ಕೇವಲ ಐದು ನಿಮಿಷದಲ್ಲಿ ಕಬ್ಬಿಲ್ಲದೆ ಕಬ್ಬಿನ ರಸ ಸುಲಭದಲ್ಲಿ ಮನೆಯಲ್ಲಿ ಮಾಡುವ ವಿಧಾನ

ಕೇವಲ ಐದು ನಿಮಿಷದಲ್ಲಿ ಕಬ್ಬಿಲ್ಲದೆ ಕಬ್ಬಿನ ರಸ ಸುಲಭದಲ್ಲಿ ಮನೆಯಲ್ಲಿ ಮಾಡುವ ವಿಧಾನ…..||

WhatsApp Group Join Now
Telegram Group Join Now

ಈ ಬೇಸಿಗೆ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ತಂಪು ಪಾನೀಯ ಗಳನ್ನು ಹಾಗೆಯೇ ತಣ್ಣಗಿರುವಂತಹ ಕೆಲವೊಂದಷ್ಟು ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ ಈ ಬೇಸಿಗೆ ಸಮಯದಲ್ಲಿ ವಾತಾವರಣವೂ ಉಷ್ಣಾಂಶದಿಂದ ಕೂಡಿರುತ್ತದೆ ಹಾಗಾಗಿ ಎಲ್ಲರೂ ಕೂಡ ತಣ್ಣಗಿರುವಂತಹ ಪದಾರ್ಥಗಳನ್ನು ತಿನ್ನುವುದಕ್ಕೆ ಇಷ್ಟಪಡುತ್ತಾರೆ.

ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಕೂಡ ಕಲ್ಲಂಗಡಿ ಹಣ್ಣು ದ್ರಾಕ್ಷಿ ಹಣ್ಣು ಹೀಗೆ ಕೆಲವೊಂದಷ್ಟು ಹಣ್ಣುಗಳು ನೆನಪಿಗೆ ಬರಬಹುದು. ಆದರೆ ಅವುಗಳನ್ನು ಕೂಡ ತಿನ್ನಬಹುದು ಅದರ ಜೊತೆ ಕಬ್ಬಿನ ಹಾಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರು ಕೂಡ ಕಬ್ಬಿನ ಜ್ಯೂಸ್ ಸೇವನೆ ಮಾಡುವುದರಲ್ಲಿ ಬಹಳ ಆಸಕ್ತಿಯನ್ನು ತೋರುತ್ತಾರೆ ಎಂದು ಹೇಳಬಹುದು. ಅಷ್ಟು ರುಚಿಕರವಾಗಿರುತ್ತದೆ ಈ ಕಬ್ಬಿನ ಜ್ಯೂಸ್.

ಹಾಗಾದರೆ ಈ ದಿನ ಕಬ್ಬು ಇಲ್ಲದೆಯೇ ಕಬ್ಬಿನ ಜ್ಯೂಸ್ ರೀತಿಯೇ ರುಚಿಯನ್ನು ಹೊಂದಿರುವಂತಹ ಈ ಒಂದು ಜ್ಯೂಸ್ ಅನ್ನು ಹೇಗೆ ತಯಾರಿಸುವುದು. ಇದಕ್ಕೆ ಬೇಕಾಗುವಂತಹ ಪದಾರ್ಥಗಳು ಯಾವುವು, ಎನ್ನುವುದರ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ. ಜೊತೆಗೆ ಇದನ್ನು ನೀವು ಸುಲಭವಾಗಿ ಕಡಿಮೆ ಸಮಯದಲ್ಲಿಯೇ ತಯಾರಿಸಬಹುದಾಗಿದ್ದು. ನಿಮ್ಮ ಮನೆಗೆ ಯಾರಾದರೂ ನೆಂಟರು ಬಂದರೆ ತಕ್ಷಣದಲ್ಲಿ ಇದನ್ನು ಮಾಡಿ ಕೊಡಬಹುದು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಹೌದು ಅಷ್ಟು ಸುಲಭವಾಗಿ ಕಡಿಮೆ ಸಮಯದಲ್ಲಿ ರುಚಿಕರವಾಗಿ ಈ ಒಂದು ಪದಾರ್ಥವನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಬಹುದು ಹಾಗಾದರೆ ಇದನ್ನ ಹೇಗೆ ಮಾಡುವುದು ಎಂದು ನೋಡೋಣ. ಇದಕ್ಕೆ ಬೇಕಾಗುವ ಪದಾರ್ಥಗಳು
100 ಗ್ರಾಂ ಬೆಲ್ಲ
5 ರಿಂದ 10 ದಳ ಪುದಿನಾ ಸೊಪ್ಪು
ಒಂದು ಇಂಚು ಶುಂಠಿ
ಒಂದು ಚಮಚ ನಿಂಬೆ ಹಣ್ಣಿನ ರಸ
ಕಾಲು ಚಮಚ ಬ್ಲಾಕ್ ಸಾಲ್ಟ್

ಮೇಲೆ ಹೇಳಿದ ಇಷ್ಟು ಪದಾರ್ಥವನ್ನು ಮಿಕ್ಸಿ ಜಾರಿಗೆ ಹಾಕಿ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಇದನ್ನು ಒಂದು ಪಾತ್ರೆಯಲ್ಲಿ ಹಾಕಿ ನಿಮಗೆ ಎಷ್ಟು ಪ್ರಮಾಣದಲ್ಲಿ ಜ್ಯೂಸ್ ಬೇಕೋ ಅಷ್ಟು ನೀರನ್ನು ಹಾಕಿ ಸಿಹಿಯನ್ನು ಸೇರಿಸಿ ಇದಕ್ಕೆ ಐಸ್ ಕ್ಯೂಬ್ ಗಳನ್ನು ಹಾಕಿ ಚೆನ್ನಾಗಿ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಬೇಕು.

ನಂತರ ಇದನ್ನು ಒಂದು ಪಾತ್ರೆಗೆ ಶೋಧಿಸಿಕೊಂಡರೆ ನಿಮಗೆ ಕೊಬ್ಬು ಇಲ್ಲದೆ ಕಬ್ಬಿನ ಜ್ಯೂಸ್ ರುಚಿಯನ್ನೇ ಹೊಂದಿರುವಂತಹ ಪಾನಿಯ ಸಿದ್ಧವಾಗುತ್ತದೆ. ಇದನ್ನು ಬೇಸಿಗೆ ಸಮಯದಲ್ಲಿ ಸೇವನೆ ಮಾಡುವುದ ರಿಂದ ದೇಹದಲ್ಲಿರುವಂತಹ ಉಷ್ಣಾಂಶವು ಕಡಿಮೆಯಾಗುತ್ತದೆ ಜೊತೆಗೆ ಇದರಿಂದ ಉತ್ತಮವಾದಂತಹ ಆರೋಗ್ಯವನ್ನು ಕೂಡ ಪಡೆದು ಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">