಕ 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಿಂತು ಗೆದ್ದಿದ್ದರು. ಓಬಿಸಿ ಸಮುದಾ ಯಕ್ಕೆ ಸೇರಿದ ಇವರು ಪಿಯುಸಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ ಜೊತೆಗೆ ಇವರು 21.47 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಸದಾನಂದ ಗೌಡ ಬಿಜೆಪಿ ನಾಯಕರದಂತಹ ಇವರು ಬೆಂಗಳೂರು ಉತ್ತರ ಪ್ರದೇಶದ ಸಂಸದರಾಗಿದ್ದಾರೆ. ಇದಕ್ಕೂ ಮುಂಚೆಯೇ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕೂಡ ಸಂಸದರಾಗಿ ಆಯ್ಕೆ ಯಾಗಿದ್ದರು. ಮೋದಿಯವರ ಮೊದಲ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿ ಅನುಭವ ಹೊಂದಿರುವಂತಹ ಇವರು ಕರ್ನಾಟಕದ ಮಾಜಿ ಸಿಎಂ ಕೂಡ ಹೌದು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರು ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇವರು 6.19 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಡಿಕೆ ಸುರೇಶ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಇವರು ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿ ಗುರುತಿಸಿ ಕೊಂಡು ಬಂದಿದ್ದಾರೆ. 2013ರಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದಿದ್ದರು. ಈಗಲೂ ಕೂಡ ಅದೇ ಕ್ಷೇತ್ರದ ಸಂಸದರಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರು.

ಪಿಯುಸಿ ಶಿಕ್ಷಣವನ್ನು ಪಡೆದಿದ್ದಾರೆ ಅಂದ ಹಾಗೆ ಇವರು 67.39 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ತೇಜಸ್ವಿ ಸೂರ್ಯ ಬಿಜೆಪಿ ನಾಯಕರಾಗಿರುವಂತಹ ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ. 2018ರಲ್ಲಿ ಕೇಂದ್ರ ಸಚಿವರಾಗಿದ್ದಂತಹ ಅನಂತಕುಮಾರ್ ಅವರು ವಿಧಿವಶರಾದರು ಹೀಗಾಗಿ 2019 ರಲ್ಲಿ ಅವರು ಸ್ಪರ್ಧಿಸುತ್ತಿದ್ದಂತಹ ಕ್ಷೇತ್ರ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಯಿತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *