ಚಿಕ್ಕ ವಯಸ್ಸಿನಲ್ಲೇ ನಟನೆ ಪ್ರಾರಂಭಿಸಿ ದೊಡ್ಡ ಸ್ಟಾರ್ ಗಳಾಗಿರುವ ಕಲಾವಿದರು……..||
ಚಿಲ್ಡ್ ಆರ್ಟಿಸ್ಟ್ ಆಗಿ ಸಿನಿ ಕರಿಯರ್ ಪ್ರಾರಂಭಿಸಿ ನಂತರ ಸ್ಟಾರ್ ಆಕ್ಟರ್ಸ್ ಗಳಾಗಿ ಅಭಿನಯಿಸಿರುವ ಸಾಕಷ್ಟು ನಟ ನಟಿಯರನ್ನು ನೀವು ನೋಡಿದ್ದೀರಿ. ಆದರೆ ಈ ಸ್ಟಾರ್ ಆಕ್ಟರ್ಸ್ ಗಳು ಕೂಡ ಚೈಲ್ಡ್ ಆರ್ಟಿಸ್ಟ್ ಆಗಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದು ಇವರು ಚೈಲ್ಡ್ ಆರ್ಟಿಸ್ಟ್ ಆಗಿ ಅಭಿನಯಿಸಿದ್ದಾರೆ ಎಂಬುವುದು.
ಅನೇಕರಿಗೆ ತಿಳಿದೆ ಇಲ್ಲ. ಹಾಗಾದರೆ ಈ ದಿನ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿ ನಂತರ ಲೀಡ್ ರೋಲ್ ನಲ್ಲಿಯೂ ಕಮಾಲ್ ಮಾಡಿರುವ ಕೆಲವರು ಗೊತ್ತಿಲ್ಲದೇ ಇರುವಂತಹ ಸ್ಟಾರ್ ನಟರು ಯಾರು ಎಂಬುದನ್ನು ಈ ದಿನ ತಿಳಿಯೋಣ. ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ಭುಜಂಗಯ್ಯನ ದಶಾವತಾರ ಸಿನಿಮಾದ ಮೂಲಕ ಚೈಲ್ಡ್ ಆರ್ಟಿಸ್ಟ್ ಆಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು.
ನಂತರ ಹಲವಾರು ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದು. ಆನೆ ಪಟಾಕಿ ಸಿನಿಮಾದ ಮೂಲಕ ನಾಯಕನಟ ನಾಗಿ ಕಾಣಿಸಿಕೊಂಡಂತಹ ಇವರು ಮಜಾ ವಿತ್ ಸೃಜ ಎಂಬ ಕಾಮಿಡಿ ಶೋ ಮೂಲಕ ಹೆಚ್ಚು ಫೇಮ್ ಗಳಿಸಿದ್ದಾರೆ. ಸಿಂಧು ಮೆನನ್ ನಗುಮುಖದ ಚಲುವೆ ಸಿಂಧು ಮೆನನ್ ಅವರು ಚೈಲ್ಡ್ ಆರ್ಟಿಸ್ಟ್ ಆಗಿ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟಿದ್ದು.
ರಶ್ಮಿ ಮತ್ತು ಹುಲಿಯ ಸಿನಿಮಾದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಕಾಣಿಸಿ ಕೊಂಡಂತಹ ಇವರು ತೆಲುಗಿನ ಭದ್ರಾಚಲಂ ಸಿನಿಮಾದ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ಸೌತ್ ನ ಎಲ್ಲಾ ಭಾಷೆಗಳಲ್ಲೂ ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೀಡ್ ರೋಲ್ ಗಳಲ್ಲಿ ಅಭಿನಯಿಸಿರುವಂತಹ ಇವರು ಕನ್ನಡದಲ್ಲಿ ನಂದಿ, ಖುಷಿ, ಧರ್ಮ, ಇನ್ನು ಅನೇಕ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಧರ್ಮ ಸಿನಿಮಾದಿಂದ ಹೆಚ್ಚು ಫೇಮ್ ಗಳಿಸಿದಂತಹ ಇವರು ಯುಕೆ ಮೂಲದ ಪ್ರಭು ಎನ್ನುವವರನ್ನು ಮದುವೆಯಾಗಿದ್ದು, ಮದುವೆ ನಂತರ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದಾರೆ. ರವಿಚಂದ್ರನ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಂತಹ ನಟನಾಗಿದ್ದು. ಇವರು ಕೂಡ ಕನ್ನಡ ಇಂಡಸ್ಟ್ರಿಯಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಅಭಿನಯಿಸಿದ್ದಾರೆ. ರವಿಚಂದ್ರನ್ ಅವರ ಧೂಮಕೇತು ಮತ್ತು ಕುಲ ಗೌರವ ಎಂಬ ಸಿನಿಮಾದಲ್ಲಿ.
ಚೈಲ್ಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದು ನಂತರ ನಾನೇ ರಾಜ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಂತಹ ಇವರಿಗೆ ಹೆಚ್ಚು ಫೇಮ್ ಗಳಿಸಿ ತಂದು ಕೊಟ್ಟಂತಹ ಸಿನಿಮಾ ಯಾವುದು ಎಂದರೆ ಇವರ ಡೈರೆಕ್ಷನ್ ನಲ್ಲಿ ಮೂಡಿ ಬಂದಂತಹ ಪ್ರೇಮಲೋಕ ಸಿನಿಮಾ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.