ಸುಮಲತಾ ಓದಿದ್ದು 10ನೇ ಕ್ಲಾಸ್, ಆದ್ರೂ ಬರುತ್ತೆ ಐದು ಭಾಷೆ. ಬಿಜೆಪಿಗೆ ಜೈ ಎಂದ ರೆಬೆಲ್ ಸಂಸದೆ..ಆಂಧ್ರ ನಾಯ್ಡು.. - Karnataka's Best News Portal

ಸುಮಲತಾ ಓದಿದ್ದು 10ನೇ ಕ್ಲಾಸ್, ಆದ್ರೂ ಬರುತ್ತೆ ಐದು ಭಾಷೆ…!!

ಸುಮಲತಾ ಅವರು 1963 ಆಗಸ್ಟ್ 27ರಂದು ಚೆನ್ನೈನಲ್ಲಿ ಹುಟ್ಟಿದರು. ಇವರ ತಂದೆ ತಾಯಿ ಮತ್ತು ಕುಟುಂಬ ಮೂಲದವರೆಲ್ಲರೂ ಕೂಡ ಆಂಧ್ರಪ್ರದೇಶದ ಮೂಲದವರಾಗಿದ್ದರು. ಹೀಗಾಗಿ ಸುಮಲತಾ ಅವರು ತಮಿಳುನಾಡಿನಲ್ಲಿ ಹುಟ್ಟಿದರು ಸಹ ಆಂಧ್ರದ ಗುಂಟೂರಿನಲ್ಲಿ ಬೆಳೆದರು. ಸ್ವಲ್ಪ ದಿನಗಳವರೆಗೆ ಮುಂಬೈನಲ್ಲಿಯೂ ಕೂಡ ಇರಬೇಕಾಗಿತ್ತು. ಸೇಂಟ್ ಜೋಸೆಫ್ ಕಾನ್ವೆಂಟ್ ಸ್ಕೂಲ್ ನಲ್ಲಿ ಆರಂಭಿಕ ಶಿಕ್ಷಣ ಪಡೆದ ಸುಮಲತಾ.

ತಮ್ಮ 15ನೇ ವಯಸ್ಸಿನಲ್ಲಿ ಅಂದರೆ 1979ರಲ್ಲಿ ಆಂಧ್ರಪ್ರದೇಶದ ಬ್ಯೂಟಿ ಕಾಂಟೆಸ್ಟ್ ನಲ್ಲಿ ಭಾಗಿಯಾದರು. ಅದರಲ್ಲಿ ವಿನ್ ಕೂಡ ಆದರೂ. ಇದಾದ ಮೇಲೆ ಮ್ಯಾಗ್ಝಿನ್ ಗಳಲ್ಲಿ ಇವರ ಫೋಟೋ ಹರಿದಾಡುವುದಕ್ಕೆ ಶುರುವಾಯಿತು. ತಮ್ಮ 16ನೇ ವಯಸ್ಸಿನಲ್ಲಿಯೇ ಸಿನಿಲೋಕಕ್ಕೆ ಪಾದರ್ಪಣೆಯನ್ನು ಮಾಡಿದರು. ಮ್ಯಾಗ್ಝಿನ್ ಗಳಲ್ಲಿ ಸುಮಲತಾ ಅವರ ಫೋಟೋಗಳನ್ನು ನೋಡಿದಂತಹ ಪ್ರೊಡ್ಯೂಸರ್ ರಮಾನಾಯ್ಡು.

ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶವನ್ನು ನೀಡಿದರು. ಅದರಂತೆ 1001 ರೂಪಾಯಿಗೆ ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡರು ಸುಮಲತಾ. 1979ರಲ್ಲಿ ತಮಿಳಿನಲ್ಲಿ ತಿಸೈ ಮಾರಿಯ ಪರವೈಗಳ್ ಸಿನಿಮಾ ಮಾಡುವುದರ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟರು. ಅದೇ ರೀತಿ ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ರವಿಚಂದ್ರ ಎನ್ನುವ ಸಿನಿಮಾ ಮಾಡುವುದರ ಮೂಲಕ ನಮ್ಮ ಸ್ಯಾಂಡಲ್ ವುಡ್ ಗೂ ಕೂಡ ಎಂಟ್ರಿ ಕೊಟ್ಟರು.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಹೀಗೆ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 1987ರಲ್ಲಿ ಶೃತಿ ಲಯಲು ಎಂಬ ಸಿನಿಮಾದ ನಟನಿಗಾಗಿ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು. ಇವರಿಗೆ 6 ಭಾಷೆ ಮಾತನಾಡಲು ಬರುತ್ತೆ ಎನ್ನುವುದು ಬಹಳ ವಿಶೇಷ. ಆಹುತಿ ಸಿನಿಮಾದ ಶೂಟಿಂಗ್ ನಲ್ಲಿ ಅಂಬಿಯನ್ನು ಭೇಟಿಯಾಗುತ್ತಾರೆ.

ಅದು 1984 ಆಹುತಿ ಸಿನಿಮಾದ ಶೂಟಿಂಗ್ ಸಮಯ, ಈ ಸಿನಿಮಾ ದಲ್ಲಿ ಅಂಬಿಗೆ ಜೋಡಿಯಾಗಿ ಸುಮಲತಾ ಅವರು ನಟಿಸುತ್ತಿದ್ದರು. ಸುಮಲತಾ ಅವರು ಸಿನಿಮಾ ಇಂಡಸ್ಟ್ರಿಗೆ ಹೊಸಬರಾಗಿದ್ದರು. ಆದರೆ ಆಗಲೇ ಅಂಬರೀಶ್ ದೊಡ್ಡ ಸ್ಟಾರ್ ಆಗಿದ್ದರು. ತಮ್ಮ ರೆಬೆಲ್ ನಡವಳಿಕೆ ಯಿಂದ ರೆಬೆಲ್ ಸ್ಟಾರ್ ಎಂದೇ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡರು. ಅಲ್ಲದೆ ಅಂಬರೀಶ್ ಒರಟ ಮುಂಗೋಪಿ ಎಂದೆಲ್ಲಾ ಗಾಸಿಪ್ ಹರಿದಾಡುತ್ತಿತ್ತು.

ಹೀಗಾಗಿ ಸುಮಲತಾ ಅವರು ಹೇಗಪ್ಪಾ ಇವರೊಂದಿಗೆ ನಟನೆ ಮಾಡುವುದು ಎಂದು ಟೆನ್ಶನ್ ಕೂಡ ಮಾಡಿಕೊಂಡಿದ್ದರು. ಆದರೆ ಕೆಲವೇ ಕೆಲವು ದಿನಗಳಲ್ಲಿ ಅಂಬಿ ಮನಸ್ಸು ಏನು ಎಂದೂ ಸುಮಲತಾ ಅರ್ಥ ಮಾಡಿಕೊಂಡರು. ಅಂಬಿ ಅವರು ಎಲ್ಲರೊಟ್ಟಿಗೆ ತುಂಬಾ ಪ್ರೀತಿ ವಿಶ್ವಾಸದಿಂದ ಮಾತನಾಡುತ್ತಾ ತುಂಬಾ ಫ್ರೆಂಡ್ಲಿಯಾಗಿ ಇರುತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *