ಅಣ್ಣನ ಆಸ್ತಿಯಲ್ಲಿ ತಮ್ಮನ ಪಾಲು! ತಮ್ಮನ ಆಸ್ತಿಯಲ್ಲಿ ಅಣ್ಣನಿಗೆ ಪಾಲು ಇರುತ್ತಾ? ಅಣ್ಣನ ಹೊಲದಲ್ಲಿ ತಮ್ಮನಿಗೆ ಹಕ್ಕು.. » Karnataka's Best News Portal

ಅಣ್ಣನ ಆಸ್ತಿಯಲ್ಲಿ ತಮ್ಮನ ಪಾಲು! ತಮ್ಮನ ಆಸ್ತಿಯಲ್ಲಿ ಅಣ್ಣನಿಗೆ ಪಾಲು ಇರುತ್ತಾ? ಅಣ್ಣನ ಹೊಲದಲ್ಲಿ ತಮ್ಮನಿಗೆ ಹಕ್ಕು..

ಅಣ್ಣನ ಆಸ್ತಿಯಲ್ಲಿ ತಮ್ಮನ ಪಾಲು! ತಮ್ಮನ ಆಸ್ತಿಯಲ್ಲಿ ಅಣ್ಣನಿಗೆ ಪಾಲು ಇರುತ್ತಾ? ಅಣ್ಣನ ಹೊಲದಲ್ಲಿ ತಮ್ಮನಿಗೆ ಹಕ್ಕು….!!

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದರಾ ಬೆಲೆ ಹೆಚ್ಚಾಗುತ್ತಿರುವುದರಿಂದ ಕುಟುಂಬದಲ್ಲಿ ಬರುವಂತಹ ಮನಸ್ತಾಪಗಳು ಕೂಡ ಹೆಚ್ಚಾಗುತ್ತಿದೆ ಎಂದೇ ಹೇಳಬಹುದು. ಎಲ್ಲರಿಗೂ ಕೂಡ ಹಣದ ಅವಶ್ಯಕತೆ ಇರುವುದ ರಿಂದ ಯಾವುದೆಲ್ಲ ರೂಪದಲ್ಲಿ ಹಣ ಬರುತ್ತದೆಯೋ ಅವೆಲ್ಲದರ ಲ್ಲಿಯೂ ಕೂಡ ಪ್ರತಿಯೊಬ್ಬರೂ ಹಣವನ್ನು ಪಡೆದುಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಅಣ್ಣನಾದವನು ತನ್ನ ಆಸ್ತಿಯಲ್ಲಿ ತಮ್ಮನಿಗೆ ಪಾಲನ್ನು ಕೊಡ ಬೇಕೇ ಹಾಗೆನಾದರೂ ತಮ್ಮನಿಗೆ ಪಾಲನ್ನು ಕೊಡುತ್ತಿದ್ದರೆ ಆ ಆಸ್ತಿಯನ್ನು ಅವನು ತನ್ನ ಸ್ವಂತ ಹಣದಿಂದ ಖರೀದಿಸಿದ್ದ ಅಥವಾ ಪಿತ್ರಾರ್ಜಿತ ಆಸ್ತಿಯೇ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಅದೇ ರೀತಿಯಾಗಿ. ಅಣ್ಣನು ತನ್ನ ಸ್ವಂತ ದುಡಿಮೆಯಿಂದ ಖರೀದಿಸಿದಂತಹ ಆಸ್ತಿಯಾಗಿದ್ದರೆ.

ಆಸ್ತಿಯಲ್ಲಿ ಅಣ್ಣನು ತಮ್ಮನಿಗೆ ಯಾವುದೇ ರೀತಿಯಲ್ಲೂ ಪಾಲನ್ನು ಕೊಡಲು ಬರುವುದಿಲ್ಲ. ಬದಲಿಗೆ ಹಾಗೇನಾದರೂ ಅವನು ಅಕಾಲಿಕ ವಾಗಿ ಮರಣವನ್ನು ಹೊಂದಿದರೆ ಅವನ ಹೆಂಡತಿ ಮಕ್ಕಳಿಗೆ ಮೊದಲ ಆದ್ಯತೆ ಅಂದರೆ ಆಸ್ತಿ ಬರುತ್ತದೆ. ಹಾಗೇನಾದರೂ ಅವನು ಮದುವೆ ಯಾಗಿಲ್ಲ ಎಂದರೆ ಅವನ ಸಂಪೂರ್ಣ ಆಸ್ತಿ ಅವನ ತಾಯಿಗೆ ಹೋಗುತ್ತದೆ. ಅದೇ ರೀತಿಯಾಗಿ ತಮ್ಮನಾದವನು ಹಳ್ಳಿಯಲ್ಲಿಯೇ ಇದ್ದು ಅವರ ಒಟ್ಟು ಆಸ್ತಿಯನ್ನು ಅಂದರೆ ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿ.

See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ಎಲ್ಲವನ್ನು ಕೂಡ ಅವನೇ ನೋಡಿಕೊಳ್ಳುತ್ತಿದ್ದರೆ ಹಾಗೂ ಅಲ್ಲಿ ಬರುವಂತಹ ಆದಾಯದಿಂದ ಅವನು ಮತ್ತಷ್ಟು ಆಸ್ತಿಯನ್ನು ಖರೀದಿ ಮಾಡಿದರೆ ಆ ಆಸ್ತಿಯಲ್ಲಿ ಅಣ್ಣನಿಗೂ ಕೂಡ ತಮ್ಮನಾದವನು ಪಾಲನ್ನು ಕೊಡಲು ಬರುತ್ತದೆ. ಆದ್ದರಿಂದ ಈ ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾ ದಂತಹ ವಿಷಯ ಏನು ಎಂದರೆ ಮೊದಲೇ ಹೇಳಿದಂತೆ ಅಣ್ಣನಾದವನು ತಾನು ಸ್ವಂತವಾಗಿ ಹಣವನ್ನು ಸಂಪಾದನೆ ಮಾಡಿ.

ಅವನು ಎಷ್ಟೇ ಆಸ್ತಿಯನ್ನು ಮಾಡಿದರು ಅದು ತಮ್ಮನಿಗೆ ಬರುವುದಿಲ್ಲ ಬದಲಿಗೆ ಅವನೇನಾದರೂ ಪಿತ್ರಾರ್ಜಿತ ಆಸ್ತಿ ಒಟ್ಟು ಆಸ್ತಿಯಲ್ಲಿ ಹಣ ವನ್ನು ಪಡೆದು ಆಸ್ತಿಯನ್ನು ಮಾಡಿದ್ದರೆ ಹಾಗೂ ಅದಕ್ಕೆ ಅಗತ್ಯವಾದ ದಾಖಲಾತಿಗಳು ಇದ್ದರೆ ಅವನ ಆಸ್ತಿಯಲ್ಲಿ ತಮ್ಮನಿಗೆ ಭಾಗ ಕೊಡಲೇಬೇಕಾಗುತ್ತದೆ. ಹಾಗೇನಾದರೂ ಯಾವುದೇ ದಾಖಲಾತಿಗಳು ಇಲ್ಲ ಎಂದರೆ ಅದರಲ್ಲಿ ತಮ್ಮನಿಗೆ ಯಾವುದೇ ಪಾಲು ಸಿಗುವುದಿಲ್ಲ.

ಹಾಗೂ ತಮ್ಮನು ಒಟ್ಟು ಆಸ್ತಿಯಲ್ಲಿ ಮಾಡಿದಂತಹ ಎಲ್ಲಾ ಆಸ್ತಿಗಳು ಕೂಡ ತನ್ನ ಅಣ್ಣನಿಗೆ ಸೇರಲೇಬೇಕು ಏಕೆ ಎಂದರೆ ಪಿತ್ರಾರ್ಜಿತ ಆಸ್ತಿ ಹಣದಿಂದ ಎಷ್ಟೇ ಆಸ್ತಿಯನ್ನು ಸಂಪಾದನೆ ಮಾಡಿದರು ಅದು ಎಲ್ಲರಿಗೂ ಕೂಡ ಹಕ್ಕು ಬರುತ್ತದೆ. ಆದ್ದರಿಂದ ತಮ್ಮನಾದವನು ಆ ಆಸ್ತಿಯಲ್ಲಿ ಅಣ್ಣನಿಗೆ ಪಾಲನ್ನು ಕೊಡಲು ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">