ವಿಶ್ವದ ಏಕೈಕ ಪಾರದರ್ಶಕ ಶಿವಲಿಂಗ 5000 ವರ್ಷಗಳ ಹಿಂದೆ ಚಂದ್ರನ ಮಗ ಸ್ಥಾಪಿಸಿದ ಶಿವಲಿಂಗ.... » Karnataka's Best News Portal

ವಿಶ್ವದ ಏಕೈಕ ಪಾರದರ್ಶಕ ಶಿವಲಿಂಗ 5000 ವರ್ಷಗಳ ಹಿಂದೆ ಚಂದ್ರನ ಮಗ ಸ್ಥಾಪಿಸಿದ ಶಿವಲಿಂಗ….

ವಿಶ್ವದ ಏಕೈಕ ಪಾರದರ್ಶಕ ಶಿವಲಿಂಗ 5000 ವರ್ಷಗಳ ಹಿಂದೆ ಚಂದ್ರನ ಮಗ ಸ್ಥಾಪಿಸಿದ ಶಿವಲಿಂಗ…..

WhatsApp Group Join Now
Telegram Group Join Now

ಸಾಮಾನ್ಯವಾಗಿ ನಾವೆಲ್ಲರೂ ನೋಡಿರುವ ಹಾಗೆ ಶಿವಲಿಂಗವು ಕಪ್ಪು ಬಣ್ಣದಲ್ಲಿಯೇ ಇರುತ್ತದೆ. ಆದರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗವು ಪಾರದರ್ಶಕ ಶಿವಲಿಂಗ ವಾಗಿದೆ. ಈ ರೀತಿಯ ಪಾರದರ್ಶಕ ಶಿವಲಿಂಗವನ್ನು ಪ್ರಪಂಚದಲ್ಲಿಯೇ ಎಲ್ಲೂ ನೋಡಿರಲು ಸಾಧ್ಯವಿಲ್ಲ. ಈ ಶಿವಲಿಂಗ ಸುಮಾರು 5,000 ವರ್ಷಗಳ ಹಳೆಯದ್ದು ಎಂದು ಉಲ್ಲೇಖಿಸಲಾಗಿದೆ.

ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ? ಇದರ ಸಂಪೂರ್ಣ ವಾದಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಪ್ರಪಂಚದ ಏಕೈಕ ಪುರಾತನವಾದ ಪಾರದರ್ಶಕ ಶಿವಲಿಂಗವನ್ನು ಚಂದ್ರ ದೇವನ ಪುತ್ರ ವರ್ಚಸ್ ಪ್ರತಿಷ್ಠಾಪನೆ ಮಾಡಿದ್ದಾರೆ. ಮಹಾಭಾರತದ ಸಮಯದಲ್ಲಿ ವರ್ಚಸ್ ತನ್ನ ಎರಡನೇ ಅವತಾರದಲ್ಲಿ ಮತ್ತೆ ಹುಟ್ಟಿ ಬರುತ್ತಾನೆ. ಅರ್ಜುನನ ಮಗನಾಗಿ ವರ್ಚಸ್ ಅಭಿಮನ್ಯುವಾಗಿ ಭೂಮಿಯ ಮೇಲೆ ಜನಿಸುತ್ತಾರೆ.

ಹೌದು ಚಂದ್ರದೇವನ ಮಗನ ಎರಡನೇ ಅವತಾರವೇ ಅಭಿಮನ್ಯು ಚಂದ್ರದೇವನ ಮಗನಾದ ವರ್ಚಸ್ ಸ್ಥಾಪನೆ ಮಾಡಿದಂತಹ ಈ ಶಿವಲಿಂಗದ ವಿಳಾಸ ನೋಡುವುದಾದರೆ ರಾಜಸ್ಥಾನ ರಾಜ್ಯದ ಸಿಕ್ಕರ್ ಎಂಬ ನಗರಕ್ಕೆ ನೀವು ಮೊದಲು ಹೋಗಬೇಕು. ಅಲ್ಲಿಂದ 50 ಕಿಲೋಮೀಟರ್ ಪ್ರಯಾಣ ಮಾಡಿದರೆ ಮಂಡವ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವುದು ಪಾರದರ್ಶಿ ಶಿವಲಿಂಗ ಮಂದಿರ.

