ಮಕರ ರಾಶಿ ಗುರು ಗೋಚಾರ ಫಲ….||
ಮಕರ ರಾಶಿಯವರ ಮೂರನೇ ಮನೆಯಿಂದ ಅಂದರೆ ತೃತೀಯ ವ್ಯಯಾದಿಪತಿಯಾಗಿರುವಂತಹ ಗುರು ತೃತಿಯದಿಂದ ಚತುರ್ಥಕ್ಕೆ ಹೋಗುತ್ತಿದ್ದಾನೆ. ಇದರಿಂದ ಮಕರ ರಾಶಿಯವರಿಗೆ ಯಾವ ರೀತಿಯಾಗಿ ಪ್ರಭಾವ ಬೀರಲಿದೆ ಏನು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ. ಅದರ ಜೊತೆ ಗುರು ಚಾಂಡಾಳ ಯೋಗದ ಪ್ರಭಾವವು ಸಹ ಇದರಲ್ಲಿ ಇದೆ. ಹಾಗಾದರೆ ಮೊದಲನೆಯದಾಗಿ ಮಕರ ರಾಶಿಯವರಿಗೆ ಗುರುಚಂಡಾಳ ಯೋಗದಿಂದ ಯಾವ ರೀತಿಯಾದ ಪರಿಣಾಮ ಉಂಟಾಗುತ್ತದೆ ಎಂದು ನೋಡಿದರೆ.
ಗುರು ಮತ್ತು ರಾಹು ಪರಸ್ಪರ ವೈರಿಗಳಾಗಿರುವುದರಿಂದ ಗುರು ಚಾಂಡಾಳ ಯೋಗ ಚತುರ್ಥದಲ್ಲಿ ನಡೆಯಲಿದೆ. ಆದ್ದರಿಂದ ಮಕರ ರಾಶಿಯವರು ಒಂದು ವರ್ಷಗಳ ಕಾಲ ಅದರಲ್ಲೂ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸದಲ್ಲಿ ಸುಮಾರು 6 ತಿಂಗಳಗಳ ಕಾಲ ಅಡಚಣೆಗಳು ಉಂಟಾಗುತ್ತದೆ ಎಂದೇ ಹೇಳಬಹುದು. ಅಂದರೆ ಅಕ್ಟೋಬರ್ ತಿಂಗಳಿನ ತನಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಉಂಟಾಗುತ್ತದೆ.
ಅದರಲ್ಲೂ ಮಕರ ರಾಶಿಯವರು ಬೇರೆಯವರೊಂದಿಗೆ ಮಾತನಾಡು ವಾಗ ನಿಮ್ಮ ಮಾತಿನ ಮೇಲೆ ಹಿಡಿತ ಇದ್ದರೆ ಒಳ್ಳೆಯದು. ಅದರಲ್ಲೂ ಮಕರ ರಾಶಿಯವರಿಗೆ ಸಾಡೇಸಾತ್ ನ ಅಂತ್ಯಭಾಗ ಆಗಿರುವುದರಿಂದ ನಿಮ್ಮ ಮಾತಿನಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಇಲ್ಲವಾದಲ್ಲಿ ನಿಮ್ಮ ಮಾತಿನಿಂದ ಬೇರೆಯವರಿಗೆ ನೋವು ಉಂಟಾಗುತ್ತದೆ ಅಂದರೆ ಅವರು ನಿಮ್ಮನ್ನು ದುರಹಂಕಾರಿ ಎಂದು ಸಹ ತಿಳಿದುಕೊಳ್ಳಬಹುದು.
ಮಕರ ರಾಶಿಯವರು ತಮ್ಮ ತಾಯಿಯ ಆರೋಗ್ಯದಲ್ಲಿ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ ಇಲ್ಲವಾದಲ್ಲಿ ಅವರ ತಾಯಿಗೆ ಸ್ವಲ್ಪಮಟ್ಟಿಗೆ ಅನಾರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಹಾಗೂ ಮಕರ ರಾಶಿಯ ವಿವಾಹಿತ ಸ್ತ್ರೀಯರು ತವರುಮನೆಯ ಆಸ್ತಿಯ ವಿಚಾರವಾಗಿ ಯಾವುದಾದರು ಜಗಳವನ್ನು ಮಾಡಿಕೊಂಡು ಕೋರ್ಟ್ ಮೆಟ್ಟಿಲೇರುವಂತಹ ಸನ್ನಿವೇಶಗಳು ಕೂಡ ಎದುರಾಗಬಹುದು. ಹಾಗೂ ಕೆಲಸ ಕಾರ್ಯ ಮಾಡುತ್ತಿರುವವರಿಗೆ ಅವರು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಪ್ರಮೋಷನ್ ಸಿಗುತ್ತದೆ.
ಆದರೆ ಇದರಿಂದ ಸ್ವಲ್ಪಮಟ್ಟಿಗೆ ಸಮಸ್ಯೆಗಳು ಉಂಟಾಗುತ್ತದೆ. ಉತ್ತಮವಾದ ಕೆಲಸದಿಂದ ನಿಮ್ಮ ಸುತ್ತಮುತ್ತ ಇರುವಂತಹ ಜನರು ನಿಮ್ಮನ್ನು ದೂಷಿಸುತ್ತಾರೆ. ಅಂದರೆ ನಿಮ್ಮ ಸ್ನೇಹಿತರು ನಿಮ್ಮ ಸಿಬ್ಬಂದಿಗಳೆಲ್ಲರೂ ನಿಮ್ಮನ್ನು ಬೇರೆ ದೃಷ್ಟಿಯಿಂದ ನೋಡುತ್ತಿರುತ್ತಾರೆ. ಒಟ್ಟಾರೆಯಾಗಿ ಹೇಳಬೇಕು ಎಂದರೆ ಮಕರ ರಾಶಿಯವರಿಗೆ ಈ ಗುರು ಚಾಂಡಾಳ ಯೋಗದಿಂದ 6 ತಿಂಗಳ ಕಾಲ ನಿಮಗೆ ಯಾವುದೇ ವಿಚಾರದಲ್ಲೂ ಯೋಗ ತಂದು ಕೊಡುವುದಿಲ್ಲ.
ಬದಲಿಗೆ ಕೆಲವೊಂದಷ್ಟು ಸಮಸ್ಯೆಗಳೇ ಎದುರಾಗುತ್ತದೆ. ಆದರೆ ಅಕ್ಟೋಬರ್ ತಿಂಗಳಿನ ನಂತರ ಈ ಗುರು ಗೋಚಾರ ಫಲಗಳು ನಿಮಗೆ ಅನುಕೂಲವನ್ನು ಉಂಟುಮಾಡುತ್ತದೆ. ಆದ್ದರಿಂದ ಯಾವುದೇ ವಿಚಾರವಾಗಿ ನೀವು ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೆ ಅಕ್ಟೋಬರ್ ತಿಂಗಳಿನ ನಂತರ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಹಾಗೂ ಇದು ನಿಮಗೆ ಶುಭಕರವೂ ಕೂಡ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.