ಈಗಿನ ಯುವ ಜೋಡಿಗಳಿಗೆ ಮದುವೆ ಆಗಿ ಐದು ವರ್ಷ ಆದರೂ ಮಕ್ಕಳೇ ಆಗಲ್ಲ ಯಾಕೆ.......?? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈಗಿನ ಯುವ ಜೋಡಿಗಳಿಗೆ ಮದುವೆ ಆಗಿ ಐದು ವರ್ಷ ಆದರೂ ಮಕ್ಕಳೇ ಆಗಲ್ಲ ಯಾಕೆ…….??

ಇವರು ಹರಿಯಾಣದ ಜೋಡಿ ಆದಂತಹ ಸುನಿತ ಅಗರ್ವಾಲ್ ಹಾಗೂ ರಾಕೇಶ್ ಅಗರ್ವಾಲ್ ಇವರಿಗೆ ಕಳೆದ 10 ವರ್ಷಗಳಿಂದಲೂ ಕೂಡ ಮಕ್ಕಳಾಗಿರಲಿಲ್ಲ. ಈ ಒಂದು ವಿಷಯದಲ್ಲಿ ಇವರು ಪ್ರತಿಸಲವೂ ಪ್ರಯತ್ನಗಳಲ್ಲಿ ಸೋಲನ್ನು ಅನುಭವಿಸುತ್ತಿದ್ದರು. ಇವರು ಅನೇಕ ಸಲ IVF ವಿಧಾನವನ್ನು ಕೂಡ ಅನುಸರಿಸಿದ್ದರು.

ಆದರೂ ಕೂಡ ಇವರಿಗೆ ಇದರಲ್ಲಿ ಫಲಿತಾಂಶ ಸಿಗಲಿಲ್ಲ. ಇವರ ಕುಟುಂಬದಲ್ಲಿ ಈ ಒಂದು ವಿಷಯವಾಗಿ ಸುನಿತಾಳನ್ನು ದೂರುತ್ತಾ ಇವಳು ಮಕ್ಕಳನ್ನು ಹೇರಲಾರದ ಬಂಜೆ ಎಂದು ಹೇಳಿ ಅವಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ವರ್ಷಾನುಗಟ್ಟಲೆ ಹಿಂಸೆಯನ್ನು ಕೊಡಲಾಯಿತು. ಆದರೆ 10 ವರ್ಷಗಳ ಬಳಿಕ ಗೊತ್ತಾದಂತಹ ಸತ್ಯವೇ ಬೇರೆ ಇಲ್ಲಿ ಮಕ್ಕಳಾಗದೆ ಇರುವುದಕ್ಕೆ ದೋಷ ಇದ್ದದ್ದು ಸುನೀತಾಗೆ ಅಲ್ಲ ಬದಲಿಗೆ ರಾಕೇಶ್ ಅಗರ್ವಾಲ್ ಗೆ.

ಕೊನೆಗೂ ಈ ಒಂದು ವಿಷಯ ತಿಳಿದಂತಹ ರಾಕೇಶ್ ಅಪಮಾನವನ್ನು ಸಹಿಸಲಾರದೆ ಕೆಲವೇ ಕೆಲವು ದಿನಗಳಲ್ಲಿ ಆತ್ಮಹತ್ಯೆಗೆ ಶರಣಾದ. ಹೌದು ಇಂತಹ ವಿಷಯಗಳು ಭಾರತದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಲೇ ಬರುತ್ತಿದೆ. ಡಬಲ್ ಸಾಲರಿ ಬಟ್ ನೋ ಚೈಲ್ಡ್ ಎಂಬ ಪರಂಪರೆ ನಮ್ಮಲ್ಲಿ ಪ್ರಾರಂಭವಾಗಿ ಬಹಳ ಕಾಲಗಳೆ ಆಗಿದೆ. ಇವತ್ತು ಎಲ್ಲಾ ಕಡೆಯಲ್ಲಿಯೂ IVF ಕೇಂದ್ರಗಳು ಹೆಚ್ಚಾಗಿ ಸ್ಥಾಪನೆಗೊಳ್ಳುತ್ತಿದೆ.

