ಧರ್ಮಸ್ಥಳಕ್ಕೆ ಶಿವಲಿಂಗ ಬಂದಿದ್ದಾದರೂ ಹೇಗೆ? ಇಲ್ಲಿದೆ ಅಸಲಿ ಕಥೆ.?ಈ ವಿಡಿಯೋ ನೋಡಿ.

ಧರ್ಮಸ್ಥಳಕ್ಕೆ ಶಿವಲಿಂಗ ಬಂದಿದ್ದಾದರೂ ಹೇಗೆ? ಇಲ್ಲಿದೆ ಅಸಲಿ ಕಥೆ.?

WhatsApp Group Join Now
Telegram Group Join Now

ಧರ್ಮಸ್ಥಳ ದೇಗುಲವನ್ನು 800 ವರ್ಷಗಳ ಹಿಂದೆ ನಿರ್ಮಾಣ ಮಾಡ ಲಾಗಿತ್ತು. ಈ ಪವಿತ್ರ ದೇಗುಲವು ನೇತ್ರಾವತಿ ನದಿಯ ದಂಡೆಯಲ್ಲಿದೆ ಇದು ಶಿವನ ಅಚ್ಚುಮೆಚ್ಚು ಸ್ಥಳಗಳಲ್ಲಿ ಒಂದು ಎಂದು ಭಕ್ತರು ನಂಬಿ ದ್ದಾರೆ. ಇದು ಶಿವ ದೇವಾಲಯವಾಗಿದ್ದು ಇಲ್ಲಿ ವೈಷ್ಣವ ಪುರೋಹಿತರು ದೈನಂದಿನ ಪೂಜೆಯನ್ನು ನೋಡಿಕೊಳ್ಳುತ್ತಾರೆ. ಮತ್ತೊಂದು ಕಡೆ ದೇವಾಲಯದ ಆಡಳಿತಗಾರರಾಗಿ ಕಾರ್ಯನಿರ್ವಹಿಸುತ್ತಿರುವವರು ಜೈನ ಧರ್ಮಕ್ಕೆ ಸಂಬಂಧಪಟ್ಟವರು.

ಧರ್ಮಸ್ಥಳದ ಮುಖ್ಯ ದೇವಸ್ಥಾನದಲ್ಲಿ ಶ್ರೀ ಮಂಜುನಾಥನನ್ನು ಶಿವನ ರೂಪದಲ್ಲಿ ಪೂಜಿಸಲಾಗುತ್ತದೆ. ಧರ್ಮಸ್ಥಳದ ಆರಾಧ್ಯ ದೈವವಾದ ಶ್ರೀ ಮಂಜುನಾಥ ಸ್ವಾಮಿಯ ಪಕ್ಕದಲ್ಲಿಯೇ ಜೈನ ತೀರ್ಥಂಕರವರನ್ನು ಕೂಡ ಪೂಜಿಸಲಾಗುತ್ತದೆ. ಅಣ್ಣಪ್ಪ ಎಂಬ ಹೆಸರಿನ ಮಹಾನ್ ಶಕ್ತಿ ಹೊಂದಿರುವಂತಹ ಸ್ಥಳೀಯ ವ್ಯಕ್ತಿಯಿಂದ ಶಿವಲಿಂಗವನ್ನು ಧರ್ಮಸ್ಥಳದಲ್ಲಿ ಕರೆತರಲಾಗಿತ್ತು ಎಂದು ಇತಿಹಾಸ ಸಾರುತ್ತದೆ.

ಕೆಲವು ವರ್ಷಗಳ ಹಿಂದೆ ಧರ್ಮಸ್ಥಳವನ್ನು ಕೂಡಮ ಎಂದು ಕರೆಯಲಾಗುತ್ತಿತ್ತು. ಖದರಿ ಮಂಜುನಾಥ ಸ್ವಾಮಿಯ ದೇವಸ್ಥಾನದಿಂದ ಶಿವಲಿಂಗವನ್ನು ತರಲು ಅಣ್ಣಪ್ಪ ಸ್ವಾಮಿಯನ್ನು ಬಳಸಲಾಗುತ್ತದೆ. ಹೆಗ್ಗಡೆಯವರ ಕೋರಿಕೆಯ ಆಧಾರದ ಮೇಲೆ ವಾದಿರಾಜ ಸ್ವಾಮಿ ಅವರು ತಮ್ಮ ಯೋಗ ಶಕ್ತಿಗಳ ಮೂಲಕ ಶಿವಲಿಂಗವನ್ನು ಇಲ್ಲಿ ಪವಿತ್ರ ಗೊಳಿಸಿದ್ದಾರೆ. ಜೊತೆಗೆ ಆ ಸ್ಥಳಕ್ಕೆ ಧರ್ಮಸ್ಥಳ ಎಂದು ನಾಮಕರಣ ವನ್ನು ಕೂಡ ಮಾಡಿದ್ದಾರೆ.

ಧರ್ಮಸ್ಥಳವನ್ನು ದರ್ಶನ ಮಾಡುವ ಮೊದಲು ಅಲ್ಲಿಯೇ ಹತ್ತಿರದ ಲ್ಲಿರುವ ನೇತ್ರಾವತಿ ನದಿಯಲ್ಲಿ ಮಿಂದು ಸ್ನಾನ ಮಾಡಬೇಕು. ಗಂಡಸರು ಕಡ್ಡಾಯವಾಗಿ ಶರ್ಟ್ ಮತ್ತು ಬಲಿಯನ್ ಗಳನ್ನು ತೆಗೆದು ದೇವಸ್ಥಾನ ವನ್ನು ಪ್ರವೇಶ ಮಾಡಬೇಕು. ಹಾಗೆಯೇ ಮಹಿಳೆಯರು ಪ್ಯಾಂಟ್ ಗಳನ್ನು ಧರಿಸುವ ಹಾಗಿಲ್ಲ, ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ದೇವಸ್ಥಾನ ಪ್ರವೇಶ ಮಾಡಬೇಕು. ಇಲ್ಲವಾದಲ್ಲಿ ಅವರಿಗೆ ದೇವಸ್ಥಾನ ಪ್ರವೇಶ ಮಾಡಲು ಅನುಮತಿ ಇಲ್ಲ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಇಂದು ಧರ್ಮಸ್ಥಳವು ಪ್ರಪಂಚದ ಅತಿ ಹೆಚ್ಚು ಶಿವ ಭಕ್ತರು ಭೇಟಿ ನೀಡುವಂತಹ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರತಿನಿತ್ಯ ಸುಮಾರು ಹತ್ತು ಸಾವಿರದಿಂದ ಐವತ್ತು ಸಾವಿರದಷ್ಟು ಜನರು ಭೇಟಿ ನೀಡುತ್ತಾರೆ. ಲಕ್ಷ ದ್ವೀಪ ಹಾಗೂ ಇತರೆ ದಿನಗಳಂದು ಒಂದು ಲಕ್ಷದಷ್ಟು ಜನ ಇಲ್ಲಿಗೆ ಭೇಟಿ ಕೊಡುತ್ತಾರೆ. ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದ ನಂತರ ಅಲ್ಲಿಯೇ ಹತ್ತಿರದಲ್ಲಿರುವ ಅಣ್ಣಪ್ಪ ಬೆಟ್ಟಕ್ಕೆ ಭೇಟಿ ಕೊಡಲೇಬೇಕು.

ಏಕೆಂದರೆ ಇಲ್ಲಿಯ ಶಿವಲಿಂಗವನ್ನು ಸ್ಥಾಪಿಸಿದಂತಹ ಆ ಮಹಾನ್ ವ್ಯಕ್ತಿಯೇ ಅಣ್ಣಪ್ಪ ದೈವ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗಾಗಿ ಬೃಹತ್ ಅಡುಗೆ ಕೋಣೆ ಇದೆ, ಊಟದ ಕೋಣೆಯನ್ನು ಸಹ ನಿರ್ಮಿಸಲಾಗಿದೆ. ಇಲ್ಲಿ ಪ್ರತಿದಿನ ಅನ್ನದಾನ ನಡೆಯುತ್ತದೆ. ಇಲ್ಲಿಗೆ ಬರುವ ಭಕ್ತರು ಸಂತೃಪ್ತಿಯಾಗುವಷ್ಟು ಭೋಜನವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">