ಸಿಂಹ ರಾಶಿಯವರಿಗೆ ಗುರು ಬಲ…………||
ಸಿಂಹ ರಾಶಿಯವರಿಗೆ ಗುರು ಬಲದಿಂದಾಗಿ ಅವರ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಉಂಟಾಗುವಂತದ್ದು ಜೊತೆಗೆ ಪಂಚಮಾಧಿಪತಿ ಯಾಗಿ ಭಾಗ್ಯದಲ್ಲಿ ಬರುತ್ತಾನೆ. ಇದರಿಂದ ಯಾರಿಗೆ ಅಂದರೆ ಸಿಂಹ ರಾಶಿಯವರಿಗೆ ಮಕ್ಕಳು ಇರುವುದಿಲ್ಲವೋ ಅವರಿಗೆ ಈ ಒಂದು ಏಪ್ರಿಲ್ 21ನೇ ತಾರೀಖಿನ ನಂತರ ನಿಮಗೆ ಮಕ್ಕಳ ಭಾಗ್ಯ ಎನ್ನುವುದು ಕೂಡಿಬರುತ್ತದೆ.
ಇನ್ನು ಎರಡನೆಯದಾಗಿ ಪಂಚಮಾಧಿಪತಿಯಾಗಿ ಭಾಗ್ಯ. ಅಂದರೆ ಸಿಂಹ ರಾಶಿಯವರು ಹಲವಾರು ರೀತಿಯ ಕೆಲಸ ಕಾರ್ಯಗಳಿಗೆ ಕೈ ಹಾಕಿರುತ್ತಾರೆ. ಎಲ್ಲ ಕೆಲಸ ಕಾರ್ಯಗಳು ಕೂಡ ಸುಸೂತ್ರವಾಗಿ ನೆರವೇರುವುದು. ಉದಾಹರಣೆಗೆ ಜಮೀನನ್ನು ಕೊಂಡುಕೊಳ್ಳಬೇಕು ಅಥವಾ ಆಸ್ತಿಯನ್ನು ಹೆಚ್ಚಿಸಿಕೊಳ್ಳಬೇಕು ವ್ಯಾಪಾರ ವ್ಯವಹಾರವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದಂತೆ ಅವರು ಯಾವ ವಿಚಾರವಾಗಿ ಹಣವನ್ನು ಹೂಡಿ ಕೆಲಸವನ್ನು ಪ್ರಾರಂಭಿಸುತ್ತಾರೋ ಅದೆಲ್ಲದರಲ್ಲಿಯೂ ಲಾಭ ಹೆಚ್ಚಾಗುವಂತದ್ದು.
ಅದರಲ್ಲೂ ಬಹಳ ಮುಖ್ಯವಾಗಿ ಸಿಂಹ ರಾಶಿಯವರು ನಿಮ್ಮ ಮಕ್ಕಳಿಗೆ ಮದುವೆ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರೆ ಆ ಒಂದು ಒಳ್ಳೆಯ ಗಳಿಗೆ ಕೂಡಿಬರುವಂತದ್ದು. ಹಾಗಾಗಿ ಈ ಎಲ್ಲಾ ಶುಭ ಸಂದರ್ಭಗಳು ನಡೆಯಬೇಕು ಎಂದರೆ ಗುರುವಿನ ಬಲ ಇರಬೇಕು. ಹಾಗಾಗಿ ನಿಮಗೆ ಈ ಒಂದು ಗುರುಬಲದಿಂದ ಮೇಲೆ ಹೇಳಿದಂತೆ ಈ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರವೇರುವಂತದ್ದು.
ಅವಿವಾಹಿತ ಸಿಂಹ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರುವಂತದ್ದು ಅದರಲ್ಲೂ ಎರಡನೇ ಮದುವೆಗೆ ಪ್ರಯತ್ನಿಸುತ್ತಿರುವವರಿಗೂ ಕೂಡ ಈ ಒಂದು ಗುರುವಿನ ಗೋಚಾರ ಫಲದಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದೇ ಹೇಳಬಹುದು. ಅದರಲ್ಲೂ ಹೊಸದಾಗಿ ಹೊಸ ವ್ಯಕ್ತಿಯ ಜೊತೆ ನಿಮ್ಮ ಹೊಸ ಬದುಕನ್ನು ಪ್ರಾರಂಭ ಮಾಡುವುದಕ್ಕೆ ಶುಭ ಸಮಯ ಎಂದೇ ಹೇಳಬಹುದು. ಹಾಗೆಯೇ ಕೆಲವೊಂದಷ್ಟು ತೊಂದರೆಗಳು ಏನು ಎಂದು ನೋಡುವುದಾದರೆ.
ಸಿಂಹ ರಾಶಿಯವರ ಸಹೋದರ ಮತ್ತು ಸಹೋದರಿಯೊಂದಿಗೆ ಮನಸ್ತಾಪಗಳು ಉಂಟಾಗುವಂತದ್ದು. ಇಬ್ಬರ ನಡುವೆ ಅಷ್ಟು ಬಾಂಧವ್ಯ ಚೆನ್ನಾಗಿ ಇರುವುದಿಲ್ಲ ಹಾಗಾಗಿ ಕುಟುಂಬದಲ್ಲಿ ವೈ ಮನಸ್ಸುಗಳು ಏರ್ಪಡುತ್ತಿರುತ್ತದೆ. ಹಾಗಾಗಿ ಈ ವಿಷಯದಲ್ಲಿ ಕೆಲವೊಂದು ಜಾಗರೂಕತೆಯನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಸಿಂಹ ರಾಶಿಯ ಸ್ತ್ರೀಯರಲ್ಲಿ ಅಂದರೆ ಅಕ್ಕ ತಂಗಿ ಇವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ಒಳ್ಳೆಯ ಭಾವನೆ ಇರುವುದಿಲ್ಲ ಇಬ್ಬರ ನಡುವೆ ಸದಾ ಮನಸ್ತಾಪಗಳು ಉಂಟಾಗುತ್ತಿರುತ್ತದೆ.
ಮೇಲೆ ಹೇಳಿದಂತೆ ಎಲ್ಲಾ ಶುಭ ಘಟನೆಗಳು ನಡೆಯುತ್ತದೆ. ಆದರೆ ಈ ಗುರು ಚಾಂಡಾಳ ಯೋಗ ಇರುವುದರಿಂದ ಈ ಎಲ್ಲಾ ಶುಭಯೋಗಗಳು ನಿಮಗೆ ಸುಲಭವಾಗಿ ನೆರವೇರುವುದಿಲ್ಲ ಬದಲಿಗೆ ಬಂದಗತಿಯಲ್ಲಿ ನಿಧಾನವಾಗಿ ದೊರೆಯುತ್ತದೆ. ಒಟ್ಟಾರೆಯಾಗಿ ಮೇಲೆ ಹೇಳಿದಂತೆ ಸಿಂಹ ರಾಶಿಯವರಿಗೆ ಈ ಒಂದು ಏಪ್ರಿಲ್ ತಿಂಗಳಲ್ಲಿ ಈ ರೀತಿಯಾದಂತಹ ಬದಲಾವಣೆಗಳು ನೆರವೇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.