ಈ ಒಂದು ದೇವಸ್ಥಾನವು ಪ್ರಪಂಚದಲ್ಲಿಯೇ ಅತಿ ಸುಂದರ ಹಾಗೂ ವಿಶೇಷವಾದಂತಹ ದೇವಸ್ಥಾನ ಎಂದೇ ಹೇಳಬಹುದು. ಈ ಶಿವಲಿಂಗದ ಒಳಗಡೆ ಕೈಲಾಸ ಪರ್ವತದ ಆಕಾರ ಕಂಡು ಬರುತ್ತದೆ ಎಂದು ಹೇಳು ತ್ತಾರೆ. ಈ ಪಾರದರ್ಶಕ ಶಿವಲಿಂಗ ಸುಮಾರು 5 ಕಿಲೋಮೀಟರ್ ನಷ್ಟು ಭೂಮಿಯ ಒಳಗಡೆ ಹೋಗಿದ್ದು. ಈ ವಿಚಾರದ ಬಗ್ಗೆ ಭಾರತದ ಆರ್ಕ್ಯಾಲಜಿ ಡಿಪಾರ್ಟ್ಮೆಂಟ್ ಸ್ಪಷ್ಟಪಡಿಸಿದೆ.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಈ ದೇವಸ್ಥಾನಕ್ಕೆ ಬರುವಂತಹ ಭಕ್ತರಿಗೆ ಈ ಪಾರದರ್ಶಕ ಶಿವಲಿಂಗ ವನ್ನು ಮುಟ್ಟಿ ನಮಸ್ಕರಿಸುವಂತಹ ಅವಕಾಶ ಇದೆ. ಸಾಮಾನ್ಯವಾಗಿ ಎಲ್ಲಾ ಶಿವಲಿಂಗಗಳಿಗೆ ಭೇಟಿ ಕೊಡುವ ಹಾಗೆ ಈ ಶಿವಲಿಂಗದ ದೇವಸ್ಥಾನಕ್ಕೆ ಭೇಟಿ ಕೊಡುವಂತಿಲ್ಲ. ವರ್ಚಸ್ ಸ್ಥಾಪಿಸಿದಂತಹ ಈ ಶಿವಲಿಂಗವು ಕೇವಲ ಮಾಂಗಲಿಕ ದೋಷವನ್ನು ನಿವಾರಣೆ ಮಾಡುವುದಕ್ಕೆ ಪ್ರತಿಷ್ಠಾಪಿಸಲಾಗಿದೆ. ಮಾಂಗಲಿಕ ದೋಷವಿರುವಂತಹ ಭಕ್ತರು ಈ ದೇವಸ್ಥಾನಕ್ಕೆ ಬಂದು 101 ಪ್ರದಕ್ಷಿಣೆ ಹಾಕಿ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸಿದರೆ.

ಮಾಂಗಲಿಕ ದೋಷ ನಿವಾರಣೆಯಾಗುತ್ತದೆ. ಮಾಂಗಲಿಕ ದೋಷ ಇರುವವರಿಗೆ ಈ ಪಾರದರ್ಶಕ ಶಿವಲಿಂಗವೇ ಪರಿಹಾರ. ಈ ಶಿವಲಿಂಗ ವನ್ನು ದರ್ಶನ ಮಾಡಲಿಲ್ಲ ಎಂದರೆ ನಿಮ್ಮ ಮಾಂಗಲಿಕ ದೋಷಕ್ಕೆ ಯಾವುದೇ ಪರಿಹಾರ ಇಲ್ಲ. ಎಲ್ಲ ದೋಷಗಳನ್ನು ನಿವಾರಣೆ ಮಾಡುವ ಶಕ್ತಿ ಇದ್ದದ್ದು ಕೇವಲ ಚಂದ್ರನ ಮಗನಿಗೆ ಮಾತ್ರ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">