ಬೆಡ್ರೂಮ್ ನಲ್ಲಿ ಈ ಎರಡು ವಸ್ತುಗಳನ್ನು ಇಡಬಾರದು……||
ಬೆಡ್ರೂಮ್ ವಿನ್ಯಾಸ ಮತ್ತು ಅಲ್ಲಿರುವ ವಸ್ತುಗಳ ಮೇಲೆ ವಾಸ್ತು ಪ್ರಮುಖವಾದ ಪಾತ್ರ ವಹಿಸುತ್ತದೆ. ಬೆಡ್ ಇಡುವುದರಿಂದ ಹಿಡಿದು ಯಾವ ದಿಕ್ಕಿಗೆ ತಲೆ ಹಾಕಿ ಮಲಗುತ್ತೀರಿ ಏನೇನು ವಸ್ತುಗಳು ಅಲ್ಲಿ ಇವೆ ಎನ್ನುವುದು ಒಟ್ಟಾರೆ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ಬೆಡ್ರೂಮ್ ವಾಸ್ತು ಹೇಗಿರಬೇಕು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.
ಮಾಸ್ಟರ್ ಬೆಡ್ರೂಮ್ ಯಾವಾಗಲೂ ಮನೆಯ ನೈರುತ್ಯ ಭಾಗದಲ್ಲಿ ಇರಬೇಕು. ಈ ಭಾಗಭೂಮಿಯನ್ನು ಪ್ರತಿನಿಧಿಸುವುದರಿಂದ ಸುಖ ಸಂತೋಷ ನಿಮ್ಮದಾಗಿರುತ್ತದೆ. ದಕ್ಷಿಣ ಅಥವಾ ಪಶ್ಚಿಮಕ್ಕೆ ತಲೆ ಹಾಕಿ ಮಲಗುವಂತೆ ಬೆಡ್ ಹಾಕಬೇಕು. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿಕೊಳ್ಳಲೇಬಾರದು. ಬೆಡ್ರೂಮ್ ಮೇಲ್ಭಾಗದಲ್ಲಿ ಅಡ್ಡಲಾಗಿ ಭೀಮ್ ಹಾದು ಹೋಗಿರಬಾರದು. ಹಾಗೇನಾದರೂ ಇದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.
ಬೆಡ್ರೂಮ್ ನಲ್ಲಿ ದಕ್ಷಿಣ ಅಥವಾ ಪಶ್ಚಿಮ ಗೋಡೆಯತ್ತ ಬೆಡ್ ಹಾಕಬೇಕು. ಹಾಗೆಯೇ ಬೆಡ್ ಗೋಡೆಯಿಂದ ಕನಿಷ್ಠ ನಾಲ್ಕು ಇಂಚು ಅಂತರದಲ್ಲಿ ಇರಬೇಕು. ಭಾರವಾದ ಅಲ್ಮೆರವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಹಾಕಬೇಕು. ಮರದಿಂದ ಮಾಡಿದ ಬೆಡ್ ಅತ್ಯುತ್ತಮ. ಕಬ್ಬಿಣದ ಬೆಡ್ ಉಪಯೋಗಿಸುವುದು ಅಷ್ಟಾಗಿ ಒಳ್ಳೆಯದಲ್ಲ. ಎಲೆಕ್ಟ್ರಾನಿಕ್ ವಸ್ತುಗಳಿಂದ ಹೊರಹೊಮ್ಮುವಂತಹ ಕಿರಣಗಳಿಂದ ಬೆಡ್ ಸಾಕಷ್ಟು ದೂರದಲ್ಲಿ ಇರಬೇಕು.
ಇಲ್ಲವಾದರೆ ನಿದ್ರೆಗೆ ಭಂಗ ಉಂಟಾಗುತ್ತದೆ. ಬೆಡ್ ಎದುರುಗಡೆ ಕನ್ನಡಿ ಇರಬಾರದು. ಬೆಡ್ ಆಕಾರ ಸಮರ್ಪಕವಾಗಿ ಇರಬೇಕು. ಯಾವ್ಯಾವುದೋ ಆಕಾರದ ಬೆಡ್ ಅನ್ನು ತರಲೇ ಬಾರದು. ಕೊಠಡಿಯ ಬಾಗಿಲಿನ ಎದುರಾಗಿ ಬೆಡ್ ಹಾಕಲೇಬಾರದು. ಡಬಲ್ ಬೆಡ್ ಗೆ ಒಂದೇ ಹಾಸಿಗೆಯನ್ನು ಹಾಕಬೇಕು. ಬೆಡ್ರೂಮ್ ಬಾಗಿಲನ್ನು ಹಾಕುವಾಗ ಮತ್ತು ತೆಗೆಯುವಾಗ ಶಬ್ದ ಬರಬಾರದು ಇಲ್ಲವಾದರೆ ಅನಾರೋಗ್ಯ ಮಾನಸಿಕ ಕಿರಿಕಿರಿ ಉಂಟಾಗುತ್ತದೆ.
ಬೆಡ್ರೂಮ್ ನ ನೈರುತ್ಯ ಭಾಗದಲ್ಲಿ ಕಂದು ಬಾದಾಮಿಯಂತಹ ಭೂಮಿ ಸೂಚಕ ಬಣ್ಣವನ್ನು ಹಚ್ಚಬೇಕು. ಬೆಡ್ ಕೆಳಗೆ ಸ್ಟೋರೇಜ್ ಇರಬಾರದು ಒಂದು ವೇಳೆ ಅಲ್ಲಿ ಇದ್ದರೂ ಭಾರವಾದ ಮತ್ತು ಲೋಹದ ವಸ್ತು ಮತ್ತು ಚರ್ಮದ ವಸ್ತುಗಳನ್ನು ಇಡಬಾರದು. ಬೆಡ್ ನ ಹೆಡ್ ಬೋರ್ಡ್ ಭಾಗದಲ್ಲಿ ಯಾವುದೇ ರೀತಿಯ ಗುಜರಿ ವಸ್ತುಗಳನ್ನು ಇಡಬಾರದು. ಮಲಗುವಾಗ ಮತ್ತು ಕೂತಿಕೊಳ್ಳುವಾಗ ಬೆಡ್ ಯಾವುದೇ ಕಾರಣಕ್ಕೂ ಶಬ್ದ ಮಾಡಬಾರದು ಎನ್ನುವುದು ನೆನಪಿನಲ್ಲಿರಲಿ.

ನಾವು ಮಾಡುವಂತಹ ಪ್ರತಿಯೊಂದು ಕೆಲಸವು ವಾಸ್ತುಶಾಸ್ತ್ರದ ಜೊತೆ ಸಂಬಂಧ ಹೊಂದಿದೆ. ಮನೆ ವಸ್ತು ಕೆಲಸ ಇವೆಲ್ಲವೂ ವಾಸ್ತುವನ್ನು ಅವಲಂಬಿಸಿದೆ. ಮನೆ ಹಾಗೂ ವಸ್ತುಗಳನ್ನು ವಾಸ್ತುವಿಗೆ ವಿರುದ್ಧವಾಗಿ ಇಟ್ಟರೆ ಅನೇಕ ಸಮಸ್ಯೆಗಳು ಎದುರಾಗುತ್ತದೆ. ನಾವು ಮಲಗುವ ಕೋಣೆಯು ಕೂಡ ವಾಸ್ತುವಿನ ಜೊತೆ ಸಂಬಂಧ ಹೊಂದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.