ಶತ್ರುಗಳಿಂದ ಮುಕ್ತಿ ಪಡೆಯಲು ಹಿಡಿ ಅಕ್ಕಿ ಇಲ್ಲಿ ಹಾಕಿ ಶತ್ರು ನಿಮ್ಮ ಕಾಲ ಮೇಲೆ ಬೀಳುತ್ತಾರೆ…….||
ಹಿಂದೂ ಧರ್ಮದಲ್ಲಿ ಅಕ್ಷತೆ ಅಂದರೆ ಪೂಜೆಯಲ್ಲಿ ಬಳಸುವ ಅಕ್ಕಿ ಅದನ್ನು ಕುಂಕುಮದ ಜೊತೆ ತಿಲಕವಾಗಿ ಹಣೆಯ ಮೇಲೆ ಹಚ್ಚುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಪ್ರತಿದಿನ ಅಕ್ಷತೆಯನ್ನು ತಿಲಕವಾಗಿ ಹಚ್ಚಿಕೊಳ್ಳಿ. ತಾಮ್ರದ ಲೋಟದಲ್ಲಿ ಕುಂಕುಮದ ಜೊತೆ ಸ್ವಲ್ಪ ಅಕ್ಕಿಯನ್ನು ಹಾಕಿ.
ಮತ್ತು ಇದನ್ನು ಸೂರ್ಯ ದೇವರಿಗೆ ಅರ್ಗ್ಯ ವಾಗಿ ಉಪಯೋಗಿಸುವುದ ರಿಂದ ಅದೃಷ್ಟ ಒಲಿಯುತ್ತದೆ. ಇದರಿಂದ ನೀವು ಎಂದಿಗೂ ಕೂಡ ಹಣದ ಕೊರತೆ ಹೆದರಿಸುವುದಿಲ್ಲ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಭಗವಾನ್ ಶಿವನಿಗೆ ಅಕ್ಷತೆಯನ್ನು ಅರ್ಪಿಸಿ ನಂಬಿಕೆಗಳ ಪ್ರಕಾರ ಒಬ್ಬ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಮತ್ತು ದಣಿವರಿಯದೆ ಕೆಲಸ ಮಾಡಿದರು ಅವನು ತನ್ನ ಕಠಿಣ ಪರಿಶ್ರಮಕ್ಕೆ.
ಸಾಕಷ್ಟು ಫಲಿತಾಂಶವನ್ನು ಪಡೆಯದೆ ಇದ್ದರೆ ಅಂತಹ ವ್ಯಕ್ತಿ ಸೋಮ ವಾರ ಅರ್ಧ ಕೆಜಿ ಅಕ್ಕಿಯನ್ನು ತೆಗೆದುಕೊಂಡು ಶಿವನ ದೇವಾಲಯಕ್ಕೆ ಹೋಗಿ ಶಿವ ನಾಮವನ್ನು ಜಪಿಸುತ್ತಾ ಅರ್ಧಮುಷ್ಠಿಯಷ್ಟು ಅಕ್ಷತೆಯನ್ನು ಅರ್ಪಿಸಬೇಕು ಇದನ್ನು ಅರ್ಪಿಸಿದ ನಂತರ ಉಳಿದ ಅಕ್ಕಿಯನ್ನು ಬಡ ಅಥವಾ ನಿರ್ಗತಿಕ ವ್ಯಕ್ತಿಗಳಿಗೆ ದಾನ ಮಾಡಬೇಕು. ಸತತ ಐದು ಸೋಮವಾರಗಳ ತನಕ ಇದನ್ನು ಮಾಡಿದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕ್ರಮೇಣ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ.
ಹಾಗಾಗಿ ನೀವು ಕೂಡ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಪ್ರಯತ್ನಗಳನ್ನು ಪ್ರಯತ್ನಿಸಿ ನೋಡಿ. ನಿಮ್ಮ ಮದುವೆಗೆ ಸಮಸ್ಯೆ ಆಗುತ್ತಿದ್ದರೆ ಅಕ್ಕಿಯನ್ನು ಬಳಸಿ ಪರಿಹಾರವನ್ನು ಪಡೆಯುವುದು ಉತ್ತಮ. ಶುಕ್ಲ ಪಕ್ಷದ ನಾಲ್ಕನೇ ದಿನ ಬೆಳಗಿನ ಜಾವ ಬೆಳ್ಳಿಯ ಸಣ್ಣ ಬಟ್ಟಲಿನಲ್ಲಿ ಹಸುವಿನ ಹಾಲಿನ ಜೊತೆ ಸಕ್ಕರೆಯನ್ನು ಹಾಕಿ ಬೇಯಿಸಿದ ಅನ್ನವನ್ನು ಹಾಕಿ.
ದಾನ ಮಾಡುವುದರಿಂದ ಮದುವೆ ವಿಳಂಬಕ್ಕೆ ಪರಿಹಾರ ನೀಡುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ನೀವು ಸಿಹಿ ಗಂಜಿಯನ್ನು ಮಾಡಿ ಕಾಗೆಗಳಿಗೆ ಕೊಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ. ಅಲ್ಲದೆ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಶನಿಯ ಕಾಟದಿಂದಲೂ ಸಹ ಮುಕ್ತಿ ಸಿಗುತ್ತದೆ. ನೀವು ಆರಂಭಿಸಿದ ಕೆಲಸವೂ ಅರ್ಧದಲ್ಲಿ ಸ್ಥಗಿತಗೊಳ್ಳುತ್ತಿದ್ದರೆ ಕೆಲವೊಮ್ಮೆ ಪಿತೃ ದೋಷವು ಇದಕ್ಕೆ ಕಾರಣವಾಗಿರಬಹುದು.
ಇಂತಹ ಸಮಯದಲ್ಲಿ ಅಕ್ಕಿ ಪಾಯಸವನ್ನು ಮಾಡಿ ಮತ್ತು ಅಮಾವಾಸ್ಯೆಯ ದಿನದಂದು ರೊಟ್ಟಿಯೊಂದಿಗೆ ಪಾಯಸವನ್ನು ಕಾಗೆಗೆ ಆಹಾರವಾಗಿ ನೀಡಿ. ಪಿತೃಗಳಿಗೆ ಪಾಯಸ ಎಂದರೆ ತುಂಬಾ ಇಷ್ಟ ಹಾಗಾಗಿ ಇದನ್ನು ಮಾಡುವುದರಿಂದ ಪಿತೃಗಳಿಂದ ಆಶೀರ್ವಾದವನ್ನು ಪಡೆಯುತ್ತೀರಿ ಹಾಗೆಯೇ ನೀವು ಅಂದುಕೊಂಡ ಎಲ್ಲ ಕೆಲಸ ಕಾರ್ಯಗಳು ಸುಲಭವಾಗಿ ಈಡೇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.