ಇದಕ್ಕೆ ಕಾರಣ ಪುರುಷರಲ್ಲಿಯೂ ಕೂಡ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಮತ್ತು ಇದು ಆತಂಕ ಪಡುವಂತಹ ಸಂಗತಿಯೂ ಕೂಡ ಹೌದು. ಇತ್ತೀಚಿನ ವರದಿಯೊಂದರ ಪ್ರಕಾರ ಭಾರತದಲ್ಲಿ ಸದ್ಯ ಎರಡು ಕೋಟಿಗೂ ಹೆಚ್ಚು ಜನ ದಂಪತಿಗಳಿಗೆ ಬಂಜೆತನದ ಸಮಸ್ಯೆ ಇದೆ. ಭಾರತದ ಒಟ್ಟಾರೆ ಬಂಜೆತನದ ಕೇಸ್ ಗಳಲ್ಲಿ ಶೇಕಡ 50 ಕ್ಕಿಂತ ಹೆಚ್ಚಿನ ಕೇಸ್ ಗಳಲ್ಲಿ ಪುರುಷರಿಗೆ

ಈ ಒಂದು ಸಮಸ್ಯೆ ಇರುವುದು ಕಂಡು ಬಂದಿದೆ. ನಮ್ಮಲ್ಲಿ ಸಾಮಾನ್ಯವಾಗಿ ಮದುವೆಯಾದಂತಹ ನವದಂಪತಿಗಳಿಗೆ ಹೆಚ್ಚು ಕಾಲದವರೆಗೆ ಮಕ್ಕಳಾಗದೆ ಹೋದಲ್ಲಿ ಅವರ ಪೂರ್ವ ಪರವನ್ನು ಯೋಚರಿಸದೆ ಹೆಣ್ಣನ್ನೇ ಈ ಒಂದು ವಿಷಯವಾಗಿ ದೂರುವ ಆರೋಪ ಮಾಡುವಂತಹ ಪರಂಪರೆ ರೂಢಿಯಲ್ಲಿದೆ. ಆದರೆ ಈಗ ಮೆಡಿಕಲ್ ತಂತ್ರಜ್ಞಾನ ಮುಂದುವರೆದ ಕಾರಣ ಇಲ್ಲಿ ನಿಜವಾದ ಸಮಸ್ಯೆ ಯಾರಿಗೆ ಇರುವುದು ಎಂದು ಪತ್ತೆ ಹಚ್ಚಬಹುದು.

ಇತ್ತೀಚಿನ ಕೇಸ್ ಗಳಲ್ಲಿ ಪುರುಷರಲ್ಲಿ ಈ ಒಂದು ಸಮಸ್ಯೆ ಹೆಚ್ಚು ಎನ್ನುವ ಸಂಗತಿ ಗೊತ್ತಾಗಿದೆ. ವಿಶೇಷವಾಗಿ ಭಾರತದ ಮೆಟ್ರೋ ಪಾಲಿಟಿನ್ ಹಾಗೂ ಕಾಸ್ಫೋ ಪಾಲಿಟಿನ್ ಸಿಟಿಗಳಲ್ಲಿ ಇಂತಹ ಕೇಸ್ ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಉದಾಹರಣೆಗೆ ಬೆಂಗಾಳದ ಕೊಲ್ಕತ್ತಾದಲ್ಲಿ ಮದುವೆಯಾದವರ ಪೈಕಿ ಶೇಕಡ 86 ರಷ್ಟು ಪುರುಷರಲ್ಲಿ ಫರ್ಟಿಲಿಟಿ ಸಮಸ್ಯೆ ಉಂಟಾಗಿರುವುದು ಕಂಡು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *