ಶ್ರೀ ಚಕ್ರ ಇರೋ ದೇವಸ್ಥಾನಕ್ಕೆ ಹೋಗಿ ಬದುಕು ಬದಲಿಸೋ ದಿವ್ಯ ರಹಸ್ಯ ..ಈ ಕೆಲಸ ತಪ್ಪದೇ ಮಾಡಿ..

ಶ್ರೀಚಕ್ರ ಇರೋ ದೇವಸ್ಥಾನಕ್ಕೆ ಹೋಗಿ ಬದುಕೇ ಬದಲಾಗುತ್ತೆ! ಶಂಕರಾಚಾರ್ಯರ ದಿವ್ಯ ರಹಸ್ಯ…!!

WhatsApp Group Join Now
Telegram Group Join Now

ಶ್ರೀ ಚಕ್ರದಲ್ಲಿ ಎಷ್ಟು ವಿಧಗಳು ಇವೆ ಈ ಪ್ರಶ್ನೆಯನ್ನು ಕೇಳಿದರೆ ಬಹುತೇಕರ ಉತ್ತರ 2 ಪ್ರಕಾರ ಎಂದು ಹೇಳುತ್ತಾರೆ. ಮೊದಲನೆಯದು ಅಡ್ಡ ಅಡ್ಡವಾಗಿ ಇರುವಂತಹ ಶ್ರೀಚಕ್ರ ಎರಡನೆಯದು ತ್ರಿಕೋನಾಕಾರದಲ್ಲಿ ಮೇಲು ಪರ್ವತದ ರೀತಿಯಲ್ಲಿ ಇರುವಂತದ್ದು. ಆದರೆ ಈ ಎರಡು ಪ್ರಕಾರಗಳ ಹೊರತಾಗಿಯೂ ಇನ್ನು ಹಲವಾರು ರೀತಿಯ ಶ್ರೀ ಚಕ್ರಗಳು ಇದೆ.

ಒಂದೊಂದು ಶ್ರೀ ಚಕ್ರಕ್ಕೂ ಒಂದೊಂದು ರೀತಿಯ ಉಪಯೋಗವಿದೆ ಮತ್ತು ವಿಶೇಷತೆ ಇದೆ. ಇಷ್ಟಿದ್ದರೂ ಪ್ರಮುಖವಾಗಿ 4 ರೀತಿಯ ಶ್ರೀ ಚಕ್ರಗಳನ್ನು ಬಹಳ ಮಹತ್ವದ್ದು ಎಂದು ಗುರುತಿಸಲಾಗಿದೆ. ಒಂದು ಭೂಪ್ರಸ್ತಾರ, ಎರಡನೆಯದು ಈಗಾಗಲೇ ಹೇಳಿರುವ ಹಾಗೆ ಮೇರು ಪ್ರಸ್ತಾರ, ಮೂರನೆಯದಾಗಿ ಪದ್ಮ ಪ್ರಸ್ತಾರ, ಹಾಗೂ ನಾಲ್ಕನೆಯದಾಗಿ ಕೂರ್ಮ ಪ್ರಸ್ತಾರ.

ಇವೆಲ್ಲ ಎಲ್ಲಿವೆ ನಾವು ನೋಡಬಹುದು ಎಂದು ಕೇಳಿದರೆ ಹೌದು ಅಂತಹ ಒಂದು ಅದ್ಭುತವಾದಂತಹ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ಆದಿ ಶಂಕರಾಚಾರ್ಯರು. ಹಾಗಾದರೆ ಆದಿ ಶಂಕರಾಚಾರ್ಯರು ಎಲ್ಲೆಲ್ಲಿ ಈ ಒಂದು ಶ್ರೀ ಚಕ್ರವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ. ಎಷ್ಟೋ ದೇವಸ್ಥಾನಗಳಿಗೆ ಹೋದಾಗ ಅದರಲ್ಲೂ ದಕ್ಷಿಣ ಭಾರತದ ಕೆಲವೊಂದು ದೇವಸ್ಥಾನಗಳಿಗೆ ಹೋದಾಗ ಸಾಮಾನ್ಯವಾಗಿ ಒಂದು ಮಾತು ಕಿವಿಗೆ ಬೀಳುತ್ತದೆ.

ಇಲ್ಲಿ ಆದಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪಿಸಿದ್ದಾರೆ. ಅದಾದ ಮೇಲೆ ಶ್ರೀ ಕ್ಷೇತ್ರ ಅದ್ಭುತವಾಗಿ ಪ್ರಸಿದ್ಧಿ ಆಯಿತು ಎಂದು ಜನರು ಹೇಳುತ್ತಲೇ ಇರುತ್ತಾರೆ. ಅದರಲ್ಲೂ ಕೆಲವೊಂದು ದೇವಸ್ಥಾನಗಳಲ್ಲಿ ಎಲ್ಲಿ ಶ್ರೀಚಕ್ರ ಇದೆ ಎಂದು ಸಹ ಗೊತ್ತಾಗುವುದಿಲ್ಲ. ಉದಾಹರಣೆಗೆ ನೀವು ಶೃಂಗೇರಿಗೆ ಹೋದರೆ ಅಲ್ಲಿ ಶ್ರೀ ಚಕ್ರ ನಿಮಗೆ ನೇರವಾಗಿ ಕಾಣಿಸುವುದಿಲ್ಲ.

See also  ದರ್ಶನ್ ಮಾಡಿದ್ದು ತಪ್ಪಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಹುಡುಗಿ ವಿಡಿಯೋ ವೈರಲ್...

ಕಾರಣ ಶೃಂಗೇರಿಯಲ್ಲಿ ಆಚಾರ್ಯರು ಶ್ರೀ ಚಕ್ರವನ್ನು ಸ್ಥಾಪಿಸಿ ಅದರ ಮೇಲೆ ಶಾರದಾ ಮಾತೆಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇದೇ ರೀತಿ ಹಲವಾರು ಕ್ಷೇತ್ರಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಶ್ರೀ ಚಕ್ರವನ್ನು ನೋಡಲು ಆಗುವುದಿಲ್ಲ. ಹಾಗಾದರೆ ನಮ್ಮ ಸುತ್ತಮುತ್ತ ಇರುವಂತಹ ಯಾವ ದೇವಸ್ಥಾನಗಳಲ್ಲಿ ಶ್ರೀ ಚಕ್ರ ಇದೆ ಹಾಗಾದರೆ ಆ ದೇವಸ್ಥಾನಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಮೊದಲನೆಯದಾಗಿ ಕೂರ್ಮ ಪ್ರಸ್ತಾರದ ಬಗ್ಗೆ ನೋಡೋಣ. ಇದು ಅಪರೂಪದ ಶ್ರೀ ಚಕ್ರ ಈ ಪ್ರಕಾರದ ಶ್ರೀಚಕ್ರ ಎಲ್ಲಿದೆ ಎಂದರೆ ಚೆನ್ನೈ ನ ರೈಲ್ವೆ ನಿಲ್ದಾಣದಿಂದ ಸುಮಾರು 15 ಕಿಲೋಮೀಟರ್ ದೂರ ಇರುವ ಮಂಗಾಡು ಕಾಮಾಕ್ಷಿ ದೇವಿ ದೇವಸ್ಥಾನದಲ್ಲಿ ಇದೆ. ಇಲ್ಲಿ ಶಂಕರಾಚಾ ರ್ಯರು ಪೂರ್ವ ಪ್ರಸ್ತಾರದ ಶ್ರೀ ಚಕ್ರವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">